More

    ಅಗಸರಕುಂಟೆಯಿಂದ ಪಾವಗಡಕ್ಕೆ ನೀರು : ಶಾಸಕ ವೆಂಕಟರಮಣಪ್ಪ

    ಪಾವಗಡ: ನಾಗಲಮಡಿಕೆ ಡ್ಯಾಂನಿಂದ ಅಗಸರಕುಂಟೆ ತುಂಬಿಸಿ ನಗರವಾಸಿಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.

    1.47 ಕೋಟಿ ರೂಪಾಯಿ ವೆಚ್ಚದಲ್ಲಿ ಪೆನುಗೊಂಡ ಊರುಬಾಗಿಲು, ಎಪಿಎಂಸಿ ಹಿಂಭಾಗದ ಸಂಪ್ ಹಾಗೂ ಜೈನ್ ಬಡಾವಣೆಯ ನೀರು ಸರಬರಾಜು ಕಾಮಗಾರಿಗಳಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿದ ನಂತರ ಪುರಸಭೆ ಆವರಣದಲ್ಲಿ ಅಂಗವಿಕಲರಿಗೆ ಹೊಲಿಗೆ ಯಂತ್ರ, ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.

    ಪಟ್ಟಣಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ತಪ್ಪಿಸುವ ಸಲುವಾಗಿ ನಾಗಲಮಡಿಕೆ ಡ್ಯಾಂನಿಂದ ಅಗಸರಕುಂಟೆ ತುಂಬಿಸಿ ಕುಡಿಯುವ ನೀರು ಪೂರೈಸಲಾಗುತ್ತದೆ. ಇದರಿಂದ ಅಂತರ್ಜಲಮಟ್ಟ ವೃದ್ಧಿಯಾಗಲಿದೆ ಎಂದರು. ತಾಲೂಕಿನ ವಿವಿಧ ಭಾಗಗಳಲ್ಲಿ ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಭರದಿಂದ ಸಾಗುತ್ತಿತ್ತು, ಕೋವಿಡ್-19 ನಿಂದ ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ವಿಳಂಬವಾಗಿದೆ. ಕಾರ್ಮಿಕ ಇಲಾಖೆಯಿಂದ 5 ಸಾವಿರ ಸಿನಸಿ ಕಿಟ್ ತರಿಸಿದ್ದು, ತಾಲೂಕಿನ ಕಾರ್ಮಿಕರಿಗೆ ಹಂತಹಂತವಾಗಿ ಹೋಬಳಿ ಮಟ್ಟದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದರು.

    ನಂತರ ಪುರಸಭೆಯ ಶೇ.3ರ ಅನುದಾನದಲ್ಲಿ ಅಂಗವಿಕಲರಿಗೆ 8 ತ್ರಿಚಕ್ರ ವಾಹನ, ತರಬೇತಿ ಪಡೆದ 42 ಮಂದಿಗೆ ಹೊಲಿಗೆ ಯಂತ್ರ, ಪುರಸಭೆ ವ್ಯಾಪ್ತಿಯ ಬಡಜನರಿಗೆ 400 ನೀರಿನ ಡ್ರಮ್ ಹಾಗೂ ಪ್ರೋತ್ಸಾಹಧನವನ್ನು ವಿತರಿಸಿದರು. ಮಾಜಿ ಶಾಸಕ ಸೊಮ್ಲಾನಾಯ್ಕಾ, ಪುರಸಭೆ ಸದಸ್ಯರಾದ ಮೊಹಮ್ಮದ್ ಇಮ್ರಾನ್, ಗೊರ್ತಿ ನಾಗರಾಜು, ಸುದೇಶ್‌ಬಾಬು, ಬಾಲಸುಬ್ರಮಣಿ, ಸುಜಾತಾ, ಧನಲಕ್ಷ್ಮಿ, ಅನ್ನಪೂರ್ಣ, ಗೀತಾ, ಗಂಗಮ್ಮ, ರಾಜೇಶ್, ರವಿ, ಮುಖ್ಯಾಧಿಕಾರಿ ನವೀನ್‌ಚಂದ್ರ, ಆರೋಗ್ಯಾಧಿಕಾರಿ ಷಂಶುದ್ದಾಹ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts