More

    VIDEO| ಮಂಗಗಳ ಹಾವಳಿಗೆ ಬ್ರೇಕ್​ ಹಾಕಲು ಕರಡಿ ವೇಷದಲ್ಲಿ ಅವುಗಳ ಮುಂದೆ ಹೋದ ಐಟಿಬಿಪಿ ಸಿಬ್ಬಂದಿ: ಮುಂದೇನಾಯಿತು?

    ನವದೆಹಲಿ: ಉತ್ತರ ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ನಗರೀಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಗಳು ಸೇರಿದಂತೆ ವನ್ಯಜೀವಿಗಳು ತಮ್ಮ ಬೌಂಡರಿಯನ್ನು ದಾಟಿ ಮಾನವ ವಸತಿ ಪ್ರದೇಶಕ್ಕೆ ದಾಂಗುಡಿ ಇಡುತ್ತಿವೆ. ಅರಣ್ಯ ನಾಶದಂತಹ ಮಾನವನ ದುರಾಸೆಯಿಂದಾಗಿ ಮಾನವ-ಪ್ರಾಣಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಒಂದು ಸಮಸ್ಯೆಯಾಗಿ ಪರಿಣಮಿಸಿದೆ.

    ಇಬ್ಬರು ಇಂಡೋ-ಟಿಬೆಟನ್​ ಬಾರ್ಡರ್​ ಪೊಲೀಸ್​ ಸಿಬ್ಬಂದಿ ಕರಡಿಯ ವೇಷ ಧರಿಸಿ ಉತ್ತರಖಂಡದ ಮಿರ್ಥಿ ಶಿಬಿರದ ಬಳಿಗೆ ಗುಂಪಾಗಿ ಬಂದಿದ್ದ ಮಂಗಗಳನ್ನು ಹಿಮ್ಮೆಟ್ಟಿಸಿದ್ದಾರೆ. ಕರಡಿ ವೇಷ ಧರಿಸಿದ್ದ ಐಟಿಬಿಪಿ ಸಿಬ್ಬಂದಿ ನೋಡಿದ ಮಂಗಗಳು ಎದ್ನೋ ಬಿದ್ನೋ ಎಂದು ಐಟಿಬಿಪಿ ಶಿಬಿರದಿಂದ ಕಾಲ್ಕಿತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಜಾಲತಾಣದಲ್ಲಿ ವಿಡಿಯೋ ಶೇರ್​ ಆದಾಗಿನಿಂದ ಈವರೆಗೂ 24 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 800ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದೆ. ವಿಡಿಯೋ ನೋಡಿದವರಂತೂ ನಗುವಿನ ಅಲೆಯಲ್ಲಿ ತೇಲಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

    ವಿಡಿಯೋಗೆ ಹಿನ್ನೆಲೆ ಧ್ವನಿ ಇದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಭಾರತೀಯ ಜನತಾ ಪಾರ್ಟಿ ಅಭಿಮಾನಿಗಳ ಟ್ವಿಟರ್​ ಪೇಜ್​ನಲ್ಲಿ ಕಾಮೆಂಟ್ ಮಾಡಲಾಗಿದೆ​. ಪ್ರಾಣಿಗಳಿಗೆ ಯಾವುದೇ ಹಾನಿ ಮಾಡದೆ ಸುರಕ್ಷಿತವಾಗಿ ಅವುಗಳನ್ನು ತೆರುವುಗೊಳಿಸಿದ್ದಕ್ಕೆ ಸಿಬ್ಬಂದಿಯನ್ನು ಮತ್ತೋರ್ವ ನೆಟ್ಟಿಗ ಮೆಚ್ಚಿಕೊಂಡಿದ್ದಾರೆ. (ಏಜೆನ್ಸೀಸ್​)

    VIDEO| ಗ್ರಾಮಸ್ಥರನ್ನು ಅಟ್ಟಿಸಿಕೊಂಡು ಗ್ರಾಮಕ್ಕೆ ಬಂದ ಸಿಂಹ, ಮುಂದೆ ಏನಾಯಿತು?

    VIDEO: ಜಪಾನಿನಲ್ಲಿ 25 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಟ್ರಕ್​ ಡ್ರೈವರ್​ನ ಪ್ರವರ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts