More

    VIDEO | ಕೇಂದ್ರ ಸಚಿವರ ವಾಹನದ ಮೇಲೆ ‘ಟಿಎಂಸಿ ಗೂಂಡಾ’ಗಳಿಂದ ಅಟ್ಯಾಕ್​ !

    ಕೊಲ್ಕತ : ಕೇಂದ್ರ ಸಚಿವ ವಿ. ಮುರಳೀಧರನ್​ ಅವರು ಪಶ್ಚಿಮ ಬಂಗಾಳದ ವೆಸ್ಟ್​ ಮಿಡ್ನೊಪೋರ್​ಗೆ ಹೋದ ಸಂದರ್ಭದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷದ ಗೂಂಡಾಗಳು ಅವರ ಕಾನ್ವಾಯ್​ ಮೇಲೆ ಅಟ್ಯಾಕ್ ಮಾಡಿದ್ದಾರೆಂದು ಹೇಳಿದ್ದಾರೆ. ಈ ಬಗ್ಗೆ ತಮ್ಮ ಕಾರಿನ ಮೇಲೆ ಕಲ್ಲುಗಳನ್ನು ಎಸೆದು, ಕೋಲು ಹಿಡಿದು ಹಲ್ಲೆ ನಡೆಸಲು ಮುಂದಾಗಿರುವ ಜನರ ದೃಶ್ಯಗಳಿರುವ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅವರು​ ಶೇರ್ ಮಾಡಿದ್ದಾರೆ.

    ಇಂದೇ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ವರದಿಯಾಗುತ್ತಿರುವ ಹಿಂಸಾಚಾರದ ಘಟನೆಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರದ ನಾಲ್ಕು ಸದಸ್ಯರುಳ್ಳ ಸತ್ಯಶೋಧನಾ ಸಮಿತಿಯು ರಾಜ್ಯಕ್ಕೆ ಭೇಟಿ ನೀಡಿದೆ. ವಿಧಾನಸಭಾ ಚುನಾವಣೆಯಲ್ಲಿ ಪರಾಜಯ ಹೊಂದಿದ ಬಿಜೆಪಿಗೆ ಸೇರಿದ ಕಾರ್ಯಕರ್ತರು ಮತ್ತು ಅವರ ಕುಟುಂಬಗಳ ಮೇಲೆ ಹಿಂಸಾಚಾರ ನಡೆಯುತ್ತಿದೆ ಎಂಬ ಹಲವು ಆರೋಪಗಳು ಕೇಳಿಬಂದಿವೆ.

    ಇದನ್ನೂ ಓದಿ: ತುಮಕೂರು, ಚಾಮರಾಜನಗರ, ಮಂಡ್ಯದಲ್ಲಿ ಆಕ್ಸಿಜನ್ ಸಮಸ್ಯೆ ಉಲ್ಬಣ

    ಈ ಸಮಯದಲ್ಲಿ ಟಿಎಂಸಿ ಗೂಂಡಾಗಳು ತಮ್ಮ ಕಾನ್ವಾಯ್​​ ಮೇಲೆ ಅಟ್ಯಾಕ್​ ಮಾಡಿ, ಕಾರಿನ ಕಿಟಕಿಯ ಗಾಜು ಒಡೆದು, ವೈಯಕ್ತಿಕ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಸಚಿವ ಮುರಳೀಧರನ್, ಈ ಕಾರಣದಿಂದ ತಮ್ಮ ಬಂಗಾಳ ಪ್ರವಾಸವನ್ನು ಮೊಟಕುಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.

    “ಒಬ್ಬ ಸಚಿವರ ಕಾನ್ವಾಯ್​ ಮೇಲೆ ದಾಳಿ ನಡೆಸುತ್ತಾರೆ ಎಂದರೆ, ಬಂಗಾಳದಲ್ಲಿ ಯಾರು ಸುರಕ್ಷಿತವಾಗಿದ್ದಾರೆ ? ಇದು ಸರ್ಕಾರ ಪ್ರಾಯೋಜಿಸುತ್ತಿರುವ ಹಿಂಸಾಚಾರವಾಗಿದೆ. ನಾವು ಬಂಗಾಳದಲ್ಲಿ ನಡೆಯುತ್ತಿರುವ ಹಿಂಸೆಯನ್ನು ಖಂಡಿಸುತ್ತೇವೆ. ತಪ್ಪಿತಸ್ಥರನ್ನು ದಂಡಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಮತ್ತೊಬ್ಬ ಕೇಂದ್ರ ಸಚಿವರಾದ ಬಿಜೆಪಿ ನಾಯಕ ಪ್ರಕಾಶ್​ ಜಾವಡೇಕರ್ ಹೇಳಿದ್ದಾರೆ.

    ಬಂಗಾಳದ ಹಿಂಸಾಚಾರದಲ್ಲಿ 14 ಬಿಜೆಪಿ ಕಾರ್ಯಕರ್ತರು ಸತ್ತಿದ್ದು, ಸುಮಾರು ಒಂದು ಲಕ್ಷ ಜನ ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಿದ್ದಾರೆ ಎಂದು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಹೇಳಿದ್ದಾರೆ. ಮತ್ತೊಂದೆಡೆ ಭಾರೀ ಬಹುಮತದಿಂದ ಗೆದ್ದ ಟಿಎಂಸಿ ಪಕ್ಷದ ಮುಖ್ಯಸ್ಥೆ ಮತ್ತು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಬಿಜೆಪಿಯೇ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಟಿಎಂಸಿಯ ಇಬ್ಬರು ಸದಸ್ಯರನ್ನು ಬಿಜೆಪಿ ಬೆಂಬಲಿಗರು ಥಳಿಸಿ ಸಾಯಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. (ಏಜೆನ್ಸೀಸ್)

    ಭಾರತದ ಪ್ರಯಾಣಿಕರನ್ನು ನಿಷೇಧಿಸಿದ ಶ್ರೀಲಂಕಾ

    ಕ್ರೀಡಾಂಗಣದ ಹೊರಗೆ ಕಾದಾಡಿದ ಕುಸ್ತಿಪಟುಗಳು ! ಒಲಂಪಿಕ್​ ಚಾಂಪಿಯನ್​ ಸುಶೀಲ್​ಕುಮಾರ್​ ವಿರುದ್ಧ ಎಫ್​.ಐ.ಆರ್​.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts