More

    VIDEO | ಕರೊನಾದಿಂದ ಗುಣಮುಖರಾದ ವೃದ್ಧೆಯ ಲವಲವಿಕೆ ನೋಡಿ !

    ಬೆಂಗಳೂರು : ಕರೊನಾ ಸೋಂಕಿನಿಂದ ಗುಣಮುಖರಾಗಿರುವ 75 ವರ್ಷದ ವೃದ್ಧೆಯೊಬ್ಬರು ಲವಲವಿಕೆಯಿಂದ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಒಡನಾಡುತ್ತಿರುವ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಕರೊನಾ ವಿರುದ್ಧ ಆತ್ಮಸ್ಥೈರ್ಯದಿಂದ ಹೋರಾಡುವುದಕ್ಕೆ ಹಲವರಿಗೆ ಈ ಅಜ್ಜಿ ಸ್ಪೂರ್ತಿಯಾಗಿದ್ದಾರೆ.

    ಆಕ್ಸಿಜನ್ ಮಟ್ಟ ಕಡಿಮೆಯಾಗಿ ಹೆಬ್ಬಾಳ ಕೋವಿಡ್​ ಆರೈಕೆ ಸೆಂಟರ್​ ಸೇರಿದ್ದ ವೃದ್ಧೆಯು ಸೋಂಕಿನ ಆತಂಕ ಬಿಟ್ಟು, ಆತ್ಮಸ್ಥೈರ್ಯದಿಂದ ಗುಣಮುಖರಾಗಿದ್ದಾರೆ. ಮನೆಗೆ ಹೋಗಲು ಸಿದ್ಧರಾಗುತ್ತಿರುವಾಗ ಆರೋಗ್ಯ ಸಿಬ್ಬಂದಿಯೊಂದಿಗೆ ಉತ್ಸಾಹದ ಒಡನಾಟ ನಡೆಸಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಬೆಂಗಳೂರು ಕೋವಿಡ್ ವಾರ್​​ ರೂಮ್​ನ ನೋಡಲ್ ಅಧಿಕಾರಿ ಡಾ. ಭಾಸ್ಕರ್ ರಾಜಕುಮಾರ್​ ಟ್ವಿಟರ್​​ನಲ್ಲಿ ಶೇರ್ ಮಾಡಿದ್ದಾರೆ.

    ‘ಹೈಪಾಕ್ಸಿಕ್’​ ಸ್ಥಿತಿಯಲ್ಲಿ ಅಡ್ಮಿಟ್​ ಆದರು, ‘ಹೈಪರಾಕ್ಟೀವ್’ ಸ್ಥಿತಿಯಲ್ಲಿ ಡಿಸ್ಚಾರ್ಜ್​ ಆಗುತ್ತಿದ್ದಾರೆ ಎಂದು ರಾಜ್​ಕುಮಾರ್​ ಅವರು ಟಿಪ್ಪಣಿ ಬರೆದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ತೆರನ ಸಣ್ಣ ಸಣ್ಣ ಸಂತೋಷದ ಕ್ಷಣಗಳೇ ಬದುಕಿನಲ್ಲಿ ಮುಖ್ಯ ಎಂದಿದ್ದಾರೆ. ವೈದ್ಯರು-ದಾದಿಯರು ರೋಗಿಗಳ ಬಗ್ಗೆ ಹೊಂದಿರುವ ಆತ್ಮೀಯತೆಯನ್ನೂ ಈ ವಿಡಿಯೋದಲ್ಲಿ ಕಾಣಬಹುದು.

    ಯುವಕನ ಮೊಬೈಲ್ ಒಡೆದು ಕಪಾಳಕ್ಕೆ ಹೊಡೆದ ಜಿಲ್ಲಾಧಿಕಾರಿ ಸಸ್ಪೆಂಡ್

    ‘ಅಮ್ಮ ಬಿಟ್ಟು ಹೋದರು… ಅವರ ನೆನಪುಗಳನ್ನು ಉಳಿಸಿಕೊಡಿ’; ಬಾಲಕಿಯ ಈ ಮನವಿ ಕರುಳುಹಿಂಡುವಂಥದ್ದು !

    ರಾಜ್ಯದಲ್ಲಿ ಕರೊನಾ ಆರ್​​ನಾಟ್​ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts