ಡೆನ್ವರ್ : ಘೇಂಡಾಮೃಗವೊಂದು ಕೀಬೋರ್ಡ್ ನುಡಿಸಿರುವ ವಿಸ್ಮಯಕಾರಿ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕದ ಕೊಲರಾಡೊದಲ್ಲಿರುವ ಡೆನ್ವರ್ ಜೂನಲ್ಲಿರುವ ‘ಬಂಧು’ ಎಂಬ ಈ ಗ್ರೇಟರ್ ಒನ್-ಹಾರ್ನಡ್ ರೈನೋಗೆ ಇದೀಗ 12 ವರ್ಷ ತುಂಬಿದೆ. ಅದರ ಹುಟ್ಟಿದಹಬ್ಬದ ಸಂದರ್ಭಕ್ಕೆ ಅದು ಎಲ್ಲರಿಗೂ ತನ್ನ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಟ್ರೀಟ್ ಕೊಟ್ಟಿದೆ.

ಡೆನ್ವರ್ ಜೂನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ‘ಹ್ಯಾಪಿ ಬರ್ತ್ಡೇ ಬಂಧು!’ ಎಂದು ಪೋಸ್ಟ್ ಆಗಿರುವ ಈ ವಿಡಿಯೋದಲ್ಲಿ, ಘೇಂಡಾಮೃಗವು ತಾನೇ ರಚಿಸಿರುವ ಗೀತೆಯನ್ನು ತನ್ನ ಮೇಲ್ತುಟಿಯನ್ನು ಬಳಸಿ ನುಡಿಸುತ್ತಿರುವುದನ್ನು ಸೆರೆ ಹಿಡಿದಿದ್ದಾರೆ. ನೀವೂ ನೋಡಿ ಆನಂದಿಸಿ. (ಏಜೆನ್ಸೀಸ್)