More

    ‘ಪ್ರಯಾಣಿಕರೇ ಗಮನಿಸಿ… ಮಾಸ್ಕ್ ಸರಿಯಾಗಿ ಧರಿಸದಿದ್ದಲ್ಲಿ, ವಿಮಾನದಿಂದ ಇಳಿಸಲಾಗುವುದು’!

    ನವದೆಹಲಿ: ಕರೊನಾದ ಎರಡನೇ ಅಲೆ ಏಳುವ ಭಯವಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತಹ ಅತ್ಯಗತ್ಯ ಮುನ್ನೆಚ್ಚರಿಕೆ ಬಗ್ಗೆ ಅಸಡ್ಡೆ ತೋರುವ ಜನರಿಗೆ ಇದೋ ಎಚ್ಚರಿಕೆ ಘಂಟೆ! ವಿಮಾನಗಳಲ್ಲಿ ಪ್ರಯಾಣ ಮಾಡುವ ಯಾತ್ರಿಗಳು ಇನ್ನು ಮುಂದೆ ಮಾಸ್ಕ್​ ಸರಿಯಾಗಿ ಧರಿಸದಿರುವುದು ಇಲ್ಲವೇ ಸಾಮಾಜಿಕ ಅಂತರ ಪಾಲಿಸದಿರುವುದು ಕಂಡುಬಂದಲ್ಲಿ ಗಂಭೀರ ಎಚ್ಚರಿಕೆ ನೀಡಲಾಗುವುದು. ಆದಾಗ್ಯೂ ನಿರ್ಲಕ್ಷ್ಯ ತೋರಿದಲ್ಲಿ ಏರ್​ಲೈನ್ಸ್​ನವರು ಅಂತಹ ಪ್ರಯಾಣಿಕರನ್ನು ವಿಮಾನ ಹೊರಡುವ ಮುಂಚೆ ಕೆಳಗಿಳಿಸಬಹುದು; ಇಲ್ಲವೇ, ವಿಮಾನ ಹಾರುತ್ತಿರುವ ಪಕ್ಷದಲ್ಲಿ ‘ಅನ್​ರೂಲಿ ಪ್ಯಾಸೆಂಜರ್’ ಎಂದು ನಾಮಕರಣ ಮಾಡಿ ಮುಂದೆ ಏರ್​ ಟಿಕೆಟ್​ ಸಿಗದಂತೆ ಮಾಡಬಹುದು.

    ಈ ನಿಟ್ಟಿನಲ್ಲಿ ಹೊಸದಾಗಿ ಕಠಿಣ ಮಾರ್ಗಸೂಚಿಗಳನ್ನು ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಜಾರಿಮಾಡಿದೆ. “ವಿಮಾನ ಯಾನದ ವೇಳೆ ಪೂರ್ಣ ಸಮಯ ಪ್ರಯಾಣಿಕರು ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸಬೇಕು. ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಮಯದಲ್ಲಿ ಮಾಸ್ಕ್ಅನ್ನು ಮೂಗಿನ ಕೆಳಗೆ ಇಳಿಸುವ ಹಾಗಿಲ್ಲ” ಎಂದು ಈ ಹೊಸ ಮಾರ್ಗಸೂಚಿಯಲ್ಲಿ ನಿರ್ದಿಷ್ಟವಾಗಿ ಸೂಚಿಸಲಾಗಿದೆ.

    ಇದನ್ನೂ ಓದಿ: ಒಂದೇ ಡೋಸ್​ ಬೇಕಾಗುವ ಹೊಸ ಕರೊನಾ ಲಸಿಕೆಗೆ ಡಬ್ಲ್ಯೂಹೆಚ್​ಒ ಅನುಮೋದನೆ

    ಇತ್ತೀಚೆಗೆ ಕೊಲ್ಕತಾದಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿದ ದೆಹಲಿ ಹೈಕೋರ್ಟ್​ನ ನ್ಯಾಯಾಧೀಶರಾದ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರು ಯಾತ್ರಿಗಳು ಮಾಸ್ಕ್​ಗಳನ್ನು ಸರಿಯಾಗಿ ಧರಿಸದೆ, ಆ ಬಗ್ಗೆ ಅಸಡ್ಡೆ ಪ್ರದರ್ಶಿಸುತ್ತಿದ್ದುದನ್ನು ಗಮನಿಸಿದರಂತೆ. ಅದರಿಂದಾಗಿ ಈ ವಿಚಾರದ ಬಗ್ಗೆ ಸುಯೋ ಮೋಟೋ ಕಾಗ್ನಿಜೆನ್ಸ್​ ತೆಗೆದುಕೊಂಡ ನ್ಯಾಯಮೂರ್ತಿಗಳು, ವಿಮಾನಗಳಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಕೋವಿಡ್​ ಪ್ರೊಟೊಕಾಲ್ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಕ್ತ ಕ್ರಮ ಕೈಗೊಳ್ಳಲು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ)ಗೆ ಮಾರ್ಚ್​ 10 ರಂದು ನಿರ್ದೇಶನ ನೀಡಿದರು.

    ಈ ಹಿನ್ನೆಲೆಯಲ್ಲಿ ಕರೊನಾ ನಿಯಂತ್ರಣದ ದೃಷ್ಟಿಯಿಂದ ಮಾಸ್ಕ್ಅನ್ನು ಸರಿಯಾಗಿ ಧರಿಸದ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸುವುದೂ ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಡಿಜಿಸಿಎ ವಿವಿಧ ಏರ್​ಲೈನ್​ಗಳಿಗೆ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರಗಳಿಗೆ ಮಾರ್ಗಸೂಚಿಯನ್ನು ಜಾರಿ ಮಾಡಿದೆ. ಇದರನ್ವಯ ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದೆ. ತನ್ನ ಈ ಮಾರ್ಗಸೂಚಿಗಳನ್ನು ಟ್ವಿಟರ್​ನಲ್ಲಿ ಕೂಡ ಶೇರ್ ಮಾಡಿ, ಡಿಜಿಸಿಎ, ವಿಮಾನಯಾತ್ರಿಗಳಿಗೆ ಎಚ್ಚರಿಕೆ ನೀಡಿದೆ.

    ವಿಮಾನ ನಿಲ್ದಾಣ ಪ್ರವೇಶಿಸುವ ಮುಂಚೆ ಸರಿಯಾಗಿ ಮಾಸ್ಕ್ ಧರಿಸಿರುವಂತೆ ಪೊಲೀಸ್​ ಮತ್ತು ಸೆಕ್ಯುರಿಟಿ ಸಿಬ್ಬಂದಿ ಪೂರ್ಣ ನಿಗಾ ವಹಿಸಬೇಕು. ವಿಮಾನ ನಿಲ್ದಾಣದ ಒಳಗೆ ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದಿರುವುದು ಕಂಡುಬಂದರೆ ಸೂಕ್ತ ಎಚ್ಚರಿಕೆ ನೀಡಬೇಕು. ತದನಂತರವೂ ನಿಯಮ ಪಾಲಿಸದಿದ್ದಲ್ಲಿ ಸೆಕ್ಯುರಿಟಿ ಅಧಿಕಾರಿಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ರಕ್ತದ ಸ್ಯಾಂಪಲ್ ಕೂಡ ಪಡೆಯದೆ ಕೋವಿಡ್​ ನೆಗೆಟೀವ್ ವರದಿ !

    VIDEO| ‘ಇದಪ್ಪಾ ನಿಜವಾದ ಕ್ರಿಕೆಟ್​ !’ ಮೈಕೆಲ್ ವಾಘನ್ ಶೇರ್​ ಮಾಡಿದ ವಿಡಿಯೋ ನೋಡಿ

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts