More

    ರಾಜಕೀಯರಂಗಕ್ಕಿಲ್ಲ ಪ್ರವೇಶ: ನನ್ನನ್ನು ಎಚ್ಚರಿಸಿದ್ದಾನೆ ದೇವರು!

    ಚೆನ್ನೈ: ಅಣ್ಣಾತ್ತೆ ಸಿನಿಮಾ ಶೂಟಿಂಗ್ ವೇಳೆ ರಕ್ತದೊತ್ತಡ ಕಾರಣಕ್ಕೆ ಹೈದರಾಬಾದ್​ನ ಆಸ್ಪತ್ರೆಗೆ ದಾಖಲಾಗಿ ಮೂರು ದಿನ ಚಿಕಿತ್ಸೆ ಪಡೆದಿದ್ದ ಸೂಪರ್ ಸ್ಟಾರ್ ರಜಿನಿಕಾಂತ್ ಇಂದು ದಿಢೀರ್ ರಾಜಕೀಯ ರಂಗ ಪ್ರವೇಶದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ. ಅವರ ಪತ್ರದ ಸಾರ ಇದು..

    ಅಣ್ಣಾತ್ತೆ ಸಿನಿಮಾ ಶೂಟಿಂಗ್​ಗಾಗಿ ನಾನು ಹೈದರಾಬಾದ್​ಗೆ ಹೋಗಿದ್ದೆ. ನಿತ್ಯವೂ ನಮ್ಮ ಸಿನಿಮಾ ತಂಡದ 120 ಜನರ ಕೋವಿಡ್ ಟೆಸ್ಟ್ ಮಾಡಿಸುತ್ತಿದ್ದೆವು. ಪ್ರತಿಯೊಬ್ಬರೂ ಫೇಸ್​ ಮಾಸ್ಕ್ ಧರಿಸುತ್ತಿದ್ದೆವು. ಶೂಟಿಂಗ್ ಬಹಳಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಯುತ್ತಿತ್ತು. ಅಷ್ಟೊಂದು ಮುಂಜಾಗ್ರತೆ ತೆಗೆದುಕೊಂಡರೂ ನಮ್ಮಲ್ಲಿ ನಾಲ್ವರಿಗೆ ಕರೊನಾ ಸೋಂಕು ತಗುಲಿತು. ನಿರ್ದೇಶಕರು ಕೂಡಲೇ ಶೂಟಿಂಗ್ ನಿಲ್ಲಿಸಿದ್ರು, ನನ್ನನ್ನೂ ಸೇರಿ ಎಲ್ಲರೂ ಕೋವಿಡ್ ಟೆಸ್ಟ್​​ಗೆ ಒಳಪಟ್ಟೆವು. ನನಗೆ ನೆಗೆಟಿವ್ ವರದಿ ಬಂತಾದರೂ, ರಕ್ತದೊತ್ತಡ ವಿಪರೀತ ಇತ್ತು.

    ಇದನ್ನೂ ಓದಿ: ಹೊಸ ವರ್ಷ ಹೊಸ ಪಕ್ಷ, ಡಿಸೆಂಬರ್ 31ಕ್ಕೆ ಮಹತ್ವದ ಘೋಷಣೆ ಎಂದ ಸೂಪರ್​ ಸ್ಟಾರ್ ರಜಿನಿ !

    ಅದೇನಾದರೂ ಮುಂದುವರಿದಿದ್ದರೆ ನಾನು ಕಸಿಮಾಡಿಸಿಕೊಂಡಿದ್ದ ಕಿಡ್ನಿಗಳಿಗೆ ಗಂಭೀರ ತೊಂದರೆಗಳಾಗುತ್ತಿದ್ದವು. ವೈದ್ಯರ ಸಲಹೆ ಮೇರೆಗೆ ನಾನು ಮೂರು ದಿನ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು. ನಿರ್ಮಾಪಕ ಕಲಾನಿಥಿ ಮಾರನ್​ ಅವರು ನನ್ನ ಆರೋಗ್ಯಸ್ಥಿತಿ ನೋಡಿ ಉಳಿದ ಶೂಟಿಂಗ್ ಮುಂದೂಡಿದ್ರು. ಪರಿಣಾಮ ಬಹಳಷ್ಟು ಜನರ ಕೆಲಸ ಹೋಯಿತು. ಕೋಟ್ಯಂತರ ರೂಪಾಯಿ ನಷ್ಟವೂ ಆಯಿತು. ಇದೆಲ್ಲವೂ ನನ್ನ ಶಾರೀರಿಕ ಆರೋಗ್ಯಸ್ಥಿತಿಯ ಕಾರಣಕ್ಕೆ ಉಂಟಾಗಿದ್ದು. ಭಗವಂತ ನನಗೆ ಕೊಟ್ಟ ಎಚ್ಚರಿಕೆ ಇದು ಎಂದೇ ನಾನು ನಂಬುತ್ತೇನೆ.

    ಇದನ್ನೂ ಓದಿ: ಸೂಪರ್​ಸ್ಟಾರ್​ ರಜಿನಿಕಾಂತ್​ ಆಸ್ಪತ್ರೆಗೆ ದಾಖಲು

    ಒಂದೊಮ್ಮೆ ಪಕ್ಷವನ್ನು ಸ್ಥಾಪಿಸಿದ ಬಳಿಕ ನಾನು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಷ್ಟೇ ಪ್ರಚಾರ ಅಭಿಯಾನ ಮಾಡಿದ್ರೆ ಅದನ್ನು ಸಾವಿರಾರು, ಲಕ್ಷಾಂತರ ಜನರು ನೋಡಬಹುದು. ಆದರೆ, ಚುನಾವಣೆ ಗೆಲ್ಲಲ್ಲು, ಜನರ ನಡುವೆ ಇದ್ದು ರಾಜಕೀಯ ಬದಲಾವಣೆ ತರುವುದಕ್ಕೆ ಅದು ನೆರವಾಗುವುದಿಲ್ಲ. ಈ ವಾಸ್ತವವನ್ನು ರಾಜಕೀಯ ಅನುಭವ ಇರುವಂಥವರು ಯಾರೂ ಅಲ್ಲಗಳೆಯಲಾರರು.

    ಇದನ್ನೂ ಓದಿ:  ಆಸ್ಪತ್ರೆಯಿಂದ ಬಿಡುಗಡೆಯಾದ್ರು ಸೂಪರ್​ ಸ್ಟಾರ್ ರಜಿನಿಕಾಂತ್

    120 ಜನರೊಂದಿಗೆ ಇದ್ದೇ ನನ್ನ ಆರೋಗ್ಯ ಪರಿಸ್ಥಿತಿ ಹಾಗಾದ ಕಾರಣ, ರಾಜಕೀಯ ಸೇರಿದರೆ ನಾನು ಜನರನ್ನು ಭೇಟಿ ಆಗಬೇಕು. ಸಭೆಗಳಲ್ಲಿ ಪಾಲ್ಗೊಳ್ಳಬೇಕು. ಪ್ರಚಾರಕ್ಕೆ ಹೋಗಬೇಕು. ಸಾವಿರಾರು, ಲಕ್ಷಾಂತರ ಜನರನ್ನು ಭೇಟಿಯಾಗಬೇಕು. ಕರೊನಾ ಇರುವ ಸಂದರ್ಭದಲ್ಲಿ ನಾನು ಈ ಕೆಲಸ ಮಾಡುತ್ತ ಹೋದರೆ, ನನ್ನ ಆರೋಗ್ಯ ಕೈಕೊಡಬಹುದು. ಮತ್ತೆ ಆಸ್ಪತ್ರೆ, ಚಿಕಿತ್ಸೆ ಇತ್ಯಾದಿ ಕಣ್ಣೆದುರು ಬಂತು. ಆಗ ನನ್ನ ಬಗ್ಗೆ ಜನ ಕೆಟ್ಟದಾಗಿ ಮಾತನಾಡಲಾರಂಭಿಸುತ್ತಾರೆ. ಅಂತಹ ಸನ್ನಿವೇಶ ಸೃಷ್ಟಿಸಿ ನನ್ನನ್ನು ನಂಬಿ ಬಂದವರನ್ನು ಬಲಿಪಶು ಮಾಡಲಾರೆ. ಆದ್ದರಿಂದ ನಾನು ಯಾವುದೇ ರಾಜಕೀಯ ಪಕ್ಷ ಹುಟ್ಟುಹಾಕಲ್ಲ. ರಾಜಕೀಯ ಪ್ರವೇಶವನ್ನೂ ಮಾಡುವುದಿಲ್ಲ. ಈ ನಿರ್ಣಯವನ್ನು ತೆಗೆದುಕೊಳ್ಳಬೇಕಾದರೆ ನಾನು ಎಷ್ಟು ನೋವು ಅನುಭವಿಸಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು. ನನ್ನನ್ನು ಕ್ಷಮಿಸಿ ಬಿಡಿ. ನನ್ನ ಈ ನಿರ್ಣಯ ರಜಿನಿ ಫ್ಯಾನ್ಸ್​ ಮತ್ತು ನನ್ನ ರಾಜಕೀಯ ಎಂಟ್ರಿ, ಪಕ್ಷ ಸ್ಥಾಪನೆ ಎದುರುನೋಡುತ್ತಿದ್ದವರಿಗೆ ನಿರಾಶೆ ತರಬಹುದು. ಆರ್​ಎಂಎಂ ನನ್ನ ಮಾತುಗಳನ್ನು ಪಾಲಿಸುತ್ತದೆ. ಅದೇ ಶಿಸ್ತು ಮುಂದುವರಿಸುತ್ತದೆ ಎಂಬ ನಂಬಿಕೆ ಇದೆ. ತಮಿಳುನಾಡಿನ ಜನರಿಗೆ ನೀಡಿದ್ದ ಮಾತನ್ನು ನೆರವೇರಿಸಲು ಆಗದ ಸ್ಥಿತಿಗೆ ನನ್ನ ಆರೋಗ್ಯ ತಲುಪಿದೆ. ಆದ್ದರಿಂದ ಅವರಲ್ಲಿ ನಾನು ಕ್ಷಮೆಯಾಚಿಸುತ್ತೇನೆ.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಬಿಗ್ ಬ್ರೇಕಿಂಗ್ – ರಾಜಕೀಯದಿಂದ ಹಿಂದೆ ಸರಿದ್ರು ರಜಿನಿಕಾಂತ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts