More

    ಸೋಲಿಗೆ ಮಧ್ಯಮ ಕ್ರಮಾಂಕವನ್ನು ದೂರಿದ ಡೇವಿಡ್ ವಾರ್ನರ್

    ಅಬುಧಾಬಿ: ಕೋಲ್ಕತ ನೈಟ್‌ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದರೂ ನಿರೀಕ್ಷಿತ ಮೊತ್ತ ಕೂಡಿ ಹಾಕಲು ಸಾಧ್ಯವಾಗದೆ ಸೋಲು ಕಂಡಿದ್ದಕ್ಕೆ ಸನ್‌ರೈಸರ್ಸ್‌ ನಾಯಕ ಡೇವಿಡ್ ವಾರ್ನರ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗವನ್ನು ದೂರಿದ್ದಾರೆ.

    ಸನ್‌ರೈಸರ್ಸ್‌ ತಂಡ 4 ವಿಕೆಟ್‌ಗೆ 142 ರನ್ ಸೇರಿಸಲಷ್ಟೇ ಶಕ್ತವಾದರೆ, ಕೆಕೆಆರ್ ತಂಡ ಆರಂಭಿಕ ಶುಭಮಾನ್ ಗಿಲ್ (70 *ರನ್, 62 ಎಸೆತ, 5 ಬೌಂಡರಿ, 2 ಸಿಕ್ಸರ್) ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ 18 ಓವರ್‌ಗಳಲ್ಲೇ 3 ವಿಕೆಟ್‌ಗೆ 145 ರನ್ ಪೇರಿಸಿ ಜಯಿಸಿತು. ಗಿಲ್‌ಗೆ ಇವೊಯಿನ್ ಮಾರ್ಗನ್ (42*ರನ್, 29 ಎಸೆತ, 3 ಬೌಂಡರಿ, 2 ಸಿಕ್ಸರ್) ಸಮರ್ಥ ಬೆಂಬಲ ಒದಗಿಸಿದರು.

    ‘ಎದುರಾಳಿ ಬೌಲರ್‌ಗಳ ಮೇಲೆ ನಾವು ಹೆಚ್ಚಿನ ಒತ್ತಡ ಹೇರಬಹುದಾಗಿತ್ತು. ಮಧ್ಯಮ ಓವರ್‌ಗಳಲ್ಲಿ ಇನ್ನಷ್ಟು ಬೌಂಡರಿಗಳು ಬರಬೇಕಾಗಿತ್ತು. ಆದರೆ ಹೆಚ್ಚಿನ ಡಾಟ್ ಬಾಲ್‌ಗಳು ದಾಖಲಾದವು. ಮಧ್ಯಮ ಓವರ್‌ಗಳಲ್ಲಿ 35-36ರಷ್ಟು ಡಾಟ್ ಬಾಲ್‌ಗಳಿದ್ದವು. ಟಿ20 ಕ್ರಿಕೆಟ್‌ನಲ್ಲಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ಆಟದ ಮನೋಭಾವವನ್ನೇ ಬದಲಾಯಿಸಿಕೊಳ್ಳಬೇಕಾಗಿದೆ’ ಎಂದು ವಾರ್ನರ್ 7 ವಿಕೆಟ್ ಸೋಲಿನ ಬಳಿಕ ಹೇಳಿದರು. ತಂಡ 20-30 ರನ್ ಕೊರತೆ ಎದುರಿಸಿತು ಎಂದೂ ಅವರು ಅಭಿಪ್ರಾಯಪಟ್ಟರು.

    ಇದನ್ನೂ ಓದಿ: ಧೋನಿ ದಾಖಲೆ ಉಡೀಸ್ ಮಾಡಿದ ಆಸ್ಟ್ರೇಲಿಯಾದ ಮಹಿಳಾ ವಿಕೆಟ್ ಕೀಪರ್..!

    ಆಲ್ರೌಂಡರ್ ವಿಜಯ್ ಶಂಕರ್ ಗಾಯದಿಂದಾಗಿ ಅಲಭ್ಯರಾದ ಕಾರಣದಿಂದಾಗಿ ಕಣಕ್ಕಿಳಿದ ಬಂಗಾಳದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಾಹ ಸಾಕಷ್ಟು ನಿಧಾನಗತಿಯಲ್ಲಿ ಆಟವಾಡಿದರು. ಅವರು 31 ಎಸೆತಗಳಲ್ಲಿ 30 ರನ್ ಗಳಿಸಲಷ್ಟೇ ಶಕ್ತರಾದರು. ಕೆಕೆಆರ್ ಬೌಲಿಂಗ್ ದಾಳಿ ಕೂಡ ಸಾಕಷ್ಟು ಉತ್ತಮವಾಗಿತ್ತು ಎಂದು ವಾರ್ನರ್ ಹೇಳಿದರು.

    ಯುವ ಆಟಗಾರರನ್ನು ಪ್ರಶಂಸಿಸಿದ ಕಾರ್ತಿಕ್
    ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಗೆಲುವಿಗೆ ತಂಡದ ಯುವ ಆಟಗಾರರನ್ನು ಪ್ರಶಂಸಿಸಿದರು. ವೇಗಿ ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ಮತ್ತು ಶುಭಮಾನ್ ಗಿಲ್ ಆಟವನ್ನು ಅವರು ಶ್ಲಾಘಿಸಿದರು.

    ಕುಲದೀಪ್ ಯಾದವ್ ತಾನಾಡಿದ ಕಳೆದ 7 ಐಪಿಎಲ್ ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಕಬಳಿಸಿದ್ದಾರೆ. ಮನೀಷ್ ಪಾಂಡೆ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಪರ 7ನೇ ಅರ್ಧಶತಕ ಬಾರಿಸಿದರು. ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ 9ನೇ ಬಾರಿ ಶೂನ್ಯಕ್ಕೆ ಔಟಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts