More

    ಧೋನಿ ದಾಖಲೆ ಉಡೀಸ್ ಮಾಡಿದ ಆಸ್ಟ್ರೇಲಿಯಾದ ಮಹಿಳಾ ವಿಕೆಟ್ ಕೀಪರ್..!

    ಬ್ರಿಸ್ಬೇನ್: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ವಿಶ್ವ ಶ್ರೇಷ್ಠ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ವಿಶ್ವದ ಏಕೈಕ ನಾಯಕ ಎನಿಸಿರುವ ಧೋನಿ ಮಾಡಿದ್ದ ದಾಖಲೆಯೊಂದನ್ನು ಆಸ್ಟ್ರೇಲಿಯಾದ ಮಹಿಳಾ ವಿಕೆಟ್ ಕೀಪರ್ ಬ್ರೇಕ್ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಹಿಂದೆ ಅತಿಹೆಚ್ಚು ಬಲಿ ಪಡೆದ ಆಟಗಾರ ಎನಿಸಿಕೊಂಡಿದ್ದ ಧೋನಿ ದಾಖಲೆಯನ್ನು ಅಲಿಸಾ ಹೀಲಿ ಬ್ರೇಕ್ ಮಾಡಿದ್ದಾರೆ. 98 ಟಿ20 ಪಂದ್ಯಗಳಿಂದ ಧೋನಿ 91 (57 ಕ್ಯಾಚ್+ 34 ಸ್ಟಂಪ್ಸ್) ಬಲಿ ಪಡೆದಿದ್ದರು. ಇದೀಗ ಆಸ್ಟ್ರೇಲಿಯಾ ಅಲಿಸಾ ಹೀಲಿ 92 ಬಲಿ ಪಡೆಯುವ ಮೂಲಕ ಧೋನಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

    ಇದನ್ನೂ ಓದಿ: ಸತತ 2 ಸೋಲಿಗೆ ಕಂಗೆಟ್ಟ ಸಿಎಸ್‌ಕೆ ಫ್ಯಾನ್ಸ್, ಶುರುವಾಯ್ತು ‘ಕಂಬ್ಯಾಕ್ ರೈನಾ’ ಟ್ರೆಂಡಿಂಗ್!

    ಬ್ರಿಸ್ಬೇನ್‌ನಲ್ಲಿ ಭಾನುವಾರ ನ್ಯೂಜಿಲೆಂಡ್ ಮಹಿಳಾ ತಂಡದ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಅಲಿಸಾ ಈ ಸಾಧನೆ ಮಾಡಿದ್ದಾರೆ. 114 ಪಂದ್ಯಗಳಿಂದ 92 ಬಲಿ ಪಡೆದಿದ್ದಾರೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 8 ವಿಕೆಟ್‌ಗಳಿಂದ ಜಯ ದಾಖಲಿಸಿತ್ತು. ಜತೆಗೆ 3 ಪಂದ್ಯಗಳಿಂದ ಸರಣಿಯಲ್ಲಿ 2-0 ಯಿಂದ ಮುನ್ನಡೆ ಸಾಧಿಸಿತು.

    ಇದನ್ನೂ ಓದಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್​ ಹೇಳಿದ್ದೇನು?

    ಅಲಿಸಾ ಹೀಲಿ, ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ ಅವರ ಪತ್ನಿ. ಆಸ್ಟ್ರೇಲಿಯಾ ತಂಡಕ್ಕೆ ಸುದೀರ್ಘ ಅವಧಿಗೆ ವಿಕೆಟ್ ಕೀಪರ್ ಆಗಿದ್ದ ಹಿಯಾನ್ ಹೀಲಿ ಅವರ ಅಣ್ಣನ ಮಗಳೇ ಅಲಿಸಾ ಹೀಲಿ. 114 ಟಿ20 ಪಂದ್ಯಗಳಿಂದ 1 ಶತಕ, 12 ಅರ್ಧಶತಕ ಒಳಗೊಂಡಂತೆ 1586 ರನ್ ಪೇರಿಸಿದ್ದಾರೆ. ಅಜೇಯ 148 ರನ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

    ಭಾವಿ ಪತ್ನಿಯ ಜನ್ಮದಿನಕ್ಕೆ ಚಾಹಲ್ ವಿಶೇಷ ಸಂದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts