More

    ಅಸ್ವಸ್ಥಗೊಂಡಿದ್ದಾತನಿಗೆ ವಾರ್‌ರೂಂ ಆಶ್ರಯ

    ಪುತ್ತೂರು: ಕಬಕದ ಬಸ್ ತಂಗುದಾಣದಲ್ಲಿ ಮೈಯೆಲ್ಲ ತುರಿಕೆ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದ ಪರವೂರಿನ ವ್ಯಕ್ತಿಯನ್ನು ಸ್ಥಳೀಯ ಗ್ರಾಪಂ ಅಧ್ಯಕ್ಷರ ಸಹಕಾರದೊಂದಿಗೆ ಪುತ್ತೂರು ಶಾಸಕರ ವಾರ್‌ರೂಂ ನೇತೃತ್ವದಲ್ಲಿ ನೆಲ್ಲಿಕಟ್ಟೆ ಕೋವಿಡ್ -19 ತಾತ್ಕಾಲಿಕ ಆಶ್ರಯ ತಾಣಕ್ಕೆ ಶನಿವಾರ ಸೇರಿಸಲಾಗಿದೆ.
    ಅಸ್ವಸ್ಥ ವ್ಯಕ್ತಿಯನ್ನು ಗಮನಿಸಿದ ಗ್ರಾಪಂ ಸದಸ್ಯ ನಝೀರ್ ಪಂಚಾಯಿತಿ ಅಧ್ಯಕ್ಷ ವಿನಯ ಕಲ್ಲೇಗ ಅವರಿಗೆ ಮಾಹಿತಿ ನೀಡಿದ್ದರು.

    ಆತನನ್ನು ವಿಚಾರಿಸಿ, ಸ್ನಾನ ಮಾಡಿಸಿ ಬಟ್ಟೆ ಕೊಡಿಸಿ, ಶಾಸಕರ ವಾರ್‌ರೂಂನ ಪುರುಷೋತ್ತಮ ಮುಂಗ್ಲಿಮನೆ ನೇತೃತ್ವದಲ್ಲಿ ನೆಲ್ಲಿಕಟ್ಟೆಯ ಆಶ್ರಯ ತಾಣಕ್ಕೆ ಕರೆ ತರಲಾಯಿತು. ಕಬಕ ಗ್ರಾಪಂನ ನವೀನ್, ಪ್ರವೀಣ್, ಲಿಂಗಪ್ಪ, ಜಯರಾಮ, ಸೇವಾ ಭಾರತಿ ಪುತ್ತೂರಿನ ಡಾ.ಕೃಷ್ಣಪ್ರಸನ್ನ ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts