More

    ಟೋಲ್​ ಫೀಯಲ್ಲಿ ಶೇಕಡ 50 ಡಿಸ್ಕೌಂಟ್ ಬೇಕಾ- ಫಾಸ್ಟ್ಯಾಗ್ ಅಳವಡಿಸಿ!

    ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಟೋಲ್​ಗಳ ಶುಲ್ಕದಲ್ಲಿ ಡಿಸ್ಕೌಂಟ್ ಪಡೆಯಬೇಕಾದ್ರೆ ವಾಹನಗಳಲ್ಲಿ ಫಾಸ್ಟ್ಯಾಗ್ ಅಳವಡಿಸೋದು ಕಡ್ಡಾಯ. ಹೀಗಂತ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಫರ್ಮಾನು ಹೊರಡಿಸಿದೆ. ಇದರಂತೆ ಡಿಸ್ಕೌಂಟ್ ಎಂದರೆ, ಏಕಮುಖ ಸಂಚಾರದ ಟೋಲ್ ಫೀ ಕಟ್ಟಿದರೆ 24 ಗಂಟೆಯೊಳಗೆ ಅದೇ ದಾರಿಯಲ್ಲಿ ಹಿಂತಿರುಗುತ್ತೀರಿ ಎಂದಾದರೆ ಪುನಃ ಟೋಲ್ ಶುಲ್ಕ ಪಾವತಿಸಬೇಕಾಗಿಲ್ಲ.

    ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹ) ನಿಯಮ 2008ಕ್ಕೆ ತಿದ್ದುಪಡಿ ತಂದಿರುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದು ಸೋಮವಾರದಿಂದಲೇ ಜಾರಿಗೆ ಬಂದಿದೆ. ದೇಶದಲ್ಲಿ ಡಿಜಿಟಲ್ ಪಾವತಿ ಸಂಸ್ಕೃತಿಗೆ ಉತ್ತೇಜನ ನೀಡುವ ಸಲುವಾಗಿ ಈ ಡಿಸ್ಕೌಂಟ್ ಘೋಷಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

    ಇದನ್ನೂ ಓದಿ: ಸ್ಕೂಟರ್ರಾ…ಸೈಕಲಾ…?!: ಎಂಟ್ನೇ ಕ್ಲಾಸ್ ಹುಡುಗನ ಕ್ರಿಯೇಟಿವಿಟಿಗೊಂದು ಸಲಾಂ..

    ಶೇಕಡ 50 ಡಿಸ್ಕೌಂಟ್ ಯೋಜನೆಗೆ ಹೊರತಾಗಿ ಸ್ಥಳೀಯ ವಿನಾಯಿತಿ ಪಡೆಯಬೇಕು ಎಂದರೂ ವಾಹನಗಳಲ್ಲಿ ಫಾಸ್ಟ್ಯಾಗ್ ಅಳವಡಿಸಿಕೊಂಡಿರಬೇಕಾದ್ದು ಕಡ್ಡಾಯ. ಫಾಸ್ಟ್ಯಾಗ್ ಅಳವಡಿಸುವುದರಿಂದ ಟೋಲ್​ಗಳಲ್ಲಿ ಸರದಿ ನಿಲ್ಲುವುದು ತಪ್ಪುತ್ತದೆ. ಸಮಯ ಮತ್ತು ಇಂಧನ ಉಳಿತಾಯ ಮುಂತಾದ ಪ್ರಯೋಜನಗಳಿವೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

    ರಾಯಭಾರ ಕಚೇರಿ ಕಟ್ಟಡವನ್ನೇ ಮಾರಾಟ ಮಾಡಿದ್ದ ಪಾಕ್​ನ ಮೇಜರ್ ಜನರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts