More

    ರಾಯಭಾರ ಕಚೇರಿ ಕಟ್ಟಡವನ್ನೇ ಮಾರಾಟ ಮಾಡಿದ್ದ ಪಾಕ್​ನ ಮೇಜರ್ ಜನರಲ್​

    ಇಸ್ಲಾಮಾಬಾದ್​/ನವದೆಹಲಿ: ಪಾಕಿಸ್ತಾನ ಸರ್ಕಾರದ ಗಮನಕ್ಕೇ ಬಾರದಂತೆ ಅದರ ರಾಯಭಾರ ಕಚೇರಿ ಕಟ್ಟಡವನ್ನೇ ರಾಜತಾಂತ್ರಿಕ ಅಧಿಕಾರಿಯೊಬ್ಬ ರಹಸ್ಯವಾಗಿ ಮಾರಾಟ ಮಾಡಿದ್ದ. ಇದರಿಂದಾಗಿ ಪಾಕಿಸ್ತಾನದ ಬೊಕ್ಕಸಕ್ಕೆ 22.24 ಕೋಟಿ ಪಾಕಿಸ್ತಾನಿ ರೂಪಾಯಿ ನಷ್ಟ ಉಂಟಾಗಿದೆ. ಈ ಸಂಬಂಧ ಆ ಅಧಿಕಾರಿಯನ್ನು ಬಾಧ್ಯಸ್ಥನನ್ನಾಗಿ ಮಾಡಿ ಆತನ ವಿರುದ್ಧ ದೋಷಾರೋಪಣೆಯನ್ನು ಕೋರ್ಟ್​ನಲ್ಲಿ ಮಾಡಲಾಗಿದೆ ಎಂದು ದ ಎಕ್ಸ್​ಪ್ರೆಸ್​ ಟ್ರಿಬ್ಯೂನ್ ವರದಿ ಮಾಡಿದೆ.

    ಸರ್ಕಾರವನ್ನೇ ಈ ರೀತಿ ವಂಚಿಸಿದ ಅಧಿಕಾರಿ ಹೆಸರು ಮೇಜರ್ ಜನರಲ್ (ನಿವೃತ್ತ ) ಸೈಯದ್​ ಮುಸ್ತಾಫ ಅನ್ವರ್. ಇಂಡೋನೇಷ್ಯಾದ ಜಕಾರ್ತಾದಲ್ಲಿ 2001-02ರ ಅವಧಿಯಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿದ್ದ ಅನ್ವರ್​, ಆ ಅವಧಿಯಲ್ಲಿ ಕಟ್ಟಡವನ್ನು ಅದರ ಮೌಲ್ಯಕ್ಕಿಂತಲೂ ಬಹಳ ಕಡಿಮೆ ಬೆಲೆ ರಹಸ್ಯವಾಗಿ ಮಾರಾಟ ಮಾಡಿದ್ದರು. ​ ಅವರ ಈ ನಡೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ 22 ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ನ್ಯಾಷನಲ್​ ಅಕೌಂಟೆಬಿಲಿಟಿ ಬ್ಯೂರೋ(ಎನ್​ಎಬಿ) ಆಗಸ್ಟ್​ 19ರಂದು ಅಕೌಂಟೆಬಿಲಿಟಿ ಕೋರ್ಟ್​ನಲ್ಲಿ ಸಾಕ್ಷ್ಯ ಸಲ್ಲಿಸಿದೆ.

    ಇದನ್ನೂ ಓದಿ: ಪುಲ್ವಾಮಾ ದಾಳಿ: ಪಾಕ್‌ನ ಉಗ್ರ ಮುಖ ಬಯಲು- 5 ಸಾವಿರ ಪುಟಗಳಲ್ಲಿದೆ ಮಾಹಿತಿ

    ವಿದೇಶಾಂಗ ಸಚಿವಾಲಯದ ಅನುಮತಿ ಪಡೆಯದೇ ಅನ್ವರ್​ ಕಟ್ಟಡ ಮಾರೋದಕ್ಕೆ ಜಾಹೀರಾತು ನೀಡಿದ್ದರು. ಅದರ ಪತ್ರಿಕಾ ತುಣುಕನ್ನು ಮತ್ತು ಪೂರಕ ದಾಖಲೆಯನ್ನು ಕೋರ್ಟ್​ಗೆ ಸಲ್ಲಿಸಿದ ದಾಖಲೆಗಳಲ್ಲಿವೆ.ವಿಶೇಷ ಎಂದರೆ ಈ ವ್ಯಕ್ತಿ 2015ರಲ್ಲಿ “Couldn’t Have Been Better: My Life Story” ಎಂಬ ಪುಸ್ತಕವನ್ನೂ ಬರೆದು ಪ್ರಕಟಿಸಿದ್ದಾರೆ.

    ಇದನ್ನೂ ಓದಿ: ಉಪ್ಪಿನಕಾಯಿ ಜಾರೂ ಹೋಯ್ತು, 81,000 ರೂಪಾಯಿನೂ ಹೋಯ್ತು!

    ಎನ್​ಎಬಿಯು ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾಗಿದ್ದು, ಕಳೆದ ತಿಂಗಳು ಸುಪ್ರೀಂ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿತ್ತು. ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ಬೇಗ ಮಾಡುವುದಿಲ್ಲ. ಅಧಿಕಾರಿಗಳೂ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತ್ತು. (ಏಜೆನ್ಸೀಸ್)

    VIDEO: ಡಿಜೆ ಹಳ್ಳಿ ಗಲಭೆ ಬಗ್ಗೆ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts