More

    ‘ವಾಕ್​ ವಿತ್​ ವಾಕರೂ’ ನಡೆದಾಡಿ, ಶೂ ಗೆಲ್ಲಿ

    ಬೆಂಗಳೂರು: ಇನ್ನೇನು ದೀಪಾವಳಿ ಹಬ್ಬ ಬಂದೇ ಬಿಟ್ಟಿತು. ಈ ಹಬ್ಬಕ್ಕೆ ವಿಶೇಷವಾಗಿ ಏನಾದರೂ ಕೊಳ್ಳಬೇಕು ಎಂದು ನೀವೆಂದುಕೊಂಡಿದ್ದರೆ, ಇಲ್ಲೊಂದು ವಿಶೇಷ ಅವಕಾಶ ನಿಮಗಿದೆ. ಬೇರೇನೂ ಮಾಡುವುದು ಬೇಕಿಲ್ಲ, ನೀವು ನಡೆದಾಡಿದರೆ ಸಾಕು. ನೀವು ನಡೆಯುವುದಕ್ಕೆ ವಿಶೇಷ ಶೂ ನೀಡಲು ವಾಕರೂ ಸಂಸ್ಥೆ ಸಿದ್ಧವಾಗಿದೆ.

    ಇದನ್ನೂ ಓದಿ: ವರದಿಗಾರನ ಜೀವವನ್ನೇ ತೆಗೆದ ಅಪರಾಧ ವರದಿ- ಕುಡುಗೋಲಿನಿಂದ ಭೀಕರ ಹತ್ಯೆ

    ಸಾಮಾನ್ಯವಾಗಿ ನಡೆದಾಡುವ ಹೆಜ್ಜೆಗಳ ಟ್ರ್ಯಾಕ್​ ಇಟ್ಟುಕೊಳ್ಳುವುದಕ್ಕಾಗಿ ಯಾವುದಾದರೂ ಆ್ಯಪ್​ ಇನ್​ಸ್ಟಾಲ್​ ಮಾಡಿಕೊಂಡಿರುತ್ತಿರಲ್ಲವೇ. ಅದೇ ಆ್ಯಪ್​ನಲ್ಲಿ ದಾಖಲಾಗಿರುವ ನಿಮ್ಮ ನಡಿಗೆಯ ಟ್ರ್ಯಾಕ್​ನ ಸ್ಕ್ರೀನ್​ಶಾಟ್​ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ. ಹೀಗೆ ಹಾಕುವಾಗ ವಾಕರೂ ಸಂಸ್ಥೆಯನ್ನು ಟ್ಯಾಗ್​ ಮಾಡಲು ಮರೆಯಬೇಡಿ. ಈ ರೀತಿ ಟ್ಯಾಗ್​ ಮಾಡುವವರಲ್ಲಿ 10 ಜನರನ್ನು ಆಯ್ಕೆ ಮಾಡಿ ವಾಕರೂ ಸಂಸ್ಥೆ ಅವರಿಗೆ ಉಚಿತ ಶೂ ಕಳುಹಿಸಿಕೊಡಲಿದೆ. ಈ ವರ್ಷದ ದೀಪಾವಳಿಗೆ ಹೊಸ ಶೂಗಳನ್ನು ನಿಮಗೆ ಉಡುಗೊರೆಯಾಗಿ ಸಂಸ್ಥೆ ನೀಡಲಿದೆ.

    ಇದನ್ನೂ ಓದಿ: ನೆಮ್ಮದಿ ಜೀವನಕ್ಕೆ ಕಾನೂನು ತಿಳಿವಳಿಕೆ ಅಗತ್ಯ – ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮೀದೇವಿ ಹೇಳಿಕೆ

    ಈ ವಿಶೇಷ ಆಂದೋಲನಕ್ಕೆ ಸಂಸ್ಥೆ ವಾಕ್​ ವಿತ್​ ವಾಕರೂ ಎಂದು ಕರೆದಿದೆ. ಅಕ್ಟೋಬರ್ 26ರಿಂದ ಆಂದೋಲನ ಆರಂಭವಾಗಿದ್ದು, ನವೆಂಬರ್​ 13ರವರೆಗೆ ನಡೆಯಲಿದೆ. ಈಗಾಗಲೇ 30 ಲಕ್ಷಕ್ಕೂ ಅಧಿಕ ಹೆಜ್ಜೆಯ ಟ್ರ್ಯಾಕ್​ ಸಂಸ್ಥೆಗೆ ಸಿಕ್ಕಿದೆ. ದೇಶದಲ್ಲಿ ಕರೊನಾ ದಾಳಿ ಮುಂದುವರಿದಿರುವ ಈ ಸಮಯದಲ್ಲಿ ದೇಶದ ಜನತೆಯನ್ನು ಆರೋಗ್ಯದಾಯಕವಾಗಿಡುವ ಉದ್ದೇಶದಿಂದ ಈ ಆಂದೋಲನ ಆರಂಭಿಸಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.

    ಬಾಲಕರನ್ನೂ ಬಿಡುವುದಿಲ್ಲ ಕಾಮುಕರು; ಶೇ. 17 ಲೈಂಗಿಕ ದೌರ್ಜನ್ಯ ಬಾಲಕರ ಮೇಲೆಯೇ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts