More

    ಶ್ರೀ ವ್ಯಾಸರಾಜರ ಆರಾಧನೋತ್ಸವ ಸಂಪನ್ನ

    ಗಂಗಾವತಿ: ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಶ್ರೀ ವ್ಯಾಸರಾಜರ 484ನೇ ಆರಾಧನೆ ಮಹೋತ್ಸವ ನಿಮಿತ್ತ ಭಾನುವಾರ ಉತ್ತರಾರಾಧನೆ ಭಾನುವಾರ ಜರುಗಿತು.


    ಸೋಸಲೆ ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥರು, ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರ ಸಾನ್ನಿಧ್ಯವಹಿಸಿದ್ದರು. ಉಭಯ ಶ್ರೀಗಳಿಂದ ಸಂಸ್ಥಾನ ಪೂಜೆ, ಶ್ರೀಕೃಷ್ಣ ಷಡಕ್ಷರ ಮಂತ್ರಹೋಮ, ಪವಮಾನ ಹೋಮ, ನಾರಾಯಣ ವರ್ಮಹೋಮ, ವಾಯುಸ್ತುತಿ ಪುನಶ್ಚರಣ ಹೋಮ, ಚತುರ್ವೇದ, ಶ್ರೀ ಮದ್ಭಾಗವತ, ಸರ್ವಮೂಲ, ವ್ಯಾಸತ್ರಯ ಗ್ರಂಥಗಳ ಪಾರಾಯಣ, ವೃಂದಾವನಕ್ಕೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ ನೆರವೇರಿಸಲಾಯಿತು.

    ವಿದ್ವಾನ್ ಸುಮುಖ ಮತ್ತು ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ದೇವರನಾಮ, ಕೊರ್ಲಹಳ್ಳಿ ಶ್ರೀನಿವಾಸಾಚಾರ್ಯ ದಂಪತಿಯಿಂದ ವೀಣಾ ವಾದನ, ಪೂರ್ಣಾಹುತಿ, ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ಜರುಗಿತು. ಮಾ.10ರಿಂದ ಮೂರು ದಿನ ಸೇವೆ ಸಲ್ಲಿಸಿದ ವಿಶಿಷ್ಟ ದಾನಿಗಳಿಗೆ ಸ್ಮರಣಿಕೆ ಪ್ರದಾನ, ಸ್ವಯಂ ಸೇವಕರಿಗೆ ಅನುಗ್ರಹ ಮಂತ್ರಾಕ್ಷತೆ ವಿತರಿಸಲಾಯಿತು. ಮಠದ ವಿಚಾರ ಕರ್ತ ಗುರುರಾಜ್ ದೇಶಪಾಂಡೆ, ರಾಜಾ ಶ್ರೀಕೃಷ್ಣದೇವರಾಯ, ಅನೆಗೊಂದಿ ರಾಯರ ಮಠದ ಸುಮಂತ ಕುಲ್ಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts