More

    ನವವೃಂದಾವನಗಡ್ಡಿಯಲ್ಲಿ ನಾಳೆಯಿಂದ ಶ್ರೀ ವ್ಯಾಸರಾಜರ ಆರಾಧನೆ ಮಹೋತ್ಸವ

    ಗಂಗಾವತಿ: ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರ 484ನೇ ಆರಾಧನೆ ಮಹೋತ್ಸವ ಮಾ.10ರಿಂದ 12ರವರಿಗೆ ಹಮ್ಮಿಕೊಳ್ಳಲಾಗಿದೆ.


    ಶ್ರೀ ವ್ಯಾಸರಾಜ ಮಠ (ಸೋಸಲೆ) ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥರ ಸಾನ್ನಿಧ್ಯದಲ್ಲಿ ಮಾ.9ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಆನೆಗೊಂದಿ ಶ್ರೀರಂಗನಾಥ ದೇವಾಲಯದಿಂದ ಶ್ರೀ ಸಂಸ್ಥಾನದ ದೇವರು, ಶ್ರೀಸರ್ವಮೂಲ, ಶ್ರೀಮನ್ಯಾಯಸುಧಾ ಮತ್ತು ವ್ಯಾಸತ್ರಯ ಗ್ರಂಥಗಳ ಭವ್ಯ ಮೆರವಣಿಗೆ, ನವವೃಂದಾವನ ಸನ್ನಿಧಾನದಲ್ಲಿ ಧ್ವಜಾರೋಹಣ, ಗೋಪೂಜೆ, ಧಾನ್ಯಪೂಜೆಯೊಂದಿಗೆ ಚಾಲನೆ ನೀಡಲಾಗುತ್ತಿದ್ದು, ನಂತರ ಶ್ರೀಗಳಿಂದ ಅನುಗ್ರಹ ಸಂದೇಶವಿದೆ. ಮಾ.10ರಂದು ಪೂರ್ವರಾಧನೆ ನಿಮಿತ್ತ ಶ್ರೀಗಳಿಂದ ಸಂಸ್ಥಾನ ಪೂಜೆ, ಶ್ರೀಕೃಷ್ಣಷಡಕ್ಷರ ಮಂತ್ರಹೋಮ, ಮನ್ಯುಸೂಕ್ತಪುರಶ್ಚರಣ ಹೋಮ, ಚತುರ್ವೇದ, ಶ್ರೀ ಮದ್ಭಾಗವತ, ಸರ್ವಮೂಲ ಗ್ರಂಥಗಳು, ಶ್ರೀ ಮನ್ಯಾಯಸುಧಾ, ವ್ಯಾಸತ್ರಯ ಗ್ರಂಥಗಳ ಪಾರಾಯಣ, ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವೃಂದಾವನಕ್ಕೆ ಪಂಚಾಮೃತಾಭಿಷೇಕ, ವಿದ್ವಾಂಸರಿಂದ ಪ್ರವಚನ, ಬೆಂಗಳೂರಿನ ವೀಣಾಶ್ರೀಧರ್ ಮೊರಬ್‌ರಿಂದ ನಾಟ್ಯಾರಾಧನೆ, ಪೂರ್ಣಾಹುತಿ, ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ಜರುಗಲಿದೆ. ಮದ್ಯಾಹ್ನ ಶ್ರೀ ಮದ್ದಶಪ್ರಮತಿದರ್ಶನ ಪ್ರಕಾಶಿನೀ ವಿದ್ವತ್ಸಭಾ, ವ್ಯಾಸತ್ರಯ ಪರೀಕ್ಷಾ ಮತ್ತು ಗಾಯಕ ಪುತ್ತೂರು ನರಸಿಂಹನಾಯಕರಿಂದ ದಾಸವಾಣಿ ಜರುಗಲಿದೆ.


    ಮಾ.11ರಂದು ಮುಳಬಾಗಿಲು ಶ್ರೀ ಪಾದರಾಜ ಮಠದ ಶ್ರೀಸುಜಯನಿಧಿ ತೀರ್ಥರಿಂದ ಸಂಸ್ಥಾನ ಪೂಜೆ, ಹೋಮ-ಹವಚನ, ಶ್ರೀ ವ್ಯಾಸರಾಜರ ವೃಂದಾವನಕ್ಕೆ ಪಂಚಾಮೃತಾಭಿಷೇಕ, ವಿದ್ವಾನ ಸೋಸಲೆ ಸಮೀರಾಚಾರ್ಯ ಮತ್ತು ತಂಡದಿಂದ ದಾಸ ಸೌರಭ, ಗ್ರಂಥ ಬಿಡುಗಡೆ, ವಿದ್ವಾಂಸರಿಗೆ ಸನ್ಮಾನ ಹಾಗೂ ಗಾಯಕ ಮೈಸೂರು ರಾಮಚಂದ್ರಾಚಾರ್ಯ ಮತ್ತು ತಂಡದಿಂದ ದಾಸವಾಣಿ ಜರುಗಲಿದೆ. ಮಾ.12ರಂದು ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಮತ್ತು ಉಭಯ ಶ್ರೀಗಳಿಂದ ಸಂಸ್ಥಾನ ಪೂಜೆ, ಹೋಮ-ಹವನ, ಪಾರಾಯಣ, ವೃಂದಾವನಕ್ಕೆ ಪಂಚಾಮೃತಾಭಿಷೇಕ, ವಿದ್ವಾನ ಸುಮುಖ ಮತ್ತು ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ದೇವರನಾಮ, ಕೊರ್ಲಹಳ್ಳಿ ಶ್ರೀನಿವಾಸಾಚಾರ್ಯ ದಂಪತಿ ವೀಣಾವಾದನ, ಪೂರ್ಣಾಹುತಿ, ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ, ವಿಶಿಷ್ಟ ದಾನಿಗಳಿಗೆ ಸ್ಮರಣಿಕೆ ಪ್ರದಾನ, ಸ್ವಯಂ ಸೇವಕರಿಗೆ ಅನುಗ್ರಹ ಮಂತ್ರಾಕ್ಷತೆ ವಿತರಿಸಲಾಗುವುದು. ವ್ಯಾಸ ಸಾಹಿತ್ಯ ವಿಶಿಷ್ಟ ಸಾರಸ್ವತ ಸೇವೆಗಾಗಿ ವಿದ್ವಾನ್ ಸಗ್ರಿ ರಾಘವೇಂದ್ರಾಚಾರ್ಯ ಉಪಾಧ್ಯಾಯರಿಗೆ ಶ್ರೀ ವ್ಯಾಸರಾಜ ಅನುಗ್ರಹ ಪ್ರಶಸ್ತಿ, ವಿದ್ವಾನ್ ಸತ್ಯನಾರಾಯಣಚಾರ್ಯರಿಗೆ ಶ್ರೀ ಪುರಂದರಾನುಗ್ರಹ ಪ್ರಶಸ್ತಿ, ಮೈಸೂರಿನ ಪೇಜಾವರ ಶ್ರೀಧಾಮ ಸಂಚಾಲಕ ಗುರುನಾಥ, ಬೆಂಗಳೂರಿನ ಪಾಂಡುರಂಗಿ, ಗೂಳೂರ್ ವೆಂಕರಮಣರಾವ್ ರಾಘವೇಂದ್ರ ಮತ್ತು ಚೆನ್ನೈನ ಶ್ರೀಧರ್‌ಗೆ ಶ್ರೀ ವ್ಯಾಸರಾಜ ಸೇವಾಧುರಂಧರ ಪ್ರಶಸ್ತಿ ವಿತರಿಸಲಾಗುವುದು ಎಂದು ಶ್ರೀಮಠ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts