More

    ಶ್ರೀ ಪದ್ಮನಾಭ ತೀರ್ಥರ ಮಧ್ಯಾರಾಧನೆ; ಶ್ರೀ ಸುಬುಧೇಂದ್ರ ತೀರ್ಥರಿಂದ ಆಶೀರ್ವಚನ

    ಗಂಗಾವತಿ: ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಮಂತ್ರಾಲಯದ ಮಠದ ನೇತೃತ್ವದಲ್ಲಿ ಶ್ರೀ ಪದ್ಮನಾಭ ತೀರ್ಥರ ಮಧ್ಯಾರಾಧನೆ ಭಾನುವಾರ ಸಾಂಗೋಪವಾಗಿ ನೆರವೇರಿಸಲಾಯಿತು.

    ಹೈಕೋರ್ಟ್ ಸೂಚನೆಯಂತೆ 12.30ರೊಳಗೆ ಮಂತ್ರಾಲಯದ ಮಠದ ಪೀಠಾಧಿಪತಿಗಳು ಗಡ್ಡಿಯಿಂದ ನಿರ್ಗಮಿಸಬೇಕಿದ್ದರಿಂದ ಬೆಳಗಿನ ಜಾವದಿಂದ ಧಾರ್ಮಿಕ ಕೈಂಕರ್ಯಗಳು ಶುರುವಾದವು. ಮಂತ್ರಾಲಯದ ಮಠದ ಶ್ರೀಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ರಜತಕವಚದೊಂದಿಗೆ ಹೂವಿನ ಅಲಂಕಾರ, ವಿದ್ವಾಂಸರಿಂದ ಉಪನ್ಯಾಸ, ಸಾಮೂಹಿಕ ಭಜನೆ, ಮೂಲ ರಾಮದೇವರ ಸಂಸ್ಥಾನ ಪೂಜೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ಜರುಗಿತು.

    ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ, ಹೈಕೋರ್ಟ್ ನಿರ್ದೇಶನದಂತೆ ಪೂಜೆ ಕೈಂಕರ್ಯಗಳನ್ನು ನೆರವೇರಿಸಿದ್ದು, ಕರೊನಾ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಲಾಗಿದೆ ಎಂದರು. ಸ್ಥಳಕ್ಕೆ ತಹಸೀಲ್ದಾರ್ ಎಂ.ರೇಣುಕಾ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲಿಸಿತು. 12.30ರೊಳಗೆ ರಾಯರ ಮಠದ ಅನುಯಾಯಿಗಳನ್ನು ಗಡ್ಡಿಯಿಂದ ಹೊರಗೆ ಕಳುಹಿಸಿದ್ದು, ಉತ್ತರಾದಿ ಮಠದ ಸುಪರ್ದಿಗೆ ಗಡ್ಡಿಯನ್ನು ಬಿಟ್ಟುಕೊಡಲಾಯಿತು. ಎಎಸೈ ವೆಂಕಟೇಶ ಚವ್ಹಾಣ, ಮಠದ ದಿವಾನ ರಾಜಾ ಎಸ್.ಸುಧೀಂದ್ರಚಾರ್, ಅನೆಗೊಂದಿ ಮಠದ ವ್ಯವಸ್ಥಾಪಕ ಸುಮಂತ ಕುಲ್ಕರ್ಣಿ ಇಡಪನೂರ್, ವಕೀಲ ಹನುಮಂತರಾವ್, ರಾಮಕೃಷ್ಣ ಜಹಾಗೀರದಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts