More

    ಅಂಧರ ಬಾಳಲ್ಲಿ ಬೆಳಕು ಮೂಡಿಸಿದ ವಿಆರ್‌ಎಲ್; ಸ್ಮಾರ್ಟ್ ವಿಜನ್ ಡಿವೈಸ್ ವಿತರಣೆ

    ಹುಬ್ಬಳ್ಳಿ: ಸದಾ ಹೊಸತನ ಮತ್ತು ನಿಸ್ವಾರ್ಥ ಸೇವೆ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ವಿಆರ್‌ಎಲ್ ಸಂಸ್ಥೆ ಅಂಧರ ಬಾಳಲ್ಲಿ ಬೆಳಕನ್ನು ಚೆಲ್ಲಿದೆ. ಹುಬ್ಬಳ್ಳಿಯ ನವನಗರದಲ್ಲಿರುವ ಚಿಕೇನಕೊಪ್ಪ ಚನ್ನವೀರ ಶರಣರ ಅಂಧರ ಆಶ್ರಮದಲ್ಲಿ ಸ್ಮಾರ್ಟ್ ವಿಜನ್ ಡಿವೈಸ್ ವಿತರಣೆ ಮಾಡಲಾಯಿತು. ಒಟ್ಟು 8 ಮಕ್ಕಳಿಗೆ ಈ ಡಿವೈಸ್ ನೀಡಲಾಯಿತು.

    ಕಾರ್ಯಕ್ರಮದಲ್ಲಿ ಹಾಜರಿದ್ದ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು, ವಿಆರ್‌ಎಲ್ ಲಾಜಿಸ್ಟಿಕ್ಸ್ ಸಿಎಸ್‌ಆರ್ ಫಂಡ್ ಮೂಲಕ ನೀಡಲಾದ ಈ ಡಿವೈಸ್‌ಗಳನ್ನು ವಿತರಿಸಿದರು. ಹುಬ್ಬಳ್ಳಿಯ ರೋಟರಿ ಕ್ಲಬ್ ವಿದ್ಯಾನಗರ ಸಂಸ್ಥೆ ಈ ಕಾರ್ಯಕ್ಕೆ ಕೈಜೋಡಿಸಿತ್ತು. ಈ ಡಿವೈಸ್ ಮತ್ತು ಸ್ಮಾರ್ಟ್ ಫೋನ್‌ನಿಂದ ಅಂಧರು ತಮ್ಮ ಸುತ್ತಮುತ್ತ ಇರುವ ವಸ್ತುಗಳನ್ನು ಗುರುತಿಸಬಹುದು. ಫೇಸ್ ರೀಡಿಂಗ್ ಮಾಡಬಹುದು. ಪುಸ್ತಕಗಳಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳಬಹುದು.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಈ ಸಂದರ್ಭದಲ್ಲಿ ಮಾತನಾಡಿದ ಆನಂದ ಸಂಕೇಶ್ವರ ಅವರು, ವಿಆರ್‌ಎಲ್ ಸಿಎಸ್‌ಆರ್ ಫಂಡ್ ಮೂಲಕ ಮಾಡಿದ ಅನೇಕ ಸಮಾಜಮುಖಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನೂ ಎಂಟು ಡಿವೈಸ್‌ಗಳನ್ನು ಅಂಧರಿಗೆ ವಿತರಿಸಲಾಗುವುದು ಎಂದು ಹೇಳಿದರು.

    ಉಪಕರಣ ಸ್ವೀಕರಿಸಿ ಸಂತಸಗೊಂಡ ಅಂಧ ಮಕ್ಕಳು ವಿಆರ್‌ಎಲ್ ಮತ್ತು ರೋಟರಿ ಸಂಸ್ಥೆಗಳ ಬಗ್ಗೆ ಮೆಚ್ಚುಗೆ ಮತ್ತು ಕೃತಜ್ಞತೆ ವ್ಯಕ್ತಪಡಿಸಿದರು. ಹುಬ್ಬಳ್ಳಿ ವಿದ್ಯಾನಗರ ರೋಟರಿ ಕ್ಲಬ್‌ನ ಅಧ್ಯಕ್ಷೆ ಡಾ. ಮಹಿಮಾ ಮೋಹಿತದಂಡ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಅಂಧರ ಬಾಳಲ್ಲಿ ಬೆಳಕು ಮೂಡಿಸಿದ ವಿಆರ್‌ಎಲ್; ಸ್ಮಾರ್ಟ್ ವಿಜನ್ ಡಿವೈಸ್ ವಿತರಣೆ
    ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಂದ ಅಂಧ ಮಕ್ಕಳಿಗೆ ಸ್ಮಾರ್ಟ್​ ಡಿವೈಸ್ ವಿತರಣೆ.

    ಸಾಹಸಗಳ ಪಾಲುದಾರ: ಆನಂದ ಸಂಕೇಶ್ವರ ಹುಟ್ಟುಹಬ್ಬಕ್ಕೆ ವಿಜಯಾನಂದ ತಂಡದಿಂದ ಟೀಸರ್ ಗಿಫ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts