More

    ವ್ರತಾಚಾರಣೆ ಕಾಟಾಚಾರಕ್ಕೆ ಮಾಡದಿರಿ

    ಗುರುಗುಂಟಾ: ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಜಾತಿ, ಧರ್ಮ ಮುಖ್ಯವಲ್ಲ, ಭಕ್ತಿಯೇ ಪ್ರಧಾನವಾಗಿದೆ ಎಂದು ಮಸ್ಕಿ ಆರ್ಯವೈಶ್ಯ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯ ಸೋಮನಾಥ ಶ್ರೇಷ್ಠಿ ಹೇಳಿದರು.

    ಇದನ್ನೂ ಓದಿ: ಸಿದ್ದರಾಮಯ್ಯರಿಂದ ಕಾಟಾಚಾರದ ಪ್ರಗತಿಪರಿಶೀಲನೆ/ಮ್ಯಾಚ್‌ಫಿಕ್ಸಿಂಗ್ಮೊದಲೇ ಪ್ರಶ್ನೆ, ಉತ್ತರ ಸಿದ್ದ/ಜಿಲ್ಲೆಗೆ ಬಿಡಿಗಾಸು ನೀಡಲಿಲ್ಲ/ಮುನಿಸ್ವಾಮಿ

    ಪಟ್ಟಣದಲ್ಲಿ ಶ್ರೀದೇವಿ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಇರುಮುಡಿ ಪೂಜಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಅಯ್ಯಪ್ಪಸ್ವಾಮಿ ವ್ರತಾಚರಣೆ ಶೋಕಿ ಹಾಗೂ ಕಾಟಾಚಾರಕ್ಕೆ ಮಾಡದೆ, 41 ದಿನ ಮನಸ್ಸನ್ನು ನಿಗ್ರಹಿಸಿ ನಿತ್ಯ ದೇವರ ಪೂಜೆ, ಭಜನೆ, ಉಪನ್ಯಾಸ ಕೇಳುವತ್ತ ತಲ್ಲೀನರಾಗಬೇಕು. ಆಗ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಎಂದರು.

    ಅಯ್ಯಪ್ಪಸ್ವಾಮಿಗೆ ಮಾಲಾಧಾರಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಲಾಧಾರಿಗಳಿಗೆ ಗುರುಸ್ವಾಮಿ ಆಂಜನೇಯ ಕಿನ್ನಾಳ ಮತ್ತು ಕೃಷ್ಣ ಶೆಟ್ಟಿ ಕಿನ್ನಾಳ ಇರುಮುಡಿ ತುಪ್ಪದ ಕಾಯಿ ತುಂಬಿದರು. ಮಾಲಾಧಾರಿಗಳು ಶಬರಿಮಲೆಗೆ ಪ್ರಯಾಣ ಬೆಳೆಸಿದರು.

    ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಆನಂದ ತುರ್ವಿಹಾಳ್, ಗ್ರಾಪಂ ಸದಸ್ಯ ಆದೇಶ ಹಡಪದ, ಪ್ರಮುಖರಾದ ನಾಗರಾಜ ಕಿನ್ನಾಳ, ಶ್ರೀನಿವಾಸ ಕಿನ್ನಾಳ, ಜಗದೀಶ ತುರ್ವಿಹಾಳ್, ರೇವಣ್ಣಯ್ಯಸ್ವಾಮಿ, ನಾಗಯ್ಯಸ್ವಾಮಿ, ವೆಂಕಟೇಶ್ ಶೆಟ್ಟಿ, ಅಮರೇಶ ಜಾನೇಕಲ್, ಮಲ್ಲೇಶ ನಾಗಲಿಕರ್, ಪ್ರಭು ನಾಯಕ ಮೌನೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts