More

    ಸಿದ್ದರಾಮಯ್ಯರಿಂದ ಕಾಟಾಚಾರದ ಪ್ರಗತಿಪರಿಶೀಲನೆ/ಮ್ಯಾಚ್‌ಫಿಕ್ಸಿಂಗ್ಮೊದಲೇ ಪ್ರಶ್ನೆ, ಉತ್ತರ ಸಿದ್ದ/ಜಿಲ್ಲೆಗೆ ಬಿಡಿಗಾಸು ನೀಡಲಿಲ್ಲ/ಮುನಿಸ್ವಾಮಿ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದಿಂದ ಯಾವುದೇ ಹೊಸ ಯೋಜನೆಯೂ ಘೋಷಣೆಯಾಗಿಲ್ಲ ಮತ್ತು ಬಿಡಿಗಾಸು ನೀಡಲಿಲ್ಲ, ಕಾಟಾಚಾರಕ್ಕೆ ಮ್ಯಾಚ್‌ಫಿಕ್ಸಿಂಗ್ ನಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ, ಇದೊಂದು ನಿರಾಶಾದಾಯಕ ಭೇಟಿ ಎಂದು ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದರು.

    ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳು ಬರುತ್ತಿರುವುದರಿಂದ ಯಾವುದೋ ಯೋಜನೆ ಘೋಷಿಸಬಹುದು, ಜಿಲ್ಲೆಗೆ ಅನುದಾನ ನೀಡಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ, ಬಿಡಿಗಾಸು ನೀಡಲಿಲ್ಲ, ಇದೊಂದು ಕಾಟಾಚಾರದ ಭೇಟಿ ಎಂದು ಟೀಕಿಸಿದರು.

    ಪ್ರಗತಿಪರಿಶೀಲನಾ ಸಭೆಯಲ್ಲಿ ಮೊದಲೇ ಅಧಿಕಾರಿಗಳನ್ನು ಯಾವ ಪ್ರಶ್ನೆ ಕೇಳಬೇಕು, ಮತ್ತು ಉತ್ತರ ಸಿದ್ದಪಡಿಸಿಕೊಳ್ಳಲು ಸೂಚಿಸಲಾಗಿತ್ತು. ಅದರಂತೆ ಮುಖ್ಯ ಮಂತ್ರಿಗಳ ಪ್ರಶ್ನೆಗೆ ಅಧಿಕಾರಿಗಳು ಉತ್ತರ ನೀಡಿದ್ದು, ಪ್ರಶ್ನೆಪತ್ರಿಕೆ ಲೀಕ್ ಆಗಿದೆ ಎಂದು ವ್ಯಂಗ್ಯವಾಡಿದ ಅವರು, ಗ್ಯಾರೆಂಟಿಗಳಿಗೆ ಹಣ ಹೊಂದಿಸಲಾಗದೇ ತಡಕಾಡುತ್ತಿರುವ ಈ ಸರ್ಕಾರಕ್ಕೆ ಕೋಲಾರದ ಅಭಿವೃದ್ದಿಗೆ ಹಣ ನೀಡಲು ಎಲ್ಲಿದೆ ಎಂದು ಕಿಡಿಕಾರಿ, ಕೇವಲ ಚಂದಮಾಮ ತೋರಿಸಿ ಹೋಗಿದ್ದಾರೆ. ಇತಿಹಾಸ ಗಮನಿಸಿದರೆ ಕೋಲಾರ ಜಿಲ್ಲೆಯ ದಲಿತರ, ರೈತರ, ಬಡವರ ವಿರೋಧಿ ನೀತಿಯನ್ನು ಕಾಂಗ್ರೆಸ್ ಸರ್ಕಾರಗಳು ಅನುಸರಿಸಿಕೊಂಡು ಜಿಲ್ಲೆಗೆ ಅನ್ಯಾಯ ಮಾಡುತ್ತಲೇ ಬಂದಿವೆ ಎಂದರು.

    ಸೋನಿಯಾಗಾAಧಿ ಕೇಳಿ ೫ ಗ್ಯಾರೆಂಟಿ ನೀಡಿದ್ದಾರೆ, ಅದಕ್ಕೆ ಹಣವನ್ನು ಕಳೆದ ೬೦ ವರ್ಷಗಳಲ್ಲಿ ಲಕ್ಷಾಂತರ ಕೋಟಿ ರೂ ಲೂಟಿ ಮಾಡಿರುವ ಕಾಂಗ್ರೆಸ್ಸಿಗರ ಮನೆಯಿಂದಲೇ ತಂದು ನೀಡಲಿ ಎಂದರು.

    ಡಿಸಿ ಸ್ವಜಾತಿ ಪ್ರೇಮ ಸಿಎಂ ಗಮನಕ್ಕೆ
    ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಗೆ ೫೧ ಸಾವಿರ ಅರ್ಜಿ ಬಂದಿವೆ, ಅದರಲ್ಲಿ ೨ ಸಾವಿರ ಅರ್ಜಿ ಆಯ್ಕೆ ಮಾಡಿದ್ದಾರೆ, ಟೈಲರಿಂಗ್‌ಗೆ ಆಯ್ಕೆ ಮಾಡಿರುವ ೩೯೫ ಅರ್ಜಿಗಳನ್ನು ಒಂದೇ ಸಮುದಾಯದಿಂದ ಆಯ್ಕೆ ಮಾಡಿದ್ದಾರೆ, ಅಕ್ರಂ ಪಾಷ ಒಂದು ಸಮುದಾಯದ ಜಿಲ್ಲಾಧಿಕಾರಿಗಳಾ ಅಥವಾ ಇಡೀ ಜಿಲ್ಲೆಯ ಜಿಲ್ಲಾಧಿಕಾರಿಗಳ ಎಂಬುದನ್ನು ತಿಳಿಸಲಿ ಎಂದು ಆಗ್ರಹಿಸಿ ಸಿಎಂ ಗಮನಕ್ಕೆ ತಂದಿದ್ದೇನೆ ಎಂದರು.

    ಕೋಲಾರ ಜಿಲ್ಲೆಯಲ್ಲಿನ ಹಿಂದೆ ಜಮೀರ್ ಪಾಷಾ ಡಿಸಿಯಾಗಿದ್ದಾಗ ಅಕ್ರಮವಾಗಿ ಒಂದು ಸಮುದಾಯಕ್ಕೆ ಮಂಜೂರು ಮಾಡಿದ್ದ ಜಮೀನುಗಳನ್ನು ಖಾತೆ ಮಾಡಿಕೊಡಲು ಹಾಲಿ ಡಿಸಿ ಅಕ್ರಂಪಾಷಾ ಅವರು, ಎಸಿ, ತಹಸೀಲ್ದಾರ್, ಪೌರಾಯುಕ್ತರ ಮೇಲೆ ಒತ್ತಡ ಹಾಕುತ್ತಿದ್ದಾರೆ, ಇವರಿಗೆ ರಾಜಕೀಯ ಮಾಡುವ ಆಸಕ್ತಿ ಇದ್ದರೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಲಿ ಎಂದರು.

    ಅರಣ್ಯ ಇಲಾಖೆ ಜಂಟಿ ಸರ್ವೆನಡೆಸಿ
    ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಅನ್ಯಾಯವಾಗಿದೆ, ಮೂಲ ದಾಖಲೆ ನೋಡಿದರೆ ದೇಶದಲ್ಲಿ ಶೇ.೫೦ ರಷ್ಟು ಜಮೀನು ತೆರವುಮಾಡಿಸಬೇಕಾಗುತ್ತದೆ, ಕಂದಾಯ ಇಲಾಖೆ, ಸರ್ಕಾರ ಸಾಗುವಳಿ ಚೀಟಿ ನೀಡಿರುವ ಜಮೀನುಗಳನ್ನು ಕೈಬಿಡಲಿ, ಜಂಟಿ ಸರ್ವೆ ನಡೆಸುವ ಮೂಲಕ ರೈತರಿಗೆ ನ್ಯಾಯ ಒದಗಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾಗಿ ತಿಳಿಸಿದರು.

    ಕೋಚಿಮುಲ್‌ನಲ್ಲಿ ನಡೆದಿರುವ ನೇಮಕಾತಿ ಅವ್ಯವಹಾರದ ವಿರುದ್ದ ತನಿಖೆ ನಡೆಸಿ, ಅರ್ಹರಿಗೆ ಉದ್ಯೋಗ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾಗಿ ತಿಳಿಸಿದರು.

    ಚಿತ್ರ ೨೭ ಕೆ.ಎಲ್.ಆರ್. ೦೭ : ಸಂಸದ ಮುನಿಸ್ವಾಮಿ ಭಾವಚಿತ್ರ

    ಸಿದ್ದರಾಮಯ್ಯರಿಂದ ಕಾಟಾಚಾರದ ಪ್ರಗತಿಪರಿಶೀಲನೆ/ಮ್ಯಾಚ್‌ಫಿಕ್ಸಿಂಗ್ಮೊದಲೇ ಪ್ರಶ್ನೆ, ಉತ್ತರ ಸಿದ್ದ/ಜಿಲ್ಲೆಗೆ ಬಿಡಿಗಾಸು ನೀಡಲಿಲ್ಲ/ಮುನಿಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts