More

    ಹುಬ್ಬಳ್ಳಿಯಲ್ಲಿ ಶಾಂತಿಯುತ ಮತದಾನ

    ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಸ್ಥಾಪಿಸಿರುವ ಮತಗಟ್ಟೆಗಳಲ್ಲಿ ಬುಧವಾರ ಶಾಂತಿಯುತ ಮತದಾನ ನಡೆಯಿತು.

    ಬೆಳಗ್ಗೆಯಿಂದಲೆ ಮತಗಟ್ಟೆಯತ್ತ ಆಗಮಿಸಿದ ಮತದಾರರು, ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

    ಬೆಳಗ್ಗೆ ಮತಕೇಂದ್ರಗಳಲ್ಲಿ ತುರುಸಿನ ಮತದಾನ ನಡೆಯಿತು. ಮಧ್ಯಾಹ್ನ ಸ್ವಲ್ಪ ಕಡಿಮೆ ಸಂಖ್ಯೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದರು. ಸಂಜೆ ಆಗುತ್ತಿದ್ದಂತೆ ಮತದಾರರ ಪ್ರಮಾಣದಲ್ಲಿ ಏರಿಕೆ ಕಂಡುಬಂತು.

    ಬಿಸಿಲಿನ ಝುಳ ಹೆಚ್ಚಿದ್ದರಿಂದ ಮತಗಟ್ಟೆಯಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಬಾಯಾರಿಕೆ ತಣಿಸಲು ಕುಡಿಯುವ ನೀರು ಇಡಲಾಗಿತ್ತು.

    ಬಿಗಿ ಬಂದೋಬಸ್ತ್: ಸರತಿ ಸಾಲಿನಲ್ಲಿ ನಿಂತಿದ್ದವರ ಮಧ್ಯೆ ಯಾವುದೇ ತಂಟೆ-ತಕರಾರು ಆಗದಂತೆ ನೋಡಿಕೊಳ್ಳಲು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮಹಿಳೆಯರು, ಪುರುಷರು ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ಸಾಲು ಮಾಡಲಾಗಿತ್ತು. ಮೊದಲು ಹಿರಿಯ ನಾಗರಿಕರಿಗೆ, ನಂತರ ಮಹಿಳೆಯರು ಮತ್ತು ಪುರುಷರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಹಿರಿಯ ನಾಗರಿಕರು ಮತಗಟ್ಟೆಗೆ ತೆರಳಲು ಗಾಲಿಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು.

    ಬಜರ್ ಲೇಟ್: ಬೆಳಗ್ಗೆ ಮತ್ತು ಸಂಜೆ ಮತದಾನ ಮಾಡಲು ನಿಂತವರು ಎರಡು ಗಂಟೆವರೆಗೆ ಕಾದರು. ಕೆಲವರು ಈ ಕುರಿತು ಅಲ್ಲಿನ ಬಿಎಲ್​ಒಗಳನ್ನು ವಿಚಾರಿಸಿದಾಗ, ಇವಿಎಂ ಮತಯಂತ್ರದ ಬಜರ್ ಶಬ್ದ ಲೇಟಾಗಿ ಬರುತ್ತಿರುವುದರಿಂದ ಸರತಿ ಸಾಲು ಕರಗುತ್ತಿಲ್ಲ. ಜರೂರಾಗಿ ಬಜರ್ ಶಬ್ದ ಬಂದಿದ್ದರೆ ಸರತಿ ಸಾಲು ಬೇಗ ಕರಗುತ್ತಿತ್ತು ಎಂದುತ್ತರಿಸಿದರು.

    ಫುಲ್​ಖುಷ್: ಪ್ರಥಮ ಬಾರಿಗೆ ಮತದಾನ ಮಾಡಲು ಆಗಮಿಸಿದ್ದ ಮತದಾರರ ಮೊಗದಲ್ಲಿ ನಗೆ ಬುಗ್ಗೆ ಅರಳಿತು. ತಾವು ಮತದಾನ ಮಾಡಿ ಬಂದು ತಮ್ಮ ಕುಟುಂಬದವರ ಜತೆಗೆ ರ್ಚಚಿಸತೊಡಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts