More

    ವಿಧಾನಸಭೆ ಚುನಾವಣೆ ನಿಮಿತ್ತ ಮತದಾನ ಜಾಗೃತಿ ಜಾಥಾ

    ತೇರದಾಳ: ವಿಧಾನಸಭೆ ಚುನಾವಣೆ ನಿಮಿತ್ತ ತಾಲೂಕು ಸ್ವೀಪ್ ಸಮಿತಿ ಹಾಗೂ ತೇರದಾಳ ಪುರಸಭೆ ಆಶ್ರಯದಲ್ಲಿ ಮತದಾನ ಜಾಗೃತಿನ್ನು ಬುಧವಾರ ಬಹಳಷ್ಟು ವಿಭಿನ್ನವಾಗಿ ಮಾಡಲಾಯಿತು.

    ಶಿಕ್ಷಕರು, ಪುರಸಭೆ ಸಿಬ್ಬಂದಿ, ಪೌರ ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಪಟ್ಟಣದ ವಿವಿಧೆಡೆ ಎತ್ತಿನ ಬಂಡಿ ಹಾಗೂ ಪೂರ್ಣ ಕುಂಭಮೇಳದೊಂದಿಗೆ ಜಾಥಾ ನಡೆಸಿ ಸಾರ್ವಜನಿಕರಿಗೆ ಮತದಾನ ಜಾಗೃತಿ ಮೂಡಿಸಿದರು.

    ಪುರಸಭೆ ಕಾರ್ಯಾಲಯದ ಮುಂಭಾಗ ಜಾಥಾಕ್ಕೆ ಚಾಲನೆ ನೀಡಲಾಯಿತು. ಶಿಕ್ಷಣ ಸಂಯೋಜಕ ಬಿ.ಎಂ.ಹಳೇಮನಿ, ಪುರಸಭೆ ಮುಖ್ಯಾಧಿಕಾರಿ ಎಂ.ಡಿ.ಮುಲ್ಲಾ, ಸಿಆರ್‌ಪಿಗಳಾದ ಅನಂತರಾಜು ಮುಧೋಳ, ಮಹೇಶ ಸೋರಗಾಂವಿ ಮಾತನಾಡಿ, ಮತದಾನ ಪ್ರತಿಯೊಬ್ಬ ಭಾರತೀಯನಿಗೆ ಸಂವಿಧಾನ ಕೊಡಮಾಡಿದ ಹಕ್ಕಾಗಿದೆ. ಯಾವುದೇ ಆಸೆ-ಆಮಿಷ, ಒತ್ತಡಕ್ಕೆ ಒಳಗಾಗದೆ ಪ್ರತಿಯೊಬ್ಬ ನಾಗರಿಕರು ತಮ್ಮ ಹಕ್ಕನ್ನು ತಪ್ಪದೆ ಚಲಾಯಿಸಬೇಕೆಂದರು.

    ಇದನ್ನೂ ಓದಿ : ಡಾ.ದೇವಾನಂದ ಚವಾಣ್ ಟೆಂಪಲ್ ರನ್

    ಪುರಸಭೆಯಿಂದ ಹೊರಟ ಮತದಾನ ಜಾಗೃತಿ ಜಾಥಾ ಎಸ್‌ಬಿಐ ವೃತ್ತ, ಪ್ರಭು ಮಹಾದ್ವಾರ, ಗಣಪತಿ ಮಂದಿರ, ಪೇಠಭಾಗದ ಹನುಮಾನ ಮಂದಿರ, ಸರ್ಕಾರಿ ಚಾವಡಿ, ನಾಡ ಕಾರ್ಯಾಲಯ, ಗೊಂಕ ಜಿನಾಲಯ, ದತ್ತ ಮಂದಿರ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸ್ ನಿಲ್ದಾಣ ಬಳಿಯ ಬಸವೇಶ್ವರ ವೃತ್ತಕ್ಕೆ ಬಂದಿತು.

    ಬಳಿಕ ಕಲಾದಗಿ- ಕಾಗವಾಡ ರಾಜ್ಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ, ಮತದಾನ ಜಾಗೃತಿ ಘೋಷಣೆ ಕೂಗಲಾಯಿತು. ಶಿಕ್ಷಕ ವಿ.ಎಸ್.ಉಪ್ಪಿನ ಪ್ರತಿಜ್ಞಾವಿಧಿ ಹೇಳಿಕೊಟ್ಟರು. ಪುರಸಭೆ ವಾಹನಗಳಿಗೆ ಕಬ್ಬು ಗರಿ ಕಟ್ಟಿ ಅಲಂಕರಿಸಿದ್ದು ಸೇರಿದಂತೆ ಜಾಗೃತಿ ಜಾಥಾ ನೋಡುಗರಿಗೆ ಮದುವೆ ದಿಬ್ಬಣದಂತೆ ಭಾಸವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts