More

    ಎಲ್ಲರೂ ಕಡ್ಡಾಯವಾಗಿ ಹಕ್ಕು ಚಲಾಯಿಸಿ

    ಬಸವಕಲ್ಯಾಣ: ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಎಲ್ಲರಿಗೂ ಮತದಾನ ಮಾಡುವ ಹಕ್ಕು ನೀಡಲಾಗಿದೆ. ಮೇ ೭ರಂದು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸುಭದ್ರ ಸರ್ಕಾರ ರಚಿಸಲು ಸಹಕಾರಿಯಾಗಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಹೇಳಿದರು.

    ಕಲಖೋರಾ ಗ್ರಾಪಂ ವ್ಯಾಪ್ತಿಯ ಹಿಪ್ಪರ್ಗಾ ತಾಂಡಾ, ದೇವಿ ತಾಂಡಾ ಹಾಗೂ ಕಾರಿಗುಂಡಾ ತಾಂಡಾದಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನ ಮಾತನಾಡಿದ ಅವರು, ಐದು ವರ್ಷಕ್ಕೊಮ್ಮೆ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡುವುದು ಬಹಳ ಮುಖ್ಯ. ನೀವು ಮಾಡುವ ಮತದಾನದ ಮೇಲೆ ದೇಶದ ಭವಿಷ್ಯ ನಿಂತಿದೆ. ಹೀಗಾಗಿ ನೀವು ಮತದಾನ ಮಾಡುವುದರ ಜತೆಗೆ ನಿಮ್ಮ ಪಕ್ಕದ ಹಾಗೂ ಗ್ರಾಮದಿಂದ ವಲಸೆ ಹೋದ ಜನರಿಗೂ ಮತದಾನದ ಮಹತ್ವ ತಿಳಿಸಿ, ತಮ್ಮ ಹಕ್ಕು ಚಲಾಯಿಸಲು ತಿಳಿಸಬೇಕು ಎಂದರು.

    ಮತದಾರರು ರಾಜಕೀಯ ಪಕ್ಷಗಳು, ಮುಖಂಡರ ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಒಳಗಾಗದೆ ನಿಮಗೆ ಸೂಕ್ತ ಅನಿಸಿದ ಅಭ್ಯರ್ಥಿಗೆ ಧೈರ್ಯದಿಂದ ಮತ ಹಾಕಿ ಮತ್ತು ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಲು ಓಟರ್ ಹೆಲ್ಲ್ ಲೈನ್ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಹಾಗೂ ೧೯೫೦ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕು ಎಂದರು. ನಂತರ ಮತದಾರರಿಗೆ ಡಿಜಿಟಲ್ ಓಟರ್ ಐಡಿ ಕಾರ್ಡ್ ವಿತರಿಸಿದರು.

    ಪಿಡಿಒ ಕವಿತಾ ಶೃಂಗೇರಿ, ಕಾರ್ಯದರ್ಶಿ ಸುನೀಲಕುಮಾರ ಝೀಳ್ಳಿ, ರಾಕೇಶ ಐನೋಳ್ಳಿ, ಐಇಸಿ ವೀರಾರೆಡ್ಡಿ, ಟಿಎ ಅವಿನಾಶ ಇಟಗಾ, ಡಿಇಒ ಶರಭಶೇಖರ, ಕರವಸೂಲಿಗಾರ ಶೇಖರ ಮುಗಳಿ, ಕಾಯಕ ಮಿತ್ರ ಜ್ಯೋತಿ ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts