More

    ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

    ಸಿರಗುಪ್ಪ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ವತಿಯಿಂದ ನಮ್ಮ ಪಾಲುದಾರ ಕುಟುಂಬದ ಸದಸ್ಯ ಗರ್ಭಿಣಿಯರು, ಬಾಣಂತಿಯರಿಗೆ ಸಹಾಯಧನ, ಶಿಷ್ಯವೇತನ, ಆರೋಗ್ಯ ರಕ್ಷಾಕಾರ್ಡ್ ಮುಂತಾದ ಸೌಲಭ್ಯಗಳನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ತಿಳಿಸಿದರು.

    ಇದನ್ನೂ ಓದಿ:ಗ್ರಾಮೀಣಾಭಿವೃದ್ಧಿ ಯೋಜನೆ ಆರಂಭಿಸಲು ಚಾರುಕೀರ್ತಿಶ್ರೀ ಪ್ರೇರಣೆ

    ನಗರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಚೇರಿಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೋಮವಾರ ಚೆಕ್ ಹಸ್ತಾಂತರಿಸಿ ಮಾತನಾಡಿದರು.
    ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಮ್ಮ ಸಂಸ್ಥೆ ಬಡಜನರ ಏಳಿಗೆಗಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ನಮ್ಮ ಸಂಸ್ಥೆಯ ಪಾಲುದಾರ ಕುಟುಂಬಗಳ ಮಕ್ಕಳು, ಎಂ.ಬಿ.ಬಿ.ಎಸ್, ಎಂ.ಎ., ಬಿ.ಇಡಿ, ಎಂ.ಬಿ.ಎ. ಮುಂತಾದ ವೃತ್ತಿಪರ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಕಾರ್ಯಕ್ರಮದ ಅಡಿ ನಮ್ಮ ಸಂಸ್ಥೆಯಿಂದ 16 ವಿದ್ಯಾರ್ಥಿಗಳಿಗೆ 3.49ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ.

    ಸಾಲ ಸೌಲಭ್ಯ

    ಗರ್ಭಿಣಿಯರಿಗೆ ಸರ್ಕಾರಿ ಅಥವಾ ಖಾಸಗೀ ಆಸ್ಪತ್ರೆಗಳಲ್ಲಿ ಹೆರಿಗೆಯಾದರೆ 4ಸಾವಿರ ರೂ., ಸಿಜರಿನ್ ಆದರೆ 20ಸಾವಿರ ರೂ. ನೆರವನ್ನು ನಮ್ಮ ಸಂಸ್ಥೆ ನೀಡುತ್ತದೆ. ನಮ್ಮ ಸಂಸ್ಥೆಯ ಸದಸ್ಯರಲ್ಲದ ಅಂಗವಿಕಲರಿಗೆ ಬೇಕಾದ ಉಪಕರಣಗಳನ್ನು ಉಚಿತವಾಗಿ ನೀಡುತ್ತೇವೆ. ವ್ಯವಹಾರಕ್ಕಾಗಿ ಸಿಡ್ಬಿ ಯೋಜನೆಯಡಿ ಬ್ಯಾಂಕ್‌ಗಳಲ್ಲಿ ನಾವು ಪ್ರತಿನಿಧಿಗಳಾಗಿ ಸಾಲ ಸೌಲಭ್ಯ ನೀಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts