More

    ರಷ್ಯಾದ ಮಹಿಳೆಯರು ಕನಿಷ್ಠ 8 ಮಕ್ಕಳನ್ನು ಹೊಂದಬೇಕು… ಹೀಗೆಂದು ಕರೆ ನೀಡಿದ್ದು ಯಾರು ಗೊತ್ತೆ?

    ಮಾಸ್ಕೊ: ಜಗತ್ತಿನ ಜನಸಂಖ್ಯೆ 800 ಕೋಟಿ ದಾಟಿದೆ. ಭಾರತವಂತೂ ಚೀನಾವನ್ನು ಹಿಂದಿಕ್ಕಿ ಜಗತ್ತಿನಲ್ಲಿಯೇ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗಿ ಹೊರಹೊಮ್ಮಿದ್ದು, 143 ಕೋಟಿಗೆ ತಲುಪಿದೆ. ಜನಸಂಖ್ಯೆ ಸ್ಫೋಟವನ್ನು ಈ ಹಿಂದೆ ಸಮಸ್ಯೆ ಎಂದು ಪರಿಗಣಿಸಲಾಗುತ್ತಿತ್ತು. ಆದರೀಗ, ಈ ಅಭಿಪ್ರಾಯಗಳು ಬದಲಾಗುತ್ತಿವೆ. ಜನಸಂಖ್ಯೆ ಹೆಚ್ಚಾಗಿರುವುದನ್ನು ಲಾಭದಾಯವಾಗಿ ಮಾಡಿಕೊಳ್ಳುವ, ಆರ್ಥಿಕತೆಯನ್ನು ವೃದ್ಧಿಸಿಕೊಳ್ಳುವ ಲೆಕ್ಕಾಚಾರವನ್ನು ಹಾಕಲಾಗುತ್ತಿದೆ. ಚೀನಾ ಕೂಡ ಒಂದೇ ಮಗು ನೀತಿಯನ್ನು ರದ್ದು ಮಾಡಿ ಜನಸಂಖ್ಯೆ ವೃದ್ಧಿಗೆ ಕ್ರಮ ಕೈಗೊಳ್ಳುತ್ತಿದೆ.

    ಈಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ನಿಟ್ಟಿನಲ್ಲಿ ದೊಡ್ಡ ಹೇಳಿಕೆಯನ್ನೇ ನೀಡಿದ್ದಾರೆ. 8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವಂತೆ ಅವರು ರಷ್ಯಾದ ಮಹಿಳೆಯರಿಗೆ ಕರೆ ನೀಡಿದ್ದಾರೆ.

    ಪುಟಿನ್ ಈ ಹೇಳಿಕೆಯನ್ನು ಯೂಕ್ರೇನ್​ ಯುದ್ಧಕ್ಕೆ ಥಳಕು ಹಾಕಲಾಗುತ್ತಿದೆ. ಈ ಯುದ್ಧದಲ್ಲಿ ಹೆಚ್ಚಿನ ಸಂಖ್ಯೆಯ ರಷ್ಯಾ ಸೈನಿಕರು ಸಾವು-ನೋವು ಅನುಭವಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಪುಟಿನ್​ ಅವರು ತಮ್ಮ ಭಾಷಣದಲ್ಲಿ ಯುದ್ಧದಲ್ಲಿ ರಷ್ಯಾದ ಸೈನಿಕರ ಸಾವನ್ನು ನೇರವಾಗಿ ಉಲ್ಲೇಖಿಸಿಲ್ಲ.

    ಮಾಸ್ಕೋದಲ್ಲಿ ವಿಶ್ವ ರಷ್ಯನ್ ಪೀಪಲ್ಸ್ ಕೌನ್ಸಿಲ್ ಉದ್ದೇಶಿಸಿ ಮಾತನಾಡಿದ ಪುಟಿನ್, ರಷ್ಯಾದ ಜನನ ಪ್ರಮಾಣವು 1990 ರ ದಶಕದಿಂದಲೂ ಕುಸಿಯುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಯೂಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ದೇಶವು 3,00,000ಕ್ಕೂ ಹೆಚ್ಚು ಸಾವುನೋವುಗಳನ್ನು ಅನುಭವಿಸಿದೆ ಎಂದಿದ್ದಾರೆ. ರಷ್ಯಾದ ಜನಸಂಖ್ಯೆಯನ್ನು ಸಂರಕ್ಷಿಸುವುದು ಮತ್ತು ಹೆಚ್ಚಿಸುವುದು ಮುಂಬರುವ ದಶಕಗಳಲ್ಲಿ ಮತ್ತು ಮುಂದಿನ ಪೀಳಿಗೆಗೆ ನಮ್ಮ ಗುರಿಯಾಗಿದೆ. ಇದು ಸಹಸ್ರಮಾನದ, ಶಾಶ್ವತವಾದ ರಷ್ಯಾದ ಭವಿಷ್ಯ ” ಎಂದೂ ಪುಟಿನ್ ಹೇಳಿದ್ದಾರೆ.

    “ನಮ್ಮ ಅನೇಕ ಜನಾಂಗೀಯ ಗುಂಪುಗಳು ನಾಲ್ಕು, ಐದು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳೊಂದಿಗೆ ಬಲವಾದ ಬಹು-ತಲೆಮಾರಿನ ಕುಟುಂಬಗಳನ್ನು ಹೊಂದುವ ಸಂಪ್ರದಾಯವನ್ನು ಸಂರಕ್ಷಿಸಿವೆ. ರಷ್ಯಾದ ಕುಟುಂಬಗಳು, ನಮ್ಮ ಅಜ್ಜಿಯರು ಮತ್ತು ಮುತ್ತಜ್ಜಿಯರಲ್ಲಿ ಏಳು, ಎಂಟು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರು ಎಂಬುದನ್ನು ನಾವು ನೆನಪಿಸಿಕೊಳ್ಳೋಣ” ಎಂದು ಪುಟಿನ್ ಹೇಳಿದ್ದಾರೆ.

    “ನಾವು ಈ ಅತ್ಯುತ್ತಮ ಸಂಪ್ರದಾಯಗಳನ್ನು ಸಂರಕ್ಷಿಸೋಣ; ಪುನರುಜ್ಜೀವನಗೊಳಿಸೋಣ. ದೊಡ್ಡ ಕುಟುಂಬಗಳು ರೂಢಿಯಾಗಬೇಕು, ಕುಟುಂಬವು ಕೇವಲ ರಾಜ್ಯ ಮತ್ತು ಸಮಾಜದ ಅಡಿಪಾಯವಲ್ಲ, ಇದು ಆಧ್ಯಾತ್ಮಿಕ ವಿದ್ಯಮಾನವಾಗಿದೆ, ನೈತಿಕತೆಯ ಮೂಲವಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
    ರಷ್ಯಾದ ಅಧ್ಯಕ್ಷರ ಅಧಿಕೃತ ವೆಬ್‌ಸೈಟ್‌ನಲ್ಲಿ ಪೂರ್ಣ ಭಾಷಣವನ್ನು ಅಪ್‌ಲೋಡ್ ಮಾಡಲಾಗಿದೆ.

    ಯೂಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪಶ್ಚಿಮದಿಂದ ವಿಧಿಸಲಾದ ನಿರ್ಬಂಧಗಳಿಂದಾಗಿ ರಷ್ಯಾವು ತೀವ್ರವಾದ ಉದ್ಯೋಗಿಗಳ ಕೊರತೆ ಮತ್ತು ಆರ್ಥಿಕ ಮಂದಗತಿಗೆ ಸಾಕ್ಷಿಯಾಗಿದೆ ಎನ್ನಲಾಗಿದೆ. 2023ರ ಜನವರಿ 1ರಂದು ರಷ್ಯಾದ ಜನಸಂಖ್ಯೆಯು 14,64,47,424 ಆಗಿತ್ತು, 1999ರಲ್ಲಿ ಪುಟಿನ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಕುಸಿತ ಕಂಡಿದೆ.

    ಡೈರಿ ಪುಟಗಳಿಂದಲೇ ಪ್ಲೇಯಿಂಗ್ ಕಾರ್ಡ್‌ ತಯಾರಿಸಿ ಟೈಮ್​ ಪಾಸ್ ಮಾಡಿದ ಕಾರ್ಮಿಕರು

    ಭಾರತದ ಮೊದಲ ಫೀಲ್ಡ್ ಮಾರ್ಷಲ್ ಕುರಿತ ‘ಸ್ಯಾಮ್ ಬಹದ್ದೂರ್’ ಚಿತ್ರ ಬಿಡುಗಡೆ; ಕಣ್ಣೀರು ಹಾಕಿದ ಪುತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts