More

    ಡೈರಿ ಪುಟಗಳಿಂದಲೇ ಪ್ಲೇಯಿಂಗ್ ಕಾರ್ಡ್‌ ತಯಾರಿಸಿ ಟೈಮ್​ ಪಾಸ್ ಮಾಡಿದ ಕಾರ್ಮಿಕರು

    ನವದೆಹಲಿ: ಉತ್ತರಾಖಂಡದ ಸಿಲ್ಕ್​ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದು ಇಡೀ ದೇಶವೇ ಸಂತಸಪಡುವಂತಾಗಿದೆ. ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಶ್ರಮಿಸಿದ ರಕ್ಷಣಾ ಕಾರ್ಯಕರ್ತರು ರಾಷ್ಟ್ರದ ಜನತೆ ಕೊಂಡಿದ್ದಾರೆ. ಇದೇ ವೇಳೆ, ಅಪಾಯಕಾರಿ ಪರಿಸ್ಥಿತಿಯಲ್ಲಿ 17 ದಿನಗಳ ಕಾಲ ಸುರಂಗದಲ್ಲಿ ಕಾರ್ಮಿಕರು ತಾಳ್ಮೆಯಿಂದ ಕಳೆದಿರುವುದನ್ನೂ ಅಚ್ಚರಿಯಿಂದಲೇ ಶ್ಲಾಘಿಸಿದ್ದಾರೆ.

    ಹೀಗಾಗಿ, 17 ದಿನಗಳ ಕಾಲ ಸುರಂಗದೊಳಗೆ ಸಮಯ ಕಳೆಯಲು ಈ ಕಾರ್ಮಿಕರು ಏನೇನು ಮಾಡಿದರು ಎಂಬ ಕುತೂಹಲಗಳು ಗರಿಗೆದರುತ್ತಲೇ ಇವೆ. ಸುರಂಗದಲ್ಲಿ ಸಿಲುಕಿದ ಕಾರ್ಮಿಕರು ಬಾಲ್ಯದ ಆಟಗಳನ್ನು ಆಡಿದ್ದಾರೆ. ವಾಕಿಂಗ್ ಮಾಡುವ ಮೂಲಕ ಟೈಮ್​ ಪಾಸ್​ ಮಾಡಿದ್ದಾರೆ. ಅಲ್ಲದೆ, ಪ್ಲೇಯಿಂಗ್ ಕಾರ್ಡ್ (ಇಸ್ಪೀಟ್​) ಆಡಿದ್ದಾರೆ.

    ಸುರಂಗವು ಉದ್ದವಾಗಿರುವುದರಿಂದ ನಾವು ಸಮಯ ಕಳೆಯಲು ಒಳಗಡೆಯೇ ನಾವು ವಾಕಿಂಗ್ ಮಾಡುತ್ತಿದ್ದೇವು ಎಂದೂ ಕಾರ್ಮಿಕರು ಹೇಳಿದ್ದಾರೆ.

    .”ನಾವು ಸಮಯ ಕಳೆಯಲು ರಾಜಾ, ಮಂತ್ರಿ, ಚೋರ್, ಸಿಪಾಹಿಯಂತಹ ಬಾಲ್ಯದ ಆಟಗಳನ್ನು ಆಡುತ್ತಿದ್ದೇವು” ಎಂದು ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಮೋತಿಪುರ್ ನಿವಾಸಿ ಅಂಕಿತ್ ಅಂಕಿತ್ ಸ್ಮರಿಸಿದ್ದಾರೆ.

    ತಮ್ಮಲ್ಲಿರುವ ಪೆನ್ ಮತ್ತು ಡೈರಿಯನ್ನು ಬಳಸಿಕೊಂಡ ಕಾರ್ಡ್ ತಯಾರಿಸುವ ಮೂಲಕ ಇಸ್ಪೀಟ್​ ಆಡಿರುವುದನ್ನೂ ಅಂಕಿತ ಬಹಿರಂಗಪಡಿಸಿದ್ದಾರೆ.

    ಸುರಂಗದೊಳಗೆ ಹೆಚ್ಚು ಚಳಿ ಇರಲಿಲ್ಲ. ಮೂಲಸೌಕರ್ಯ ಕೆಲಸಕ್ಕೆ ಬಳಸುವ ಸಿಂಥೆಟಿಕ್ ಟೆಕ್ಸ್‌ಟೈಲ್ ಫ್ಯಾಬ್ರಿಕ್ ವಸ್ತುಗಳಾದ ಜಿಯೋಟೆಕ್ಸ್‌ಟೈಲ್‌ಗಳ ಮೇಲೆ ಮಲಗುತ್ತಿದ್ದೇವೆ. ಮಲಗುವಾಗ ಜಿಯೋಟೆಕ್ಸ್‌ಟೈಲ್‌ಗಳನ್ನು ಕಂಬಳಿಯಾಗಿ ಬಳಸುತ್ತಿದ್ದೆವು ಎಂದು ಅಂಕಿತ್ ಹೇಳಿದ್ದಾರೆ.

    ಸುರಂಗದೊಂದಿಗೆ ಕಾರ್ಮಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ವೀಡಿಯೊಗಳಲ್ಲಿ ಹಣ್ಣುಗಳ ರಾಶಿಯೇ ಕಂಡುಬರುತ್ತದೆ. ಏಕೆಂದರೆ, ಅವರು ಸೇವಿಸುವುದಕ್ಕಿಂತ ಹೆಚ್ಚಿನ ಪ್ರಮಾಣದ ಹಣ್ಣುಗಳನ್ನು ಪೈಪ್​ಗಳ ಮೂಲಕ ಒಳಗಡೆ ರವಾನಿಸಲಾಗಿತ್ತು. ಕಾರ್ಮಿಕರು ರೊಟ್ಟಿ, ತರಕಾರಿ ಮತ್ತು ಅನ್ನ ಸೇವಿಸಿ ಸಂತಸವಾಗಿರುವುದು ಕೂಡ ಫೋಟೋಗಳಲ್ಲಿ ಕಂಡುಬಂದಿದೆ. ಬ್ರೆಡ್ ಮತ್ತು ಹಾಲು ಸೇವಿಸುವುದನ್ನು ಸಹ ಕಾಣಬಹದಾಗಿದೆ.

    ನವೆಂಬರ್ 12 ರಂದು ಸುರಂಗದ ಒಂದು ಭಾಗವು ಕುಸಿದ ನಂತರ 41 ಕಾರ್ಮಿಕರು ಇಲ್ಲಿ ಸಿಕ್ಕಿಬಿದ್ದಿದ್ದರು. ಕೈಯಿಂದ ಗಣಿ ಅಗೆಯುವ ಇಲಿ-ಬಿಲ ಗಣಿಗಾರರು ರಂಧ್ರವನ್ನು ಕೊರೆದ ನಂತರ ನವೆಂಬರ್ 28 ರಂದು ಇವರನ್ನು ರಕ್ಷಿಸಿ ಹೊರತರಲಾಗಿತ್ತು.

    ಭಾರತದ ಮೊದಲ ಫೀಲ್ಡ್ ಮಾರ್ಷಲ್ ಕುರಿತ ‘ಸ್ಯಾಮ್ ಬಹದ್ದೂರ್’ ಚಿತ್ರ ಬಿಡುಗಡೆ; ಕಣ್ಣೀರು ಹಾಕಿದ ಪುತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts