ಡೈರಿ ಪುಟಗಳಿಂದಲೇ ಪ್ಲೇಯಿಂಗ್ ಕಾರ್ಡ್‌ ತಯಾರಿಸಿ ಟೈಮ್​ ಪಾಸ್ ಮಾಡಿದ ಕಾರ್ಮಿಕರು

ನವದೆಹಲಿ: ಉತ್ತರಾಖಂಡದ ಸಿಲ್ಕ್​ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದು ಇಡೀ ದೇಶವೇ ಸಂತಸಪಡುವಂತಾಗಿದೆ. ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಶ್ರಮಿಸಿದ ರಕ್ಷಣಾ ಕಾರ್ಯಕರ್ತರು ರಾಷ್ಟ್ರದ ಜನತೆ ಕೊಂಡಿದ್ದಾರೆ. ಇದೇ ವೇಳೆ, ಅಪಾಯಕಾರಿ ಪರಿಸ್ಥಿತಿಯಲ್ಲಿ 17 ದಿನಗಳ ಕಾಲ ಸುರಂಗದಲ್ಲಿ ಕಾರ್ಮಿಕರು ತಾಳ್ಮೆಯಿಂದ ಕಳೆದಿರುವುದನ್ನೂ ಅಚ್ಚರಿಯಿಂದಲೇ ಶ್ಲಾಘಿಸಿದ್ದಾರೆ. ಹೀಗಾಗಿ, 17 ದಿನಗಳ ಕಾಲ ಸುರಂಗದೊಳಗೆ ಸಮಯ ಕಳೆಯಲು ಈ ಕಾರ್ಮಿಕರು ಏನೇನು ಮಾಡಿದರು ಎಂಬ ಕುತೂಹಲಗಳು ಗರಿಗೆದರುತ್ತಲೇ ಇವೆ. ಸುರಂಗದಲ್ಲಿ ಸಿಲುಕಿದ ಕಾರ್ಮಿಕರು ಬಾಲ್ಯದ ಆಟಗಳನ್ನು ಆಡಿದ್ದಾರೆ. … Continue reading ಡೈರಿ ಪುಟಗಳಿಂದಲೇ ಪ್ಲೇಯಿಂಗ್ ಕಾರ್ಡ್‌ ತಯಾರಿಸಿ ಟೈಮ್​ ಪಾಸ್ ಮಾಡಿದ ಕಾರ್ಮಿಕರು