More

    ಬ್ರಿಟನ್ ಸಂಸತ್ತಿನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪ್ರಚಾರ! ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಆಹ್ವಾನ

    ಮುಂಬೈ: 1990 ರಲ್ಲಿ ಕಾಶ್ಮೀರ್ ಪಂಡಿತರು ಮುಸ್ಲೀಮರಿಂದ ಅನುಭವಿಸಿದ ನರಕವನ್ನು ಎಳೆ ಎಳೆಯಾಗಿ ತೋರಿಸಿದೆ ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ. ಈ ಚಿತ್ರದ ಮೂಲಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಹೆಸರು ಇಡೀ ದೇಶಕ್ಕೆ ಚಿರಪರಿಚಿತವಾಗಿದೆ. ಹೌದು, 18 ದಿನಗಳಲ್ಲಿ 231 ಕೋಟಿ ಗಳಿಸಿದ ಈ ಸಿನಿಮಾದಿಂದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಇಡೀ ದೇಶದಲ್ಲಿ ಬಹುತೇಕ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ, ಕೇವಲ ನಮ್ಮ ದೇಶದಲ್ಲಿ ಅಲ್ಲದೇ, ನಿರ್ದೇಶಕ ವಿವೇಕ್ ಅವರು ಬೇರೆ ದೇಶವೊಂದರಲ್ಲಿಯೂ ಅವರ ಸಿನಿಮಾದ ಸಂದೇಶವನ್ನು ತಿಳಿಸಲು ಹೊರಟಿದ್ದಾರೆ.
    ಹೌದು, ಸದ್ಯ ವಿವೇಕ್ ಅಗ್ನಿಹೋತ್ರಿ ಅವರ ಸಿನಿಮಾಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಬ್ರಿಟನ್ ಸಂಸತ್ತಿನಿಂದ ಅವರಿಗೆ ವಿಶೇಷ ಆಹ್ವಾನ ಬಂದಿದೆಯಂತೆ. ಈ ಬಗ್ಗೆ ಸ್ವತಃ ವಿವೇಕ್ ಅಗ್ನಿಹೋತ್ರಿ ಅವರು, ”ಪತ್ನಿ ಪಲ್ಲವಿ ಮತ್ತು ನನ್ನನ್ನು ಬ್ರಿಟನ್ ಸಂಸತ್​ನವರು ಆಹ್ವಾನಿಸಿದ್ದಾರೆ. ಮುಂದಿನ ತಿಂಗಳು ನಾವು ಅಲ್ಲಿಗೆ ಹೋಗುತ್ತೇವೆ. ಕಾಶ್ಮೀರಿ ಪಂಡಿತರ ನರಮೇಧದ ಸಂದೇಶವನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸುವ ಉದ್ದೇಶದಿಂದ ಕಾಶ್ಮೀರಿ ಫೈಲ್ಸ್ ಸಿನಿಮಾ ಮಾಡಲಾಗಿದೆ. ಬ್ರಿಟನ್ ಸಂಸತ್ತಿಗೆ ಹೋಗುತ್ತಿರುವುದಕ್ಕೆ ನನಗೆ ಖುಷಿಯಿದೆ”, ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
    ಅಂದಹಾಗೆ, ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದಲ್ಲಿ ಹಿಂದಿ ಮಾತನಾಡುವವರ ಹಾಗೂ ಅರ್ಥೈಸಿಕೊಳ್ಳುವವರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸಂಪೂರ್ಣವಾಗಿ ಹಿಂದಿಯಲ್ಲೇ ಇದೆ. ಹೀಗಾಗಿ, ಎಲ್ಲಾ ವಿಚಾರಗಳು ದಕ್ಷಿಣ ಭಾರತದವರಿಗೆ ಅರ್ಥವಾಗದೇ ಇರಬಹುದು. ಈ ಕಾರಣಕ್ಕೆ ಸಿನಿಮಾವನ್ನು ಕನ್ನಡ ಮೊದಲಾದ ದಕ್ಷಿಣದ ಭಾಷೆಗಳಿಗೆ ಡಬ್ ಮಾಡಲು ಚಿಂತನೆ ನಡೆಯುತ್ತಿದೆ. ಈ ಬಗ್ಗೆಯೂ ವಿವೇಕ್ ಮಾಹಿತಿ ನೀಡಿದ್ದಾರೆ. ಇಡೀ ದೇಶಕ್ಕೆ ಈ ಸಿನಿಮಾ ಅರ್ಥವಾಗಬೇಕು ಎಂದು ತಪಿಸುತ್ತಿರುವ ವಿವೇಕ್ ಅವರು ವಿದೇಶಿಗರಿಗೂ ಕಾಶ್ಮೀರ್ ಪಂಡಿತರ ಕಷ್ಟವನ್ನು ತಿಳಿಸಲು ನಿರ್ಧರಿಸಿದ್ದಾರೆ ಎಂದರೆ ಆಶ್ಚರ್ಯ ಇಲ್ಲ

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪವರ್ ಸ್ಟಾರ್; ಅಭಿಮಾನಿಗಳ ಜತೆ ಪವನ್ ಕಲ್ಯಾಣ್ ಸೆಲ್ಫಿ!

    ರಾಜಮೌಳಿ ಮೇಲೆ ಅಸಮಾಧಾನ: ಗಾಸಿಪ್​ಗೆ ತುಪ್ಪ ಸುರಿದ ನಟಿ ಆಲಿಯಾ ಭಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts