More

    ಹೊಸದುರ್ಗ ವಿಠ್ಠಲ ರುಕುಮಾಯಿ ಮಂದಿರದಲ್ಲಿ ಪೋತಿ ಸ್ಥಾಪನೆ

    ಹೊಸದುರ್ಗ: ಪಟ್ಟಣದ ವಿಠ್ಠಲ ರುಕುಮಾಯಿ ಮಂದಿರದಲ್ಲಿ ಗುರುವಾರ 87 ನೇ ವರ್ಷದ ದಿಂಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಎರಡು ದಿನಗಳ ಕಾಲ ನಡೆಯಲಿರುವ ದಿಂಡಿ ಉತ್ಸವದಲ್ಲಿ ಭಾವಸಾರ ಕ್ಷತ್ರಿಯ ಸಮಾಜದವರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

    ಉತ್ಸವದ ಪೂರ್ವಭಾವಿಯಾಗಿ ದೇವಾಲಯದಲ್ಲಿ ಪೋತಿ ಸ್ಥಾಪನೆ ಕಾರ್ಯಕ್ರಮ ನೆರವೇರಿತು. ಪಟ್ಟಣದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸಮಾಜದ ಬಾಂಧವರು ವೀಣಾ, ತಾಳ, ಬಾಲಗೋಪಾಲಗಳ ಮೆರವಣಿಗೆ ನಡೆಸಿದರು.

    ಭದ್ರಾವತಿ ಬಸಪ್ಪ ಮಾಸ್ಟರ್ ಹಾಗೂ ಹ.ಬ.ಪ ಮಹೇಂದ್ರನಾಥ ಸಂಗಡಿಗರು ಪಾಂಡುರಂಗ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಸಾಮೂಹಿಕ ಜಪನಾಮ, ಪಾವುಲ್ ಭಜನೆ, ಪಾಳಿ ಭಜನೆ, ಬಾರೂಡ ಹಾಗೂ ಗೌಳಣ ಭಜನೆ ಕಾರ್ಯಕ್ರಮಗಳು ನಡೆದವು. ಸತೀಶ ಕುಳಗಟ್ಟೆ ಸಂಜೆ ಕನ್ನಡದಲ್ಲಿ ಜ್ಞಾನೇಶ್ವರಿ ಪ್ರವಚನ ನಡೆಸಿಕೊಟ್ಟರು.

    ದಿಂಡಿ ಉತ್ಸವವನ್ನು ಪ್ರತಿ ವರ್ಷ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶುಕ್ರವಾರ ಉತ್ಸವದ ಪ್ರಮುಖ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. ವಿಠ್ಠಲ ರುಕುಮಾಯಿ ಮಂದಿರದಲ್ಲಿ ಬೆಳಗ್ಗೆ ಕಾಕಡಾರತಿ, ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಪೂಜೆ, ಮಹಾಮಂಗಳಾರತಿ ಸೇವೆ ನಡೆಯಲಿದ್ದು, ದೇವರ ರಾಜಬೀದಿ ಉತ್ಸವ ನೆರವೇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts