More

  ಹೋರಾಟದ ಪಲವೇ ರಾಮ ಮಂದಿರ

  ಕುಲಗೋಡ: ದೇಶ, ಸಂಸ್ಕೃತಿ, ಧರ್ಮ, ಗೋ ರಕ್ಷಣೆಗೆ ಪ್ರತಿಯೊಬ್ಬರು ಹೋರಾಡಬೇಕು. ಹೋರಾಟದ ಲವೇ ಅಯೋಧ್ಯೆ ಶ್ರೀ ರಾಮ ಮಂದಿರ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.

  ಗ್ರಾಮದಲ್ಲಿ ಶಿವ-ಬಸವ ಜಯಂತಿ ನಿಮಿತ್ತ ಭವ್ಯ ಶೋಭಾ ಯಾತ್ರೆ ಹಾಗೂ ಸಮಾರೋಪ ಕಾರ್ಯಕ್ರಮ ಸೋಮವಾರ ಉದ್ಘಾಟಿಸಿ ಮಾತನಾಡಿ, ಜಾತಿ ತೊಲಗಿಸಿ ಸರ್ವರನ್ನು ಒಗ್ಗೂಡಿಸುವ ಕಾಯಕ ಮಾಡಿದ ಬಸವಣ್ಣ ಹಾಗೂ ತಾಯಿ ಮಾತಿನಂತೆ ಗೋ ರಕ್ಷಣೆಗೆ ನಿಂತ ಶಿವಾಜಿ ಮಹಾರಾಜರ ಆದರ್ಶ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

  ಸಂಜೆ ಅಂಬಾಭವಾನಿ ದೇವಸ್ಥಾನದಲ್ಲಿ ಭವ್ಯ ಶೋಭಾಯಾತ್ರೆ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಹಂದಿಗುಂದದ ಶ್ರೀಮಂತ ಸದ್ಗುರು ಶಿವಯೋಗಿಗಳು, ಬಲಭೀಮ ದೇವರ ಅರ್ಚಕ ಹನುಮಂತ ಪೂಜೇರಿ, ಬಸನಗೌಡ ಪಾಟೀಲ, ಸುಭಾಷ ವಂಟಗೋಡಿ, ಸುನೀಲ ವಂಟಗೋಡಿ, ಗ್ರಾಪಂ ಅಧ್ಯಕ್ಷ ತಮ್ಮಣ್ಣ ದೇವರ, ಪಿಎಸ್‌ಐ ಗೋವಿಂದಗೌಡ ಪಾಟೀಲ, ಸೋಮಲಿಂಗ ಮಿಕಲಿ, ಬಸವಣ್ಣೆಪ್ಪ ಗಡಾದ, ಮುರಗೆಪ್ಪ ಯಕ್ಸಂಬಿ, ಶಂಕರ ಹಾದಿಮನಿ, ಲಕ್ಷ್ಮಣ ಯಡ್ರಾಂವಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts