More

    ವಿಶ್ವದ ಗಮನ ಸೆಳೆಯಲಿದೆ ಕಲ್ಯಾಣ

    ಬಸವಕಲ್ಯಾಣ: ಬಸವಾದಿ ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಲ್ಯಾಣ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದಿ ವಿಶ್ವದ ಗಮನ ಸೆಳೆಯಲಿದೆ ಎಂದು ಕ್ಷೇತ್ರ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು.

    ಅರಿವು ಆಚಾರ ಅನುಭವ ಕೇಂದ್ರದಲ್ಲಿ ಬಸವಕಲ್ಯಾಣದ ಸಮಗ್ರ ಅಭಿವೃದ್ಧಿ ಕುರಿತು ಭಾನುವಾರ ನ್ಯಾಯವಾದಿಗಳು ಮತ್ತು ಪ್ರಮುಖರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬರುವ ದಿನಗಳಲ್ಲಿ ಪ್ರತಿದಿನ ಕಲ್ಯಾಣಕ್ಕೆ ದೇಶ ವಿದೇಶಗಳಿಂದ ಕನಿಷ್ಠ ೫ ಸಾವಿರ ಜನ ಯಾತ್ರಾರ್ಥಿಗಳ, ಪ್ರವಾಸಿಗರು ಭೇಟಿ ನೀಡಲಿದ್ದಾರೆ. ಅವರಿಗೆ ಎಲ್ಲ ಸೌಲಭ್ಯಗಳನ್ನು ಸಿಗುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

    ೧೨ನೇ ಶತಮಾನದಲ್ಲಿ ಬಸವಾದಿ ಶಿವಶರಣರು ವಚನ ಸಾಹಿತ್ಯದ ಮೂಲಕ ವಿಶ್ವಕ್ಕೆ ಬೆಳಕು ನೀಡಿದ ಪವಿತ್ರ ಕ್ಷೇತ್ರ ಬಸವಕಲ್ಯಾಣ. ಹೀಗಾಗಿ ಈ ನೆಲ ಸಮಗೃವಾಗಿ ಅಭಿವೃದ್ಧಿ ಪಡೆಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಅವಶ್ಯಕವಾಗಿದೆ. ಜತೆಗೆ ಬಸವ ತತ್ವ, ವಚನ ಸಾಹಿತ್ಯ ಪ್ರಚಾರ-ಪ್ರಸಾರ ವ್ಯಾಪಕವಾಗಿ ನಡೆಯಬೇಕಿದ್ದು, ಇದಕ್ಕೆ ಎಲ್ಲರ ಸಹಕಾರವೂ ಬೇಕು ಎಂದರು.

    ಬಸವ ಕಲ್ಯಾಣ ಕ್ಷೇತ್ರ ಸಮಿತಿ ಹಾಗೂ ವಿಶ್ವ ಬಸವ ಧರ್ಮ ಟ್ರಸ್ಟ್ ಮತ್ತು ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯ ಪದಾಧಿಕಾರಿಗಳ ಸಹಕಾರದೊಂದಿಗೆ ಬಸವಕಲ್ಯಾಣವು ಭಾರತದ ಶ್ರೇಷ್ಠ ಪ್ರವಾಸಿತಾಣ ಆಗಬೇಕು ಎಂಬುವ ಸಂಕಲ್ಪ ಸಮಿತಿಯ ಆಶಯವಾಗಿದೆ ಎಂದರು.

    ಬಸವರಾಜ ಪಾಟೀಲ್ ಸೇಡಂ ಅವರನ್ನು ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ ಸತ್ಕರಿಸಿದರು. ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಡಾ. ಮಹೇಶ ಪಾಟೀಲ್, ನಿವೃತ್ತ ಪ್ರಾಚಾರ್ಯ ಪ್ರೊ.ಜಿ.ಎಸ್.ಕರ್ಣೆ, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಬಿ.ಪರ್ತಾಪುರೆ, ಪ್ರಮುಖರಾದ ಪಂಡಿತ ನಾಗರಾಳೆ, ಚನ್ನಮಲ್ಲಿಕಾರ್ಜುನ ಸಿಗೇದಾರ, ರಾಜಕುಮಾರ ಬಿರಾದಾರ, ಮಲ್ಲಿಕಾರ್ಜುನ ಆಲಗೂಡೆ, ಭೀಮಾಶಂಕರ ಮಾಶಾಳಕರ, ಶಾಮರಾವ ಸಿಂಗ್, ವೀರಣ್ಣ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts