More

    ವಿಸ್ತಾರ ಏರ್​ಲೈನ್​ಗೆ ಬಂತು ಮೊದಲು ಬೋಯಿಂಗ್​ ವಿಮಾನ

    ನವದೆಹಲಿ: ವಿಸ್ತಾರ ಏರ್​ಲೈನ್​ ಸಂಸ್ಥೆಯು ಬೋಯಿಂಗ್​ ವಿಮಾನಗಳನ್ನು ಖರೀದಿ ಮಾಡಿದ್ದು ಇಂದು ಮೊದಲ ಬೋಯಿಂಗ್​ ವಿಮಾನವು ಸಂಸ್ಥೆಯ ಕೈ ಸೇರಿದೆ.

    ಅಮೆರಿಕದ ವಾಷಿಂಗ್ಟನ್​ನಲ್ಲಿ ಬೋಯಿಂಗ್​ ವಿಮಾನವನ್ನು ವಿಸ್ತಾರಕ್ಕೆ ಹಸ್ತಾಂತರಿಸಲಾಗಿದ್ದು ಅಲ್ಲಿಂದ ಹೊರಡಲಿರುವ ವಿಮಾನವು ನಾಳೆ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ದೆಹಲಿಗೆ ಬಂದು ಸೇರಲಿದೆ. VT-TSD ನೋಂದಣಿ ಸಂಖ್ಯೆ ಹೊಂದಿರುವ ಬೋಯಿಂಗ್​ 787-9 ವಿಮಾನವು ವಿಸ್ತಾರ ಏರ್​ಲೈನ್​ನ ಮೊದಲ ಬೋಯಿಂಗ್​ ವಿಮಾನವಾಗಿ ಹಾರಾಟವನ್ನು ನಡೆಸಲಿದೆ.

    ಬೋಯಿಂಗ್​ 787-9 ವಿಮಾನವು ಒಟ್ಟು 299 ಸೀಟುಗಳನ್ನು ಹೊಂದಿದೆ. ಬಿಸಿನೆಸ್​, ಎಕಾನಮಿ ಮತ್ತು ಪ್ರೀಮಿಯಂ ಎಕಾನೆಮಿ ಹೆಸರಿನ ಮೂರು ಕ್ಲಾಸ್​ಗಳನ್ನು ಮಾಡಲಾಗಿದೆ. ಪ್ರತಿ ಆಸನದಲ್ಲಿಯೂ ಪ್ಯಾನಸೋನಿಕ್​ ಅವರ ಎಚ್​ಡಿ ಡಿಸ್​​ಪ್ಲೇಗಳನ್ನಿಡಲಾಗಿದ್ದು ವೈ-ಫೈ ಸೌಲಭ್ಯ ನೀಡಲಾಗಿದೆ. ಈ ವಿಮಾನವು ವಿಸ್ತಾರ ಏರ್​ಲೈನ ಮೊದಲ ವೈ-ಫೈ ಸೇವೆ ಹೊಂದಿರುವ ವಿಮಾನವಾಗಿಯೂ ಗುರುತಿಸಿಕೊಳ್ಳಲಿದೆ.

    ಒಟ್ಟು ಆರು ಬೋಯಿಂಗ್​ ವಿಮಾನಗಳನ್ನು ವಿಸ್ತಾರ ಏರ್​ಲೈನ್​ ಖರೀದಿಸಿದೆ. ಆ ಪೈಕಿ ಮೊದಲ ವಿಮಾನ ಇದೀಗ ಸಂಸ್ಥೆಯ ಕೈ ಸೇರಿದ್ದು, ಎರಡನೆಯ ವಿಮಾನ ನಿರ್ಮಾಣ ಹಂತದಲ್ಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts