More

    ರನ್‌ವೇಯಿಂದ ಸ್ಕಿಡ್ ಆಗಿ ಸಮುದ್ರಕ್ಕೆ ಬಿದ್ದಿದ್ದ ಯುಎಸ್ ನೌಕಾಪಡೆಯ ವಿಮಾನ; ಎಲ್ಲರೂ ಸುರಕ್ಷಿತ

    ವಾಷಿಂಗ್ಟನ್: ಜೋರು ಮಳೆ ಬರುತ್ತಿದ್ದ ಸಮಯದಲ್ಲಿ ಯುಎಸ್ ನೌಕಾಪಡೆಯ ಮಿಲಿಟರಿ ವಿಮಾನವು ಸಮುದ್ರಕ್ಕೆ ಪತನಗೊಂಡಿದೆ. ಸೋಮವಾರದಂದು ವಿಮಾನವು ರನ್‌ವೇಯಿಂದ ಸ್ಕಿಡ್ ಆಗಿ ಕನೋಹೆ ಕೊಲ್ಲಿಯಲ್ಲಿ ಬಿದ್ದಿದೆ.  ಹೊನೊಲುಲುವಿನಿಂದ 10 ಮೈಲಿ ದೂರದಲ್ಲಿರುವ ಯುಎಸ್ ಮೆರೈನ್ ಬೇಸ್‌ನಲ್ಲಿ ಈ ಘಟನೆ ಸಂಭವಿಸಿದೆ. ವಿಮಾನದಲ್ಲಿ ಒಂಬತ್ತು ಸಿಬ್ಬಂದಿಗಳಿದ್ದು, ಯಾರಿಗೂ ಅಪಾಯವಾಗಿಲ್ಲ. ಅವರನ್ನು ದೋಣಿಯ ಮೂಲಕ ದಡಕ್ಕೆ ರಕ್ಷಿಸಲಾಗಿದೆ. 

    ಸಮುದ್ರದಲ್ಲಿ ತೇಲುತ್ತಿರುವ ವಿಮಾನ
    ಇದು ಯುಎಸ್​​ ನೌಕಾಪಡೆಯ P-8A ವಿಮಾನವಾಗಿದ್ದು, ಲ್ಯಾಂಡಿಂಗ್ ತಪ್ಪಿ ಸಮುದ್ರಕ್ಕೆ ಬಿದ್ದಿತು. ಅಪಘಾತದ ವೇಳೆ ಧಾರಾಕಾರ ಮಳೆ ಸುರಿಯುತ್ತಿತ್ತು. ರಿವೀಲ್ ಆಗಿರುವ ವಿಡಿಯೋಗಳಲ್ಲಿ ವಿಮಾನವು ಕನೋಹೆ ಕೊಲ್ಲಿಯಲ್ಲಿ ತೇಲುತ್ತಿರುವುದನ್ನು ತೋರಿಸಲಾಗಿದೆ. ರಕ್ಷಕರು ಸಹಾಯಕ್ಕೆ ಧಾವಿಸುತ್ತಿದ್ದು, “ಹಡಗಿನಲ್ಲಿದ್ದ ಪ್ರತಿಯೊಬ್ಬರನ್ನು ರಕ್ಷಿಸಲಾಗಿದೆ” ಎಂದು ಕೋಸ್ಟ್ ಗಾರ್ಡ್ ವಕ್ತಾರ ರಯಾನ್ ಫಿಶರ್ ಹೇಳಿದ್ದಾರೆ.

    ನೌಕಾಪಡೆಯ ಗುಪ್ತಚರ ವಿಮಾನ P-8A
    ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಯುಎಸ್ ನೌಕಾಪಡೆಯ P-8A ವಿಮಾನವನ್ನು ಬಳಸಲಾಗುತ್ತದೆ. P-8A ಅನ್ನು ಬೋಯಿಂಗ್‌ನಿಂದ ತಯಾರಿಸಲಾಗುತ್ತದೆ. ಗುಪ್ತಚರ ಮಾಹಿತಿಗಾಗಿ ಕನೋಹೆ ನೇವಲ್​​​ ಬೇಸ್​​​ನಲ್ಲಿ P-8A ವಿಮಾನವನ್ನು ನಿಯೋಜಿಸಲಾಗಿದೆ. ಈ ಅವಘಡಲ್ಲಿ ವಿಮಾನದ ಮುಂಭಾಗಕ್ಕೂ ಹಾನಿಯಾಗಿದೆ ಎನ್ನಲಾಗಿದೆ. 

    ‘ನಮ್ಮ ಮೆಟ್ರೋ’ದಲ್ಲಿ ಕಿರುಕುಳ: ಯುವತಿ ಕಿರುಚುತ್ತಿದ್ದರೂ ಕ್ಯಾರೇ ಎನ್ನದ ಸಹ ಪ್ರಯಾಣಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts