More

    ವಿಧಾನಸಭೆಯಲ್ಲಿ ಪ್ರತಿಪಕ್ಷದ ಪಾತ್ರ ನೋವು ತಂದಿದೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

    ಬೆಂಗಳೂರು: ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷದ ಪಾತ್ರ ಅತ್ಯಂತ ನೋವು ತಂದಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

    ಸದನವನ್ನು ರಾಜಕೀಯ ವೇದಿಕೆಯನ್ನಾಗಿ ಮಾಡಿಕೊಳ್ಳುವ ಮನಸ್ಥಿತಿ ಯಿಂದ ಹೊರಬರಬೇಕು. ಈ ವಿಚಾರವನ್ನು ನಾನು ಪ್ರತಿಪಕ್ಷಗಳಲ್ಲಿ ಮಾಡಿಕೊಳ್ಳುತ್ತೇನೆ. ಪ್ರತಿಪಕ್ಷವಾಗಿ ಅವರದ್ದೇ ಆದ ಜವಾಬ್ದಾರಿ ಇರುತ್ತದೆ. ಈ ಬಾರಿ ಅವರು ನಡೆದುಕೊಂಡ ರೀತಿ ತುಂಬಾ ನೋವುಂಟು ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ನಮ್ಮ ಸಂಸದೀಯ ವ್ಯವಸ್ಥೆಗೆ ಶಕ್ತಿ ಬರಬೇಕು ಎಂದರೆ ಪ್ರತಿಪಕ್ಷ ಕೂಡ ಮುಖ್ಯ. ಅಧಿವೇಶವನ್ನು ಜವಬ್ದಾರಿಯುತವಾಗಿ ನಡೆಸಬೇಕಾಗಿದೆ. ಇದಕ್ಕೆ ಶಾಸಕರು, ಸಚಿವರು ಹಾಗೂ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಮುಖ್ಯ ಎಂದರು.

    ಇದನ್ನೂ ಓದಿರಿ: ಆಗ ಸಿಡಿ ಕೇಸ್‌ ಅಂದ್ರು… ಈಗ ಒಂದೇ ಹೆಂಡ್ತಿ ಅಂದ್ರು… ಒಟ್ನಲ್ಲಿ ಪಲಾಯನ ಮಾಡಲು ಏನೋ ಒಂದ್‌ ಬೇಕು…

    ಅಟೆಂಡೆನ್ಸ್​ನಲ್ಲಿ ಸಹಿ ಇರುತ್ತದೆ. ಆದರೆ, ಖುರ್ಚಿಗಳು ಖಾಲಿಯಾಗಿರುತ್ತವೆ. ಕಾರಣ ನೀಡಿ ಗೈರಾಗುತ್ತಿದ್ದಾರೆ. ಇದು ಸರಿಯಲ್ಲ ಎಂದು ತಿಳಿಸಿದರು. ಜನರ ಭಾವನೆ, ಅವರ ಕಷ್ಟಗಳನ್ನು ಇಲ್ಲಿ ಹೇಳುವುದಕ್ಕೆ ಜನಪ್ರತಿನಿಧಿಗಳು ಮುಂದಾಗಬೇಕು. ಎಲ್ಲರಿಗೂ ಕಾರ್ಯಕ್ರಮಗಳಿರುತ್ತವೆ. ಹಾಗೆಂದು ಕಲಾಪಕ್ಕೆ ಗೈರಾಗುವುದು ಸರಿಯಲ್ಲ ಎಂದು ಹೇಳಿದರು.

    ಈ ಬಾರಿ ಅಧಿವೇಶನದಲ್ಲಿ ಮೊದಲ ಎರಡು ದಿನ ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆಗೆ ಇಡಲಾಗಿತ್ತು. ಈ ಹಿಂದಿನ ಅಧಿವೇಶನದಲ್ಲಿಯೇ ಇದರ ಬಗ್ಗೆ ಚರ್ಚೆ ಮಾಡಬೇಕಿತ್ತು ಆದರೆ ಆಗಲಿಲ್ಲ. ಈ ಬಗ್ಗೆ ಚರ್ಚೆ ಮಾಡಲು ಪ್ರತಿಪಕ್ಷಗಳು ಬಿಡಲಿಲ್ಲ. ಅವರ ಅಭಿಪ್ರಾಯ ಹೇಳಬಹುದಿತ್ತು. ಆದರೆ ಅದನ್ನು ಪ್ರತಿ ಪಕ್ಷಗಳು ಮಾಡಲಿಲ್ಲ ಎಂದು ಹೇಳಿದರು.

    ಮೊದಲು ಸಹಕಾರ ಕೊಡುತ್ತೇವೆ ಎಂದವರು ಆ ಮೇಲೆ ಧರಣಿ ಮಾಡಿದ್ದು ಸರಿಯಲ್ಲ. ನಾನು ಪ್ರತಿಪಕ್ಷ ನಾಯಕರ ಬಳಿಯೂ ಮನವಿ‌ ಮಾಡಿದ್ದೆ. ನೀವು ಇದಕ್ಕೆ ಅವಕಾಶ ಮಾಡಿಕೊಡಿ ಚರ್ಚೆ ಮಾಡಿ ಎಂದೆ. ಆದರೆ ಅದು ಆಗಲಿಲ್ಲ ಎಂದು ಖೇಧ ವ್ಯಕ್ತಪಡಿಸಿದರು.

    ಇದನ್ನೂ ಓದಿರಿ: ನಿನ್ನನ್ನೇ ಪ್ರೀತಿಸ್ತೇನೆ ಅಂದಾಕೆ ಈಗ ಆ ಭಾವನೆಯೇ ಬರ್ತಿಲ್ಲ ಅಂತಿದ್ದಾಳೆ- ಬದುಕೇ ಬೇಡವೆನಿಸಿದೆ.. ದಾರಿ ತೋರಿ..

    ಕಳೆದ ಎರಡು ದಿನದಿಂದ ಬೇರೊಂದು ವಿಚಾರಕ್ಕೆ ಸದನವನ್ನೇ ಮುಂದೂಡಿದ್ದು ದುಸ್ಥಿತಿಯೇ ಸರಿ. ಉಳಿದ ಸದಸ್ಯರಿಗೂ ಮಾತನಾಡಲು ಅವಕಾಶ ನೀಡದೇ ಹೀಗೆ ಮಾಡಿದ್ದು ಶೋಭೆ ತರುವುದಿಲ್ಲ. ಸರ್ಕಾರದ ಜತೆ ಭಿನ್ನಾಭಿಪ್ರಾಯ ಇದ್ದರೆ ಸದನದ ಹೊರಗಡೆ ಮಾಡಿ ಎಂದು ಪ್ರತಿಪಕ್ಷಗಳಿಗೆ ಹೇಳಿದ್ದೆ. ಆದರೆ ಅವರು ಧರಣಿ ಮಾಡಿ ಈ ರೀತಿ ಮಾಡಿದ್ದು ಅಕ್ಷ್ಯಮ್ಯ ಎಂದು ಬೇಸರ ಹೊರ ಹಾಕಿದರು.

    ‘ಸಿಡಿ ಲೇಡಿ’ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್​ ಶಾಸಕಿಯರು!

    ‘ಪಾಕಿಸ್ತಾನ ಮುರ್ದಾಬಾದ್ ಅನ್ನು’ ಎಂದು ಥಳಿಸಿದ ವ್ಯಕ್ತಿಯ ಬಂಧನ

    ಈಕೆ ಪುರುಷರ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ: ಈಕೆಯ ವಿಚಿತ್ರ ಕಾಯಿಲೆ ಬಗ್ಗೆ ತಿಳಿದ್ರೆ ದಂಗಾಗ್ತಿರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts