More

  ಒಟಿಟಿಗೆ ದಿಢೀರ್ ಎಂಟ್ರಿ ಕೊಟ್ಟ ವಿಶ್ವಕ್ ಸೇನ್ ‘ಗಾಮಿ’ ಸಿನಿಮಾ..! ಎಲ್ಲಿ.. ಯಾವಾಗ..?

  ಹೈದರಾಬಾದ್​: ತೆಲುಗು ಚಿತ್ರರಂಗದ ಭವಿಷ್ಯದ ನಾಯಕ ಮಾಸ್ ಕಾ ದಾಸ್ ವಿಶ್ವಕ್ ಸೇನ್ ನಟನೆಯ ಗಾಮಿ ಸಿನಿಮಾ ಒಟಿಟಿ ಎಂಟ್ರಿಗೆ ಸಿದ್ಧವಾಗಿದೆ. ಕಳೆದ ಮಾರ್ಚ್ 8ರಂದು ತೆರೆಗೆ ಬಂದಿದ್ದ ಚಿತ್ರವೀಗ ಇದೇ ತಿಂಗಳ 12ರಂದು ZEE 5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.

  ಇದನ್ನೂ ಓದಿ: ಸಿನಿಮಾಗಾಗಿ ‘ನ್ಯಾಚುರಲ್ ಸ್ಟಾರ್’ ನಾನಿ ಪಡೆದ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

  ಗಾಮಿ ಸಿನಿಮಾಗೆ ವಿದ್ಯಾಧರ್ ಕಾಗಿತಾ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ. ವಿಶ್ವಕ್ ಸೇನ್ ಗೆ ನಾಯಕಿಯಾಗಿ ಚಾಂದಿನಿ ಚೌದರಿ ನಟಿಸಿದ್ದಾರೆ. ಎಂಜಿ ಅಭಿನಯ, ಮೊಹಮ್ಮದ್ ಸಮದ್, ಹರಿಕಾ ಪೇಡಾಡ, ಶಾಂತಿ ರಾವ್, ಮಯಾಂಕ್ ಪರಾಕ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

  ಒಟಿಟಿಗೆ ದಿಢೀರ್ ಎಂಟ್ರಿ ಕೊಟ್ಟ ವಿಶ್ವಕ್ ಸೇನ್ 'ಗಾಮಿ' ಸಿನಿಮಾ..! ಎಲ್ಲಿ.. ಯಾವಾಗ..?

  ಅಡ್ವೆಂಚರ್ಸ್ ಎಪಿಕ್ ಡ್ರಾಮಾ ಕಥೆಯಾಧಾರಿತ ಸಿನಿಮಾಗೆ ವಿಶ್ವನಾಥ ರೆಡ್ಡಿ ಚೆಲುಮಲ್ಲ ಛಾಯಾಗ್ರಹಣ, ರಾಘವೇಂದ್ರ ತಿರುನ್ ಸಂಕಲನ, ನರೇಶ್ ಕುಮಾರನ್ ಸಂಗೀತ ಒದಗಿಸಿದ್ದಾರೆ. ಕಾರ್ತಿಕ್ ಶಬರೀಶ್ ಚಿತ್ರಕ್ಕೆ ಹಣ ಹಾಕಿದ್ದಾರೆ.

  ಕಾಲೆಳೆದ ಟ್ರೊಲ್ಲರ್ಸ್​​ಗೆ ತಿರುಗೇಟು ಕೊಟ್ಟ ಕೂರ್ಗ್​ ಬೆಡಗಿ!: ಹುಟ್ಟು ಹಬ್ಬದಂದೇ ರಶ್ಮಿಕಾಗೆ ಸಿಟ್ಟು ಬಂದಿದ್ದೇಕೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts