More

  ಕಾರ್ಮಿಕ ಇಲಾಖೆ ಸವಲತ್ತುಗಳನ್ನು ಬಳಸಿಕೊಳ್ಳಲಿ

  ಬೈಲಕುಪ್ಪೆ: ಕಾರ್ಮಿಕ ಇಲಾಖೆ ವತಿಯಿಂದ ಸಿಗುವ ವಿವಿಧ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳುವುದರ ಜತೆಗೆ ಕಡ್ಡಾಯವಾಗಿ ತಾಲೂಕಿನ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರು ಹೆಸರನ್ನು ನೋಂದಣಿ ಮಾಡಿಕೊಳ್ಳಿ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿ.ರಾಜೇಂದ್ರ ತಿಳಿಸಿದರು.

  ಕಾರ್ಮಿಕರ ದಿನಾಚರಣೆ ಅಂಗವಾಗಿ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಶ್ರೀ ವಿಘ್ನೇಶ್ವರ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರ ಸಂಘದ ಕಚೇರಿ ಆವರಣದಲ್ಲಿ ಬುಧವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕೆಲವು ಕಾರ್ಮಿಕರು ದುಡಿದು ಕೂಡಿಟ್ಟುಕೊಂಡ ಹಣವನ್ನು ದುಶ್ಚಟಕ್ಕೆ ಬಳಸಿಕೊಳ್ಳುತ್ತಾರೆ. ಇದರಿಂದ ಅವರ ಮನೆ ಪರಿಸ್ಥಿತಿ ಹದಗೆಡಲಿದೆ. ಅದರ ಬದಲು ಹಣವನ್ನು ಕುಟುಂಬದ ನಿರ್ವಹಣೆಗೆ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

  ನಿವೃತ್ತ ಆರೋಗ್ಯಧಿಕಾರಿ ಡಾ.ರಾಮಚಂದ್ರ ಮಾತನಾಡಿ, ಕಾರ್ಮಿಕರ ಏಳಿಗೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದ್ದು. ಎಲ್ಲ ವರ್ಗದ ಮಹಿಳೆಯರ ಪರವಾಗಿ ಸಂಸತ್ ಭವನದಲ್ಲಿ ಧ್ವನಿ ಎತ್ತಿ ಹೆಚ್ಚು ಶ್ರಮಿಸಿದ್ದರು ಎಂದು ಸ್ಮರಿಸಿದರು.

  ಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಂಘದ ವತಿಯಿಂದ ಲೇಖನಿ ಸಾಮಗ್ರಿಗಳನ್ನು ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಾ ನಂದೀಶ್ ಮತ್ತು ಗ್ರಾಂಪಂ ಮಾಜಿ ಸದಸ್ಯ ಕೆ.ಕೆ.ರಾಮಸ್ವಾಮಿ ವಿತರಿಸಿದರು.

  ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಪುಟ್ಟರಾಜ್, ಕಾರ್ಯದರ್ಶಿ ಮಹದೇವ್, ಖಜಾಂಚಿ ಬಸವರಾಜ್. ಪದಾಧಿಕಾರಿಗಳಾದ ಚಂದ್ರು, ಇಂತಿಯಾಜ್, ಚಿಕ್ಕವೀರಪ್ಪ. ಶಾಲಾ ಮಕ್ಕಳು ಗ್ರಾಮಸ್ಥರು ಹಾಜರಿದ್ದರು.

  See also  ಮರಡಿಯೂರಲ್ಲಿ ಆರೋಗ್ಯ ತಪಾಸಣಾ ಶಿಬಿರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts