More

    ಬಸವಣ್ಣ ತತ್ವಾದರ್ಶಗಳು ವಿಶ್ವಮಾನ್ಯ

    ಕಂಪ್ಲಿ: ವಿಶ್ವಗುರು ಬಸವಣ್ಣ ಮಾನವೀಯ ಮೌಲ್ಯಗಳ ಗಣಿಯಾಗಿದ್ದಾರೆ. ಅವರ ವ್ಯಕ್ತಿತ್ವ ಅನುಕರಣೀಯವಾಗಿದೆ ಎಂದು ಇಟಗಿಯ ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಹೇಳಿದರು.

    ವಿಶ್ವಗುರು ಬಸವಣ್ಣ ಮಾನವೀಯ ಮೌಲ್ಯಗಳ ಗಣಿ

    ಪಟ್ಟಣದ ಗಂಗಾಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 159ನೇ ಮಹಾಮನೆಯಲ್ಲಿ ಬಸವಣ್ಣರ ತತ್ವ ಆದರ್ಶಗಳು ವಿಶೇಷ ಉಪನ್ಯಾಸದಲ್ಲಿ ಶನಿವಾರ ಮಾತನಾಡಿದರು. ಬಸವಣ್ಣ ತತ್ವ ಆದರ್ಶಗಳು ವಿಶ್ವಮಾನ್ಯವಾಗಿವೆ. ಶಾಂತಿ, ಸಂತೃಪ್ತಿ, ಸಹೋದರತೆಯನ್ನು ಬಿಂಬಿಸುತ್ತವೆ. ಲಿಂಗ ಅಸಮಾನತೆಯನ್ನು ತೊಡೆದುಹಾಕುವಲ್ಲಿ ಬಸವಣ್ಣ ಶ್ರಮಿಸಿದರು ಎಂದರು.

    ಇದನ್ನೂ ಓದಿ: ಜಿಲ್ಲೆಯಲ್ಲಿ ಕ್ರೈಂ ರೇಟ್‌ ಜಾಸ್ತಿಯಾಗುತ್ತಿದೆ

    ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಅಧ್ಯಕ್ಷತೆವಹಿಸಿ ಮಾತನಾಡಿ, ಶಿವಶರಣರ ವಚನ ವಿಚಾರಧಾರೆಗಳು ಸಮಾಜವನ್ನು ತಿದ್ದುವ ಜೊತೆಗೆ ಮನಃಪರಿವರ್ತನೆಗೊಳಿಸುತ್ತವೆ. ತನ್ನಂತೆ ಪರರು ಎನ್ನುವ ತತ್ವವನ್ನು ಅನುಷ್ಠಾನಗೊಳಿಸಿದಲ್ಲಿ ಸಮಾಜದಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಗತಿ ಸಾಧಿಸಲು ಸಾಧ್ಯ ಎಂದರು.

    ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ.ಬಿ.ಸುನೀಲ್, ಶರಣ ಸಾಹಿತ್ಯ ಪರಿಷತ್ ತಾಲೂಕು ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪರಿಷತ್‌ನ ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ್, ಅಂಬಿಗರ ಮಂಜುನಾಥ, ಎಸ್.ಶಾಮಸುಂದರರಾವ್, ಕವಿತಾಳ ಬಸವರಾಜ್, ಎಚ್.ನಾಗರಾಜ, ಬಡಿಗೇರ ಜಿಲಾನ್‌ಸಾಬ್, ಸಜ್ಜೇದ ವೀರಭದ್ರಪ್ಪ, ಸಂತೋಷ ಕೊಟ್ರಪ್ಪ ಸೋಗಿ, ಅಶೋಕ ಕುಕನೂರು, ಎಲಿಗಾರ ವೆಂಕಟರೆಡ್ಡಿ, ಯು.ಎಂ.ವಿದ್ಯಾಶಂಕರ್ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts