More

    ವಚನಗಳ ಸಾರ ಅರಿತರೆ ದುಶ್ಚಟಗಳಿಂದ ದೂರ

    ದಾವಣಗೆರೆ : ಶರಣರ ವಚನಗಳನ್ನು ಅರ್ಥ ಮಾಡಿಸಿದರೆ ಯುವಕರನ್ನು ದುಶ್ಚಟಗಳಿಂದ ದೂರವಿಡಬಹುದು ಎಂದು ನಗರದ ಬಸವ ಬಳಗದ ಉಪಾಧ್ಯಕ್ಷ ಮಹಾ ರುದ್ರಯ್ಯ ಹೇಳಿದರು.
     ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿ ಸೋಮವಾರ ಬಸವ ಬಳಗದಿಂದ ಏರ್ಪಡಿಸಿದ್ದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಪ್ರತಿ ನಿತ್ಯ ಮಕ್ಕಳಿಗೆ ಬಸವಣ್ಣನ ವಚನ ತಿಳಿಸಿ ಅದರ ತಿರುಳನ್ನು ಹೇಳುವ ಮೂಲಕ ಮನ ಪರಿವರ್ತನೆ ಮಾಡಬೇಕು, ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
     ಉರಿ ಬರಲಿ, ಸಿರಿ ಬರಲಿ, ಲಾಭವಾಗಲಿ, ನಷ್ಟವಾಗಲಿ ಮನುಷ್ಯ ದೃಢ ಮನಸ್ಸಿನಿಂದ ಸಮಸ್ಯೆಗಳನ್ನು ಎದುರಿಸಬೇಕು. ಮಾನವ ಜನ್ಮ ಪುಣ್ಯದ ಜನ್ಮವಾಗಿದ್ದು, ಯಾವ ಚೈತನ್ಯದಿಂದ ಈ ಭೂಮಿಗೆ ಬಂದಿದ್ದೇವೆಯೋ ಅದರ ಉದ್ದೇಶ, ಮಹತ್ವವನ್ನು ಮರೆತಿದ್ದರಿಂದ ಸಮಾಜದಲ್ಲಿ ದುರಾಸೆ, ದುಷ್ಕೃತ್ಯ ಹೆಚ್ಚಾಗಿದೆ. ಎಲ್ಲರೂ ಇಷ್ಟಲಿಂಗದ ಮೊರೆ ಹೋಗಬೇಕು ಎಂದು ಹೇಳಿದರು.
     ಭುವನೇಶ್ವರಿ ತಾಯಿ ಮಾತನಾಡಿ, ಮನಸ್ಸು ಮೂಲ ನೆಲೆಯಲ್ಲಿದ್ದರೆ ಮಾತ್ರ ಮನೆ ಮಹಾಮನೆಯಾಗುತ್ತದೆ. ಸುಖ, ದುಃಖಗಳು ಮರೀಚಿಕೆಯಂತಿರುವ ಈ ಜೀವನಕ್ಕೆ ಲಿಂಗ ಎನ್ನುವ ಮೂಲ ಮಂತ್ರವಿದ್ದರೆ ಮಾತ್ರ ತನ್ನ ತಾನು ಅರಿಯಲು ಸಾಧ್ಯ ಎಂದರು.
     ಪ್ರಧಾನ ಕಾರ್ಯದರ್ಶಿ ವೀಣಾ ಮಂಜುನಾಥ್ ಮಾತನಾಡಿ, ಲಿಂಗ ತಪ್ಪದಲ್ಲಿ ಅಂಗದ ಕ್ರಿಯೆಗಳನ್ನು ಮೀರಿ, ಅಂತರಂಗದಲ್ಲಿ ನೆಲೆ ಕಂಡುಕೊಳ್ಳುವ ವಿಧಿ, ಇಷ್ಟಲಿಂಗದ, ಸಪ್ತ ಸೂತ್ರಗಳನ್ನು ಪಾಲಿಸುತ್ತ ನಮ್ಮಲ್ಲಿರುವ ದೋಷ ಪರಿಹರಿಸಿಕೊಂಡು ಜೀವನ ಪರಂಜ್ಯೋತಿಯಾಗಿ ಸಾರ್ಥಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
     ಸುಮಂಗಲಮ್ಮ, ಮಂಜುಳಾ, ಬಸವರಾಜ, ಪ್ರೇಮಾ ತಾಯಿ, ನಾಗೂರು ಅಡಿವೆಪ್ಪ, ಶ್ರೀ ವಿಭೂತಿ ಬಸವಾನಂದ ಸ್ವಾಮೀಜಿ, ಮಂಜುನಾಥ್ ಮಾತನಾಡಿದರು.
     ಬಸವ ಪಂಚಮಿ, ಶ್ರೀ ಅಕ್ಕ ನಾಗಮ್ಮ ಜಯಂತಿಯ ಪ್ರಯುಕ್ತ ಆರಂಭದಲ್ಲಿ ಮಕ್ಕಳಿಂದ ವಚನ ಗಾಯನ, ನಂತರ ಪತ್ರಕರ್ತ ವೀರಪ್ಪ ಎಂ. ಭಾವಿ ಸ್ವಾಗತಿಸಿ ವಚನ ಹಾಡಿದರು. ತನುಜಾ ವಂದಿಸಿದರು.
     ಶ್ರೀ ಅನ್ನದಾನೀಶ್ವರ ಮಠದ ಕಾರ್ಯದರ್ಶಿ ಅಡಿವೆಪ್ಪ, ಪ್ರೀತಿ ಮುತ್ತುರಾಜ್, ಪ್ರಿಯಾಂಕ ಅನಿಲ್ ಕುಮಾರ್, ರೂಪಾ ವೀರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts