More

    ಸಮಾನತೆ ಮಹತ್ವ ಸಾರಿದ ವಿಶ್ವಗುರು ಬಸವಣ್ಣ

    ರಾಣೆಬೆನ್ನೂರ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಭಾನುವಾರ ವಿಶ್ವಗುರು ಬಸವ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

    ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಬಸವಣ್ಣನವರು ಸತ್ಯ ಮತ್ತು ಕ್ರಾಂತಿಯ ಸಾಕಾರ ಮೂರ್ತಿಯಾಗಿದ್ದರು. ಸಾಮಾಜಿಕ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ. 12ನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರಾಗಿದ್ದಾರೆ. ಮೂಢನಂಬಿಕೆ, ಅಸ್ಪೃಶ್ಯತೆ ಸೇರಿ ಇತರ ಸಾಮಾಜಿಕ ಪಿಡುಗುಗಳ ನಿಮೂಲನೆಗಾಗಿ ಹೋರಾಡಿದ ಅವರು, ವಚನಗಳ ಮೂಲಕ ಕಾಯಕ, ಸಮಾನತೆ, ಮಹತ್ವವನ್ನು ಸಾರಿದ್ದಾರೆ. ಅವರ ತತ್ವಾದರ್ಶ ಇಂದಿನ ಪೀಳಿಗೆಗೆ ಪೂರಕವಾಗಿವೆ ಎಂದರು.

    ತಹಸೀಲ್ದಾರ್ ಬಸನಗೌಡ ಕೋಟೂರ ಅಧ್ಯಕ್ಷತೆ ವಹಿಸಿದ್ದರು.

    ಜಿಪಂ ಸದಸ್ಯ ಏಕನಾಥ ಭಾನುವಳ್ಳಿ, ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಇಒ ಎಸ್.ಎಂ. ಕಾಂಬಳೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭೆ ಸದಸ್ಯೆ ಗಂಗಮ್ಮ ಹಾವನೂರ, ಆಯುಕ್ತ ಡಾ. ಎನ್. ಮಹಾಂತೇಶ, ಬಿಇಒ ಎನ್. ಶ್ರೀಧರ, ಉಪ ತಹಸೀಲ್ದಾರ್ ಮಂಜುನಾಥ ಹಾದಿಮನಿ, ಬಸವರಾಜ ಶಿಡೇನೂರ, ಮಂಜುನಾಥ ಓಲೇಕಾರ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts