More

    ಈ ಸಮಯದಲ್ಲಿ ಅಂಬಿ ಸ್ಮಾರಕ ಬೇಕಿತ್ತಾ? ನೆಟ್ಟಿಗರ ಆಕ್ರೋಶ …

    ಅಂಬರೀಶ್ ಸ್ಮಾರಕ ನಿರ್ಮಾಣಕ್ಕಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ 1.34 ಎಕರೆ ಜಾಗ ಮತ್ತು 5 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಸೋಮವಾರ ಮಂಜೂರು ಮಾಡಿದೆ. ಅಂಬರೀಶ್​ ಸ್ಮಾರಕಕ್ಕೆ ಸರ್ಕಾರ ಜಾಗ ಮತ್ತು ದುಡ್ಡು ಕೊಟ್ಟಿರುವ ಬಗ್ಗೆ ಈಗ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಬೇಸರ ವ್ಯಕ್ತವಾಗುತ್ತಿದೆ.

    ಇದನ್ನೂ ಓದಿ: ಕರೊನಾ ಭೀತಿಯಲ್ಲಿ ಆಮೀರ್​ ಖಾನ್​ ಕುಟುಂಬ!

    ಈ ಸಮಯದಲ್ಲಿ ಅಂಬಿ ಸ್ಮಾರಕ ಬೇಕಿತ್ತಾ? ನೆಟ್ಟಿಗರ ಆಕ್ರೋಶ ...

    ಪ್ರಮುಖವಾಗಿ ಇಡೀ ದೇಶವು ಕರೊನಾದಿಂದ ತತ್ತರಿಸಿದ್ದು, ಈ ಸಂದರ್ಭದಲ್ಲಿ ಅಂಬರೀಶ್​ ಸ್ಮಾರಕಕ್ಕೆ ಹಣ ಬಿಡುಗಡೆ ಮಾಡುವ ಅವಶ್ಯಕತೆ ಇತ್ತಾ ಎಂದು ಹಲವರು ಪ್ರಶ್ನಿಸಿದ್ದಾರೆ. ಜನ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿರುವಾಗ ಸ್ಮಾರಕದ ಅವಶ್ಯಕತೆ ಏನಿತ್ತು ಮತ್ತು ಆ ಹಣವನ್ನು ಅಂಬರೀಶ್​ ಅವರ ಹೆಸರಿನಲ್ಲೇ, ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಬಹುದಿತ್ತು ಎಂಬ ಅಭಿಪ್ರಾಯ ಸಹ ಹಲವರಿಂದ ವ್ಯಕ್ತವಾಗುತ್ತಿದೆ. ಇನ್ನು ಸ್ಮಾರಕ ಕಟ್ಟುವುದಕ್ಕೆ ಸರ್ಕಾರದ ಹಣವೇ ಏಕೆ ಬೇಕು, ಜಾಗ ಮತ್ತು ಹಣ ಎರಡನ್ನೂ ಸರ್ಕಾರವೇ ಕೊಡಬೇಕು ಎನ್ನುವುದು ಹಲವರ ಪ್ರಶ್ನೆಯಾಗಿದೆ.

    ಇದೊಂದು ಕಡೆಯಾದರೆ, ವಿಷ್ಣುವರ್ಧನ್​ ಅವರ ಸ್ಮಾರಕದ ನಿರ್ಮಾಣದ ಬಗ್ಗೆ ಸರ್ಕಾರ ನಿರ್ಲಕ್ಷಿಸಿದ್ದು, ಈ ಬಗ್ಗೆ ವಿಷ್ಣುವರ್ಧನ್​ ಅವರ ಹಲವು ಅಭಿಮಾನಿಗಳು ಧ್ವನಿ ಎತ್ತಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಹಲವರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

    ಈ ಸಮಯದಲ್ಲಿ ಅಂಬಿ ಸ್ಮಾರಕ ಬೇಕಿತ್ತಾ? ನೆಟ್ಟಿಗರ ಆಕ್ರೋಶ ...

    ಅಂಬರೀಶ್​ ಮತ್ತು ವಿಷ್ಣುವರ್ಧನ್​ ಅವರು ಕನ್ನಡದಲ್ಲಿ ಕುಚಿಕೂ ಗೆಳೆಯರೆಂದೇ ಜನಪ್ರಿಯರಾದವರು. ವಿಷ್ಣುವರ್ಧನ್​ ಅವರು ನಿಧನರಾಗಿ ಒಂದು ದಶಕ ಆಗಿದೆ. ಆದರೂ ಅವರ ಸ್ಮಾರಕದ ಕೆಲಸ ಶುರುವಾಗಿ ಕಳೆದ ವರ್ಷವಷ್ಟೇ. ಸುಮಾರು ಒಂದು ದಶಕ ಆದರೂ ವಿಷ್ಣುವರ್ಧನ್​ ಅವರ ಸ್ಮಾರಕ ನಿಮಾರ್ಣ ಆಗದೇ ಇದ್ದಿದ್ದು, ವಿಪರ್ಯಾಸವೇ ಸರಿ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಕೆಲವರು ಸರ್ಕಾರದ ಈ ಕ್ರಮಕ್ಕೆ, ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ಎಂದು ಬಣ್ಣಿಸಿದ್ದಾರೆ.

    ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್​ ಮನಗೆದ್ದಿದ್ದ ಸುಶಾಂತ್​ ಸಿಂಗ್​!

    ಹೀಗೆ ಅಂಬರೀಶ್​ ಮತ್ತು ವಿಷ್ಣುವರ್ಧನ್​ ಅವರ ಸ್ಮಾರಕಗಳ ಕುರಿತಾಗಿ ಹೋಲಿಕೆಗಳು ಶುರುವಾಗುತ್ತಿದ್ದಂತೆಯೇ, ಸುಮಲತಾ ಅಂಬರೀಶ್​ ಟ್ವೀಟ್​ ಮಾಡಿದ್ದಾರೆ. ಈ ರೀತಿಯ ಹೋಲಿಕೆ, ಟೀಕೆಗಳಿಂದ ವಿಷ್ಣುವರ್ಧನ್​ ಮತ್ತು ಅಂಬರೀಶ್​ ಅವರ ಸ್ನೇಹ ಮತ್ತು ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ ಎಂದು ಮನವಿ ಮಾಡಿದ್ದಾರೆ. ಆದರೂ ಅಭಿಮಾನಿಗಳ ಆಕ್ರೋಶ ಮುಂದುವರೆದಿದೆ.

    ಅಂಬಿ-ವಿಷ್ಣು ಸ್ನೇಹ-ಬಾಂಧವ್ಯಕ್ಕೆ ಮಸಿ ಬೆಳೆಯೋದು ಬೇಡ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts