More

    ಫೆಬ್ರವರಿ 27 ರಿಂದ ಬಹುದೊಡ್ಡ ವರ್ಚುವಲ್ ಆಟಿಕೆ ಮೇಳ

    ನವದೆಹಲಿ: ಸುಮಾರು ಒಂದು ಸಾವಿರ ಭಾರತೀಯ ಆಟಿಕೆ ಉತ್ಪಾದಕರ ಆನ್​ಲೈನ್ ಮಳಿಗೆಗಳನ್ನೊಳಗೊಂಡ ಬೃಹತ್ ವರ್ಚುವಲ್ ಟಾಯ್ ಫೇರ್ ಫೆಬ್ರವರಿ 27 ರಿಂದ ಮಾರ್ಚ 2 ರವರೆಗೆ ನಡೆಯಲಿದೆ. ಭಾರತದ ಆಟಿಕೆ ಉದ್ಯಮಕ್ಕೆ ಪುಷ್ಟಿ ನೀಡುವ ಮೊಟ್ಟಮೊದಲ ರಾಷ್ಟ್ರ ಮಟ್ಟದ ಮೇಳವಾದ “ದ ಇಂಡಿಯಾ ಟಾಯ್ ಫೇರ್ 2021″ರ ಅಧಿಕೃತ ವೆಬ್​ಸೈಟ್ ಗುರುವಾರ (ಫೆಬ್ರವರಿ 11) ಲಾಂಚ್ ಆಗಿದೆ.

    ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಭಾಗವಹಿಸಲಿರುವ ಪ್ರದರ್ಶಕರಿಂದ ವಿಧವಿಧದ ಆಟಿಕೆಗಳನ್ನು ಕೊಳ್ಳಲು ಈ ಮೇಳ ಬಹುದೊಡ್ಡ ಆನ್​ಲೈನ್ ವೇದಿಕೆಯಾಗಲಿದೆ. ಮಕ್ಕಳು, ಪಾಲಕರು, ಶಿಕ್ಷಕರು ಮತ್ತು ಪ್ರದರ್ಶಕರು ಈ ವರ್ಚುವಲ್ ಫೇರ್​ನಲ್ಲಿ ಭಾಗವಹಿಸಲು www.theindiatoyfair.in ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

    ಇದನ್ನೂ ಓದಿ: ಆಟಿಕೆ ಉದ್ಯಮ ಬೆಳವಣಿಗೆಗೆ ‘ಡಿಸೈನ್ ಇನ್ ಇಂಡಿಯಾ’ ಮಂತ್ರ

    ವೆಬ್​ಸೈಟ್​ ಉದ್ಘಾಟಿಸಿದ ಕೇಂದ್ರ ಸಚಿವ ಪಿಯೂಶ್ ಗೋಯಲ್ ಉತ್ತಮ ಗುಣಮಟ್ಟದ ಭಾರತೀಯ ಆಟಿಕೆಗಳನ್ನು ಕೊಳ್ಳಲು ದೇಶದ ಜನರಿಗೆ ಅವಕಾಶ ಒದಗಿಸಲು ಈ ಕಾರ್ಯಕ್ರಮ ಯೋಜಿಸಲಾಗಿದೆ ಎಂದಿದ್ದಾರೆ. ಕುಶಲಕರ್ಮಿಗಳಿಗೆ ಮತ್ತು ಸಣ್ಣ ಉತ್ಪಾದಕರಿಗೆ ಜೀವನೋಪಾಯವಾದ ಆಟಿಕೆ ಉದ್ಯಮಕ್ಕೆ ಪ್ರೋತ್ಸಾಹ ನೀಡಲು ಈ ಮೇಳವನ್ನು ಆರು ಕೇಂದ್ರ ಸಚಿವಾಲಯಗಳು ಕೈಜೋಡಿಸಿ ಆಯೋಜಿಸಿವೆ ಎಂದು ಟೆಕ್ಸ್​ಟೈಲ್ಸ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಸೃತಿ ಇರಾನಿ ಹೇಳಿದ್ದಾರೆ.

    ಈ ವರ್ಚುಯಲ್ ಪ್ರದರ್ಶನದಲ್ಲಿ ಸುಮಾರು ಒಂದು ಸಾವಿರ ಆಟಿಕೆ ಮಳಿಗೆಗಳು, ತಜ್ಞರೊಂದಿಗೆ ನಾಲೆಡ್ಜ್ ಸೆಷನ್​ಗಳು, ಆಟಿಕೆ ಆಧರಿತ ಕಲಿಕೆಯ ಬಗ್ಗೆ ವೆಬಿನಾರ್​ಗಳು, ಕರಕುಶಲ ಕಲೆಯ ಪ್ರಾತ್ಯಕ್ಷಿಕೆಗಳು, ಸ್ಪರ್ಧೆಗಳು, ಕ್ವಿಜ್, ವರ್ಚುಯಲ್ ಟೂರ್, ಪ್ರಾಡಕ್ಟ್ ಲಾಂಚ್​ಗಳು ನಡೆಯಲಿವೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ಆಧರಿಸಿದ ಇನ್​ಡೋರ್ ಮತ್ತು ಔಟ್​ಡೋರ್ ಆಟಿಕೆಗಳು, ಪಜಲ್​ ಮತ್ತು ಗೇಮ್​ಗಳು ಸಿಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)

    ಕೇಂದ್ರ ಸರ್ಕಾರಕ್ಕೆ ಮಣಿದ ಟ್ವಿಟರ್ : ಸಮಸ್ಯಾತ್ಮಕವಾದ ಬಹುತೇಕ ಖಾತೆಗಳು ಬ್ಲಾಕ್

    ಉತ್ತರಖಂಡ ಹಿಮ ದುರಂತದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಉಪಗ್ರಹ ಚಿತ್ರಗಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts