More

    6 ರಥ, 13 ದಿನ, 7000 ಕಿಮೀ … ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆಗೆ 20ಕ್ಕೆ ಚಾಲನೆ

    ಬೆಂಗಳೂರು: ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನಚರಿತ್ರೆ ಆಧರಿಸಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್. ಲಿಂಗದೇವರು ನಿರ್ದೇಶಿಸಿರುವ ‘ವಿರಾಟಪುರ ವಿರಾಗಿ’ ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕುಮಾರ ಶಿವಯೋಗಿಗಳ ನೆನಪಿನಲ್ಲಿ ‘ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ’ ನಡೆಸಲು ಉದ್ದೇಶಿಸಲಾಗಿದೆ.

    ಇದನ್ನೂ ಓದಿ:

    6 ರಥ, 13 ದಿನ, 7000 ಕಿಮೀ … ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆಗೆ 20ಕ್ಕೆ ಚಾಲನೆಇತ್ತೀಚೆಗಷ್ಟೇ ಗಾಂಧಿ ಭವನದಲ್ಲಿ ‘ವಿರಾಟಪುರ ವಿರಾಗಿ’ ಚಿತ್ರ ಫಸ್ಟ್​ಲುಕ್​ ಬಿಡುಗಡೆ ಸಮಾರಂಭ ನಡೆಯಿತು. ಈಗ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದರ ಜತೆಗೆ ಬೃಹತ್​ ರಥಯಾತ್ರೆಯನ್ನು ಆಯೋಜಿಸುವುದಕ್ಕೆ ಚಿತ್ರತಂಡ ಮುಂದಾಗಿದೆ.

    ಈ ರಥಯಾತ್ರೆಯು ಡಿ. 20ರಂದು ಪ್ರಾರಂಭವಾಗಲಿದೆ. ಅಂದು ಮೈಸೂರಿನ ಶ್ರೀ ಸುತ್ತೂರು ಮಠದಲ್ಲಿ ಚಿತ್ರದ ಹಾಡುಗಳು ಬಿಡುಗಡೆಯಾಗುವುದರ ಜತೆಗೆ ರಥಯಾತ್ರೆಗೆ ಚಾಲನೆ ಸಿಗಲಿದೆ. 6 ರಥ, 13 ದಿನ, 7000 ಕಿಮೀ, 360 ಸಭೆ, 1 ಕೋಟಿ ಜನರ ಉಪಸ್ಥಿತಿ ಇರುವ ಈ ಬೃಹತ್ ರಥಯಾತ್ರೆಯು ಜನವರಿ 1ರಂದು ಗದಗನಲ್ಲಿ ಮುಕ್ತಾಯಗೊಳ್ಳಲಿದೆ.

    ಹಾನಗಲ್ಲ ಗುರುಕುಮಾರ ಶಿವಯೋಗಿಗಳು, ಮಠದಿಂದ ಘಟ ಬೆಳಗಬಾರದು – ಘಟದಿಂದ ಮಠ ಬೆಳಗಬೇಕೆಂದು ಸಾಧಿಸಿ ತೋರಿಸಿದವರು. 19ನೇ ಶತಮಾನದ ಆದಿಯಲ್ಲಿಯೇ ಅವರು ಹೊಸ ಮನ್ವಂತರಕ್ಕೆ ಭದ್ರ ಬುನಾದಿ ಹಾಕಿದವರು. ಸರ್ವರಿಗೂ ಶಿಕ್ಷಣ, ಅಂಧರ ಬಾಳಿಗೆ ಸಂಗೀತ ಶಿಕ್ಷಣ, ಅಖಿಲ ಭಾರತ ವೀರಶೈವ (ಲಿಂಗಾಯತ) ಮಹಾಸಭಾ ಸ್ಥಾಪನೆ. ಮಹಿಳಾ ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣ, ಶಿವಯೋಗ ಮಂದಿರ ಸ್ಥಾಪನೆ, ವಚನ ತಾಡೋಲೆಗಳ ಸಂಗ್ರಹ ಮತ್ತು ಗ್ರಂಥಾಲಯ ಸ್ಥಾಪನೆ, ಅಧುನಿಕ ಕೃಷಿ ಪದ್ಧತಿ ಮತ್ತು ಗೋಶಾಲೆ ಸ್ಥಾಪನೆ, ವಿಭೂತಿ ಹಾಗೂ ಇಷ್ಟ ಲಿಂಗದ ನಿರ್ಮಾಣ, ಹತ್ತಿ ಕರ್ಖಾನೆಯ ಸ್ಥಾಪನೆ, ಆಯುರ್ವೇದ ಚಿಕಿತ್ಸಾಲಯ ಸ್ಥಾಪನೆ. ಚಿತ್ರಮಂದಿರಗಳ ಪ್ರಾರಂಭ, ಪ್ರಾಣಿ ಬಲಿ ನಿಷೇಧ … ಹೀಗೆ ಹಲವಾರು ಸಾಧ್ಯತೆಗಳನ್ನು ಸಾಧ್ಯವಾಗಿಸಿದವರು ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳು.

    ಇದನ್ನೂ ಓದಿ:

    ಸಮಾಧಾನ ನಿರ್ಮಿಸಿರುವ ‘ವಿರಾಟಪುರ ವಿರಾಗಿ’ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್​ ಅವರು ಶ್ರೀ ಗುರುಕುಮಾರ ಶಿವಯೋಗಿಗಳಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ, ಅಶೋಕ್​ ವಿ. ರಾಮನ್​ ಅವರ ಛಯಾಗ್ರಹಣವಿದೆ.

    ಈ ವರ್ಷ ಯಾವ ಚಿತ್ರದ ಗಳಿಕೆ ಎಷ್ಟು? ಇಲ್ಲಿದೆ ಟಾಪ್​ 5 ಪಟ್ಟಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts