More

    ಹಳೇ ನೆನಪಿನ ಗುಂಗಿನಲ್ಲಿ ಅನುಷ್ಕಾ-ಕೊಹ್ಲಿ ಜೋಡಿ..!

    ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಜತೆಗೆ ಮುಂಬೈನಲ್ಲಿ ಲಾಕ್ ಆಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್ ಚಟುವಟಿಕೆಯಿಂದ ದೂರ ಉಳಿದಿರುವ ಕೊಹ್ಲಿಗೆ ಸಾಮಾಜಿಕ ಜಾಲತಾಣಗಳೇ ಪ್ರಮುಖ ಅಸವಾಗಿವೆ. ಇದೀಗ ಅನುಷ್ಕಾ ಶರ್ಮ ಜತೆಗಿನ ಹಳೇ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸುಂದರವಾದ ಸ್ಥಳಗಳಿಗೆ ಭೇಟಿ ಕೊಟ್ಟಿದ್ದ ಸಮಯ. ಅಂಥ ಸಮಯವನ್ನು ಈ ಫೋಟೋ ನೆನಪಿಸುತ್ತಿದೆ. ನನ್ನ ಜತೆಗಿರುವವರು..ನನ್ನ ಏಕೈಕ.. ಎಂದು ಪತ್ನಿ ಕುರಿತು ಕೊಹ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟದಿಂದ ‘ಮೇಡ್ ಇನ್ ಚೀನಾ’ ಸಲಕರಣೆಗಳಿಗೆ ಬಹಿಷ್ಕಾರ

    ಕರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ನಾಲ್ಕು ಗೋಡೆಗಳ ಮಧ್ಯೆ ಕುರುವಂತೆ ಮಾಡಿದೆ. ಕಳೆದ ಮೂರು ತಿಂಗಳಿಂದ ಎಲ್ಲರ ಜೀವನ ನಿಂತ ನೀರಾಗಿದೆ. ಕೆಲ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಳೇ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜತೆಗೆ ತಿರುಗಾಡಿದ್ದ ಕೆಲವೊಂದು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರವಷ್ಟೇ ತಮ್ಮ ತಂದೆ ಜತೆಗಿನ ಹಳೇ ಫೋಟೋ ಪ್ರಕಟಿಸಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಫುಟ್‌ಬಾಲ್ ಪ್ರೇಮಿಗಳಿಗೆ ಸೆಕ್ಸ್ ಸಮಯದಲ್ಲೂ ಇವರದ್ದೇ ನೆನಪು!

    ಲಾಕ್‌ಡೌನ್ ನಡುವೆಯೂ ಕೊಹ್ಲಿ ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ವಹಿಸುತ್ತಿರುವ ಕೊಹ್ಲಿ, ಮನೆಯಲ್ಲಿರುವ ಜಿಮ್‌ನಲ್ಲೇ ದೈಹಿಕ ಕಸರತ್ತು ನಡೆಸುತ್ತಿದ್ದಾರೆ. ಕ್ರಿಕೆಟ್‌ನಿಂದ ದೂರವಿದ್ದರೂ ಫಿಟ್ನೆಸ್ ಕಾಯ್ದುಕೊಳ್ಳುವುದನ್ನು ಮಾತ್ರ ಕೊಹ್ಲಿ ಬಿಟ್ಟಿಲ್ಲ.

    ಅಡುಗೆ ಮಾಡಿದ್ದಕ್ಕೆ ಹಾರ್ದಿಕ್ ಪಾಂಡ್ಯ ಕಾಲೆಳೆದ ಶಿಖರ್ ಧವನ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts