More

    VIDEO: ಆರ್‌ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಕಣ್ಣೀರಿನ ವಿದಾಯ!

    ಶಾರ್ಜಾ: ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಕಾಣುವುದರೊಂದಿಗೆ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಅವರ ನಾಯಕತ್ವ ಅಧ್ಯಾಯ ಕೊನೆಗೊಂಡಿದೆ. ತಮ್ಮ ನಾಯಕತ್ವದ 9 ಟೂರ್ನಿಯಲ್ಲೂ ಆರ್‌ಸಿಬಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ಸಾಧ್ಯವಾಗದ್ದು ಕೊಹ್ಲಿ ಅವರ ವರ್ಣರಂಜಿತ ವೃತ್ತಿಜೀವನದ ಕಪ್ಪುಚುಕ್ಕೆಯಾಗಿದೆ. ಈ ನೋವು ಕಾಡಿದ್ದರಿಂದ ಕೊಹ್ಲಿ, ಕೆಕೆಆರ್ ವಿರುದ್ಧದ ಸೋಲಿನ ಬಳಿಕ ಭಾವುಕರಾಗಿ ಕಣ್ಣೀರಿಟ್ಟರು ಮತ್ತು ದುಃಖವನ್ನು ತಡೆದುಕೊಳ್ಳುವ ಪ್ರಯತ್ನ ನಡೆಸಿದರು. ಈ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ‘ನಾನು ತಂಡದಲ್ಲಿ ಯುವ ಆಟಗಾರರು ಆತ್ಮವಿಶ್ವಾಸ ಮತ್ತು ಸ್ವತಂತ್ರವಾಗಿ ಆಡಲು ಅವಕಾಶ ಮಾಡಿಕೊಟ್ಟಿರುವೆ. ಭಾರತ ತಂಡದಲ್ಲೂ ಇಂಥದ್ದೇ ಪ್ರಯತ್ನ ಮಾಡಿರುವೆ. ಆರ್‌ಸಿಬಿ ತಂಡಕ್ಕೆ ನನ್ನ ಶ್ರೇಷ್ಠ ಕೊಡುಗೆಯನ್ನೇ ನೀಡಿರುವೆ. ಪ್ರತಿ ಬಾರಿಯೂ ತಂಡದ ನಾಯಕನಾಗಿ ಶೇ. 120 ನಿರ್ವಹಣೆ ತೋರಿರುವೆ. ಮುಂದೆ ಆಟಗಾರನಾಗಿಯೂ ಅದೇ ರೀತಿ ಇರಲಿದ್ದೇನೆ. ಇನ್ನೀಗ ಮುಂದಿನ 3 ವರ್ಷಗಳಿಗೆ ತಂಡವನ್ನು ಮತ್ತೆ ಹೊಸದಾಗಿ ಕಟ್ಟಬೇಕಾದ ಅಗತ್ಯವಿದೆ’ ಎಂದು ಕೊಹ್ಲಿ ಹೇಳಿದರು.

    ಎಂದೆಂದಿಗೂ ಆರ್‌ಸಿಬಿಯಲ್ಲೇ ಇರುವೆ
    ಐಪಿಎಲ್‌ನಲ್ಲಿ ಬೇರೆ ಯಾವುದೇ ತಂಡದ ಪರ ಆಡುವುದನ್ನು ನಾನು ಯೋಚಿಸಲಾರೆ. ಐಪಿಎಲ್‌ನಲ್ಲಿ ಆಡುವ ಕೊನೆಯ ದಿನದವರೆಗೂ ನಾನು ಆರ್‌ಸಿಬಿ ತಂಡದಲ್ಲೇ ಇರುವೆ’ ಎಂದು ಕೊಹ್ಲಿ ಪುನರುಚ್ಚರಿಸಿದರು.

    ಕೊಹ್ಲಿ ಸಾರಥ್ಯದಲ್ಲಿ ಆರ್‌ಸಿಬಿ
    2013: 5ನೇ ಸ್ಥಾನ
    2014: 7ನೇ ಸ್ಥಾನ
    2015: 3ನೇ ಸ್ಥಾನ
    2016: ರನ್ನರ್‌ಅಪ್
    2017: 8ನೇ ಸ್ಥಾನ
    2018: 6ನೇ ಸ್ಥಾನ
    2019: 8ನೇ ಸ್ಥಾನ
    2020: 4ನೇ ಸ್ಥಾನ
    2021: 4ನೇ ಸ್ಥಾನ

    ಆರ್‌ಸಿಬಿ ನಾಯಕತ್ವ
    ಪಂದ್ಯ: 140
    ಜಯ: 64
    ಸೋಲು: 69
    ಟೈ: 3
    ರದ್ದು: 4

    ಈ ಸಲವೂ ಆರ್‌ಸಿಬಿ ಕನಸು ಭಗ್ನ , ಕೆಕೆಆರ್ ಎದುರು ಮುಗ್ಗರಿಸಿದ ಬೆಂಗಳೂರು ತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts