More

    ಆರ್​​ಸಿಬಿ ಸೋಲಲು ವಿರಾಟ್​ ಕೊಹ್ಲಿ ಕಾರಣ; ಕಿಡಿಕಾರಿದ ಮಾಜಿ ಕ್ರಿಕೆಟಿಗ

    ಬೆಂಗಳೂರು: ಮಾರ್ಚ್​ 29ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಕಲ್ಕತ್ತಾ ನೈಟ್​ರೈಡರ್ಸ್​ ತಂಡವು ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕಲ್ಕತ್ತಾ ಆರ್​ಸಿಬಿ ತವರಿನಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. 

    ಇದುವರೆಗೆ ಮೂರು ಪಂದ್ಯಗಳನ್ನಾಡಿರುವ ಆರ್​ಸಿಬಿ ತಂಡವು 2 ಮ್ಯಾಚ್​ಗಳಲ್ಲಿ ಸೋತಿದೆ. ಮೊದಲ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋತಿದ್ದ ಆರ್​ಸಿಬಿ ಆ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ದ ಜಯ ಸಾಧಿಸಿತ್ತು. ಇದೀಗ ಕೆಕೆಆರ್ ವಿರುದ್ಧ ಹೀನಾಯ ಸೋಲನುಭವಿಸಿದೆ. ಈ ಮೂಲಕ ಐಪಿಎಲ್​ ಆವೃತ್ತಿಯಲ್ಲಿ ತವರಿನಲ್ಲಿ ಪರಾಜಯಗೊಂಡ ಮೊದಲ ತಂಡ ಎಂಬ ಅಪಕೀರ್ತಿಗೆ ಪಾತ್ರವಾಗಿದೆ.

    ಕಲ್ಕತ್ತಾ ವಿರುದ್ಧ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ 182 ರನ್​ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿರಾಟ್​ ಕೊಹ್ಲಿ ತಮ್ಮ ಅಜೇಯ ಆಟದ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಆರ್​ಸಿಬಿ ಸೋಲಿಗೆ ವಿರಾಟ್​ ಕೊಹ್ಲಿ ಗಳಿಸಿದ ಈ 83 ರನ್​ ಕಾರಣ ಎಂದು ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ ಆರೋಪಿಸಿದ್ದಾರೆ.

    ಆರ್​​ಸಿಬಿ ಸೋಲಲು ವಿರಾಟ್​ ಕೊಹ್ಲಿ ಕಾರಣ; ಕಿಡಿಕಾರಿದ ಮಾಜಿ ಕ್ರಿಕೆಟಿಗ

    ಇದನ್ನೂ ಓದಿ: ಇನ್ನು ಮುಂದೆ ಹಾರ್ದಿಕ್​ ಪಾಂಡ್ಯರನ್ನು ಟೀಕಿಸುವಂತಿಲ್ಲ; ಇಲ್ಲವಾದಲ್ಲಿ ಜಾರಿಯಾಗುತ್ತೆ ಕಠಿಣ ಕ್ರಮ

    ಕೆಕೆಆರ್​ ಪರ ಇನ್ನಿಂಗ್ಸ್​ ಆರಂಭಿಸಿದ ಸುನೀಲ್​ ನರೈನ್​ ಆರಂಭಿಕರಾಗಿ ಕಣಕ್ಕಿಳಿದಾಗ ಹೆಚ್ಚು ಬೌನ್ಸರ್​ ಹಾಗೂ ಯಾರ್ಕರ್​ಗಳನ್ನು ಹಾಕಬೇಕಾಗುತ್ತದೆ. ಆದರೆ, ಬೆಂಗಳೂರಿನಂತಹ ಪಿಚ್​ಗಳಲ್ಲಿ ಸುನೀಲ್​ ನರೈನ್ ಬಗ್ಗೆ ತಿಳಿದು ನೀವು ಹಾಗೆ ಮಾಡದಿದ್ದಲ್ಲಿ ಪವರ್​ಪ್ಲೇನಲ್ಲಿ ಪಂದ್ಯ ನಿಮ್ಮ ಕೈತಪ್ಪಿ ಹೋಗುತ್ತದೆ. ಫಿಲ್ ಸಾಲ್ಟ್ ಕೂಡ ಅವರ ಜೊತೆಗಿದ್ದರು. ಫಿಲ್ ಸಾಲ್ಟ್ ಮೊದಲ ಓವರ್‌ನಲ್ಲಿಯೇ 18 ರನ್ ಗಳಿಸಿದರು. ಅವರು ಅದ್ಭುತವಾಗಿದ್ದರು. ಕೇವಲ ಸನ್ನಿವೇಶಕ್ಕೆ ತಕ್ಕಂತೆ, ಎದುರಾಳಿ ತಂಡವು ಉತ್ತಮವಾಗಿ ಬೌಲ್ ಮಾಡಿದರು.

    ವಿರಾಟ್​ ಕೊಹ್ಲಿ 59 ಎಸೆತಗಳಲ್ಲಿ 83 ರನ್​ ಗಳಿಸಿದರು. ಆದರೆ, ಕಲ್ಕತ್ತಾ 5.5 ಓವರ್​ಗಳಲ್ಲಿ 83 ರನ್​ ಗಳಿಸಿತ್ತು. ಆದರೆ, ಆರ್​ಸಿಬಿ ಕೊಹ್ಲಿ 10 ಓವರ್​ಗಳನ್ನು​ (1 ಎಸೆತ ಕಡಿಮೆ) ಎದುರಿಸಿದ್ದರು. ಇದಾಗ್ಯೂ ಅವರು ಕಲೆಹಾಕಿದ್ದು 8.3 ರ ಸರಾಸರಿಯಲ್ಲಿ ರನ್​ ಗಳಿಸಿದ್ದು, ದೊಡ್ಡ ಹಿನ್ನಡೆಯಾಯಿತು. ಬೌಲರ್​ಗಳು ಕೂಡ ಉತ್ತಮ ಮೊತ್ತ ರಕ್ಷಿಸಿಕೊಳ್ಳುವಲ್ಲಿ ವಿಫಲವಾದರು ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts