More

    ವಿರಾಟ್ ಕೊಹ್ಲಿ ಇನ್ನು ಒಂದು ರನ್ ಗಳಿಸಿದರೆ ಹೊಸ ದಾಖಲೆ ನಿರ್ಮಾಣ!

    ಲಂಡನ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ ಒಂದೂವರೆ ವರ್ಷದಿಂದ ದೊಡ್ಡ ಇನಿಂಗ್ಸ್‌ಗಳ ಬರ ಎದುರಿಸುತ್ತಿದ್ದಾರೆ. ಇದರ ನಡುವೆಯೂ ಅವರು, ಗುರುವಾರ ಓವಲ್‌ನಲ್ಲಿ ಆರಂಭಗೊಳ್ಳಲಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಒಂದು ರನ್ ಗಳಿಸಿದರೆ ಹೊಸ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ.

    ವಿರಾಟ್ ಕೊಹ್ಲಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 489 ಇನಿಂಗ್ಸ್‌ಗಳಲ್ಲಿ 22,999 ರನ್ ಗಳಿಸಿದ್ದು, ಇನ್ನೊಂದು ರನ್ ಗಳಿಸಿದರೆ 23 ಸಾವಿರ ರನ್ ಪೂರೈಸಿದ ವಿಶ್ವದ 7ನೇ ಹಾಗೂ ಭಾರತದ 3ನೇ ಬ್ಯಾಟ್ಸ್‌ಮನ್ ಎನಿಸಲಿದ್ದಾರೆ. ಅಲ್ಲದೆ ಸಚಿನ್ ತೆಂಡುಲ್ಕರ್ (522 ಇನಿಂಗ್ಸ್) ಅವರನ್ನು ಹಿಂದಿಕ್ಕಿ ಅತಿವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್‌ಮನ್ ಎನಿಸುವ ಅವಕಾಶ ಕೊಹ್ಲಿ ಮುಂದಿದೆ. ಸಚಿನ್ (34,357) ಗರಿಷ್ಠ ರನ್ ಸಾಧಕರಾಗಿದ್ದರೆ, ರಾಹುಲ್ ದ್ರಾವಿಡ್ (24,208) ಈ ಪಟ್ಟಿಯಲ್ಲಿರುವ ಮತ್ತೋರ್ವ ಭಾರತೀಯರಾಗಿದ್ದಾರೆ.

    ಕೊಹ್ಲಿ ಕಾಡುತ್ತಿದೆ ಶತಕದ ಬರ
    ವಿರಾಟ್ ಕೊಹ್ಲಿ ಅವರ 71ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕಕ್ಕಾಗಿ ಅಭಿಮಾನಿಗಳು ಸುದೀರ್ಘ ಕಾಲ ಕಾಯುವಂತಾಗಿದೆ. 2019ರ ನವೆಂಬರ್‌ನಲ್ಲಿ ಕೋಲ್ಕತ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊಹ್ಲಿ ಅವರ ಕೊನೆಯ ಹಾಗೂ 70ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕ ದಾಖಲಾಗಿತ್ತು. ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನ 51 ಇನಿಂಗ್ಸ್‌ಗಳಲ್ಲಿ ಅವರು ಶತಕ ಬಾರಿಸಲು ವಿಫಲರಾಗಿದ್ದಾರೆ. ಹಾಲಿ ಸರಣಿಯಲ್ಲೂ ಲೀಡ್ಸ್ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ ಗಳಿಸಿದ 55 ರನ್‌ಗಳೇ ಅವರ ಗರಿಷ್ಠ ಗಳಿಕೆಯಾಗಿದೆ.

    ರೋಹಿತ್ ಶರ್ಮ ಈಗ ಭಾರತದ ನಂ. 1 ಟೆಸ್ಟ್ ಬ್ಯಾಟ್ಸ್‌ಮನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts