More

    VIDEO: ಕೊಹ್ಲಿಯನ್ನು ಹೋಲುವ ಡೈನಾಸರಸ್ ಸೆರೆ ಹಿಡಿದ ಅನುಷ್ಕಾ!

    ಬೆಂಗಳೂರು: ಲಾಕ್‌ಡೌನ್‌ನಿಂದ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಭಾರತ ತಂಡದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಗಮನಸೆಳೆಯುತ್ತಿದೆ. ದಿನಂಪ್ರತಿ ಒಂದಿಲ್ಲೊಂದು ವಿಷಯಗಳಲ್ಲಿ ಸದ್ದು ಮಾಡುತ್ತಿದೆ. ಈಗ ಈ ಜೋಡಿ ಮಾಡಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಡೈನಾಸರಸ್ ರೀತಿಯಲ್ಲಿ ನಟಿಸುತ್ತ ಕೊಠಡಿಗೆ ಕೊಹ್ಲಿ ಎಂಟ್ರಿ ಕೊಡುವುದನ್ನು ಅನುಷ್ಕಾ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ‘ನಾನು ಕಂಡು ಹಿಡಿದೆ. ಬಂಧನದಿಂದ ತಪ್ಪಿಸಿಕೊಂಡು ಬಂದ ಡೈನಾಸರಸ್’ ಎಂಬ ಅಡಿಬರಹದೊಂದಿಗೆ ಅನುಷ್ಕಾ ಶರ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪ್ರಕಟಿಸಿದ್ದಾರೆ.

    ಇದನ್ನೂ ಓದಿ: VIDEO| ಜೂ. ಎನ್​ಟಿಆರ್​ ಬರ್ತ್​ಡೇಗೆ ವಾರ್ನರ್​ ಕಡೆಯಿಂದ ವಿಶೇಷ ಉಡುಗೊರೆ

    ಕೊಹ್ಲಿ ಡೈನಾಸರಸ್ ರೀತಿ ನಟಿಸಿರುವ ವಿಡಿಯೋವನ್ನು ಅನುಷ್ಕಾ ಶರ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಬೆನ್ನಲ್ಲೇ ಮಿಲಿಯನ್‌ಗಟ್ಟಲೇ ಮಂದಿ ವೀಕ್ಷಿಸಿದ್ದಾರೆ. ಅನುಷ್ಕಾ ಸಹೋದರ ಕರ್ಣೇಶ್ ಶರ್ಮ ಸೇರಿದಂತೆ ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ. ‘ಲಾಕ್‌ಡೌನ್ ವೇಳೆ ಬಗೆ ಬಗೆ ಐಡಿಯಾಗಳು ಸೃಷ್ಟಿಯಾಗಿವೆ, ಹೊರ ಹೋಗುವುದಕ್ಕಿಂತ ಇದೇ ಉತ್ತಮ’ ಎಂದು ಕರ್ಣೇಶ್ ಬರೆದಿದ್ದಾರೆ. ನಟ ಕರಣ್ ವಾಹಿ, ಸ್ಟಾರ್ ನಟಿ ಕಾಜೋಲ್ ಅಗರ್ವಾಲ್, ನಿರ್ಮಾಪಕ ಪ್ರೊಸಿಟ್ ರಾಯ್ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ನನ್ನಪ್ಪ ಯಾಕೆ ಫೇಮಸ್ ಅಂತ ಗೂಗಲ್‌ನಲ್ಲಿ ಹುಡುಕಿದ್ದ ಜೋರ್ಡನ್ ಪುತ್ರಿ!

    ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ ಜೋಡಿ ಮುಂಬೈನಲ್ಲೇ ಲಾಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಲಾಕ್‌ಡೌನ್ ಆರಂಭಿಕ ದಿನಗಳಲ್ಲಿ ಒಗ್ಗಟ್ಟಾಗಿ ಕೋವಿಡ್-19 ವಿರುದ್ಧ ಹೋರಾಡಬೇಕೆಂದು ಈ ಜೋಡಿ ಅಭಿಮಾನಿಗಳಿಗೆ ಮನವಿ ಮಾಡಿತ್ತು. ಪಿಎಂ-ಕೇರ್ಸ್‌ ನಿಧಿಗೆ ದೇಣಿಗೆ ನೀಡಿದ್ದರೂ ನೀಡಿದ ಮೊತ್ತವನ್ನು ಬಹಿರಂಗಪಡಿಸಿರಲಿಲ್ಲ. ಐಪಿಎಲ್ ಮಿಸ್ ಮಾಡಿಕೊಳ್ಳುತ್ತಿರುವ ಕೊಹ್ಲಿ ಬಳಿಕ ಅನುಷ್ಕಾ ಕಟ್ಟಾ ಕ್ರಿಕೆಟ್ ಅಭಿಮಾನಿಯ ಮಾದರಿ ‘ಕೊಹ್ಲಿ…ಚೌಕಾ ಮಾರ‌್ನಾ’ ಎಂದು ಕೂಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ವಿರಾಟ್-ಅನುಷ್ಕಾ ಜೋಡಿ 2017ರಲ್ಲಿ ಇಟಲಿಯಲ್ಲಿ ಮದುವೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts