More

    VIDEO: ಆರ್‌ಸಿಬಿ ತಂಡದೊಂದಿಗೆ ಅಪ್ಪ-ಅಮ್ಮನಾಗುತ್ತಿರುವ ಸಂಭ್ರಮ ಹಂಚಿಕೊಂಡ ವಿರಾಟ್-ಅನುಷ್ಕಾ ಜೋಡಿ..!

    ಬೆಂಗಳೂರು: ಸ್ಟಾರ್ ದಂಪತಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಜೋಡಿ ಎರಡು ದಿನಗಳ ಹಿಂದಷ್ಟೇ ಅಪ್ಪ-ಅಮ್ಮನಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಈ ಜೋಡಿಗೆ ಕ್ರಿಕೆಟ್ ವಲಯ ಅಲ್ಲದೆ, ಇತರ ಕ್ರೀಡೆಯ ಹಾಗೂ ಬಾಲಿವುಡ್ ಮಂದಿಯೂ ಶುಭಕೋರಿದ್ದರು. ಐಪಿಎಲ್ ಆಡಲು ಯುಎಇಗೆ ತೆರಳಿರುವ ವಿರಾಟ್ ಕೊಹ್ಲಿ, ತಂಡದೊಂದಿಗೆ ಈ ಸಂಭ್ರಮ ಹಂಚಿಕೊಂಡಿದ್ದಾರೆ. ಕೊಹ್ಲಿ-ಅನುಷ್ಕಾ ಜೋಡಿ ತಂಡದ ಸದಸ್ಯರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಈ ವಿಡಿಯೋವನ್ನು ಆರ್‌ಸಿಬಿ ತನ್ನ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದೆ.

    ಇದನ್ನೂ ಓದಿ: ತಾಯಿ ಹುಟ್ಟುಹಬ್ಬ ಆಚರಿಸಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್

    2021ರ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಅನುಷ್ಕಾ ಶರ್ಮ ಹಾಗೂ ವಿರಾಟ್ ಕೊಹ್ಲಿ ಜೋಡಿ ಸಿಹಿ ಸುದ್ದಿ ಪ್ರಕಟಿಸಿತ್ತು. ಈ ಸಂಭ್ರಮವನ್ನು ವಿರಾಟ್-ಅನುಷ್ಕಾ ಜೋಡಿ ದುಬೈನಲ್ಲಿ ಆಚರಿಸಿಕೊಂಡಿದೆ. ಪರಸ್ಪರ ಮುತ್ತುಕೊಡುವ ಮೂಲಕ ಅಭಿನಂದಿಸಿಕೊಂಡಿದೆ. ಇವರಲ್ಲದೆ, ತಂಡದ ಮತ್ತೋರ್ವ ಸದಸ್ಯ ಯಜುವೇಂದ್ರ ಚಾಹಲ್ ಕೂಡ ಧನಶ್ರೀ ವರ್ಮ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಚಾಕೋಲೇಟ್ ಕತ್ತರಿಸಿ ಸಂಭ್ರಮಿಸಿದರು.2ನಿಮಿಷ 33 ಸೆಕೆಂಡ್ ಗಳ ವಿಡಿಯೋ ಪ್ರಕಟಿಸಲಾಗಿದೆ.

    ಇದನ್ನೂ ಓದಿ:VIDEO: ಐದು ತಿಂಗಳ ಬಳಿಕ ವಿರಾಟ್ ಕೊಹ್ಲಿ ನೆಟ್ಸ್ ಅಭ್ಯಾಸ..

    ವಿರಾಟ್ ಕೊಹ್ಲಿ ಗುರುವಾರವಷ್ಟೇ ಅನುಷ್ಕಾ ಗರ್ಭಿಣಿಯಾಗಿರುವ ವಿಷಯವನ್ನು ಪ್ರಕಟಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಜೋಡಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಕೊಹ್ಲಿ ಜತೆಯಲ್ಲಿಯೇ ಅನುಷ್ಕಾ ಕೂಡ ದುಬೈಗೆ ತೆರಳಿದ್ದಾರೆ. ಸೆ.19 ರಿಂದ ನ.10ರವರೆಗೆ ಐಪಿಎಲ್ ನಡೆಯಲಿದ್ದು, 6 ದಿನಗಳ ಕ್ವಾರಂಟೈನ್ ಮುಗಿಸಿರುವ ಆರ್‌ಸಿಬಿ ಶುಕ್ರವಾರದಿಂದ ಅಭ್ಯಾಸ ಆರಂಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts