More

    ಫೋಟೋದಲ್ಲಿರುವ ಬಾಲಕಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಗೆದ್ದ ಸ್ಟಾರ್​ ನಟಿ! ಸಾಧ್ಯವಾದ್ರೆ ಗೆಸ್​ ಮಾಡಿ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಬಾಲಕಿಯ ಫೋಟೋವೊಂದು ಹರಿದಾಡುತ್ತಿದೆ. ಅದರ ಜತೆಯಲ್ಲೇ ಆ ಫೋಟೋದಲ್ಲಿರುವ ಬಾಲಕಿ ಯಾರೆಂದು ಗುರುತಿಸುವಿರಾ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಉತ್ತರಿಸಲು ಕೆಲವರು ಗೊಂದಲಕ್ಕೀಡಾಗಿದ್ದರೆ, ಇನ್ನು ಕೆಲವರು ಆ ಬಾಲಕಿ ಯಾರೆಂಬುದನ್ನು ಸಹ ಪತ್ತೆಹಚ್ಚಿದ್ದಾರೆ.

    ನೀವು ಮೇಲೆ ನೋಡಿದ ದೃಶ್ಯದಲ್ಲಿ ಎರಡು ಫೋಟೋಗಳನ್ನು ಒಟ್ಟಿಗೆ ಎಡಿಟ್​ ಮಾಡಲಾಗಿದೆ. ಒಂದು ಫೋಟೋದಲ್ಲಿ ಪುಟ್ಟ ಬಾಲಕಿಯ ದೃಶ್ಯವಿದೆ. ಇನ್ನೊಂದು ಫೋಟೋದಲ್ಲಿ ತಂದೆಯ ಜತೆ ಮಗಳು ಕ್ಯಾಮೆರಾಗೆ ಫೋಸ್​ ನೀಡಿದ್ದಾಳೆ. ಇಬ್ಬರು ಕೂಡ ಒಬ್ಬರೇ. ಅಲ್ಲದೆ, ಫೋಟೋದಲ್ಲಿರುವುದು ಸ್ಟಾರ್​ ನಟಿ. ಅದರಲ್ಲೂ ಇತ್ತೀಚೆಗಂತೂ ಬಹು ಬೇಡಿಕೆಯ ನಟಿಯಾಗಿದ್ದಾರೆ. ಎಲ್ಲ ಭಾಷೆಗಳಲ್ಲೂ ಈ ನಟಿಗೆ ಆಫರ್​ಗಳ ಸುರಿಮಳೆ ಹರಿದುಬರುತ್ತಿದೆ. ಹಾಗಾದರೆ, ಆ ಬಾಲಕಿ ಮತ್ತು ಪ್ರಸ್ತುತ ನಟಿ ಯಾರೆಂದು ಊಹೆ ಮಾಡುತ್ತಿದ್ದೀರಾ? ಅವರು ಬೇರೆ ಯಾರೂ ಅಲ್ಲ ನಮ್ಮ ಸೀತಾ ಮಹಾಲಕ್ಷ್ಮೀ. ಅಯ್ಯೋ ಸೀತಾ ಮಹಾಲಕ್ಷ್ಮೀ ಅಂತಾ ಯಾವ ನಟಿ ಇದ್ದಾರೆ ಅಂತ ಗೊಂದಲಕ್ಕೀಡಾಗಬೇಡಿ. ಸೀತಾ ಮಹಾಲಕ್ಷ್ಮೀ ಎಂಬುದು ಭಾರಿ ಸದ್ದು ಮಾಡಿದ ಒಂದು ಪಾತ್ರ. ಆ ಪಾತ್ರದಲ್ಲಿ ನಟಿಸಿದ್ದು. ಇವರೇ.

    ನೀವು ದುಲ್ಕರ್​ ಸಲ್ಮಾನ್​ ನಟನೆಯ ಸೀತಾ ರಾಮಂ ಸಿನಿಮಾ ನೋಡಿರಬಹುದು. ಭಾರಿ ಸದ್ದು ಮಾಡಿದ ಈ ಸಿನಿಮಾದಲ್ಲಿ ಸೀತಾ ಮಹಾಲಕ್ಷ್ಮೀಯಾಗಿ ಮಿಂಚಿದ ನಟಿ ಮೃನಾಲ್​ ಠಾಕೂರ್​ ಇದೀಗ ಬಹು ಬೇಡಿಕೆಯ ನಟಿ. ನೀವು ಮೇಲೆ ನೋಡುತ್ತಿರುವ ಪುಟ್ಟ ಬಾಲಕಿಯು ಕೂಡ ಇವರೆ. ಬಾಲ್ಯದಲ್ಲೂ ಮೃನಾಲ್​ ತುಂಬಾ ಮುದ್ದಾಗಿದ್ದಾರೆ. ಆದರೆ, ಪತ್ತೆ ಹಿಡಿಯುವುದಂತೂ ತುಂಬಾ ಕಷ್ಟ.

    Mrunal Thakur

    ಅಂದಹಾಗೆ ಮೃನಾಲ್​ ಹುಟ್ಟಿದ್ದು ಮಹಾರಾಷ್ಟ್ರದ ಧುಲೆಯಲ್ಲಿ. ಓದಿದ್ದು ಮುಂಬೈನಲ್ಲಿ. ಮಾಸ್​ ಮೀಡಿಯಾ ಮುಗಿಸಿದ ಮೃನಾಲ್​, 2012ರಲ್ಲಿ ಟಿವಿ ಧಾರವಾಹಿ ಮುಜ್​ ಸೆ ಕುಚ್​ ಕೆಹೆತಿ ಯೆಹ್​ ಖಮೋಶಿಯಾನ್​ನಿಂದ ಬಣ್ಣದ ಜಗತ್ತಿಗೆ ಕಾಲಿಟ್ಟರು. ಬಳಿಕ ವಟ್ಟಿದಂಡು ಹೆಸರಿನ ಮರಾಠಿ ಸಿನಿಮಾ ಮೂಲಕ ನಾಯಕಿಯಾಗಿ ಬಡ್ತಿ ಪಡೆದರು. 2018ರಲ್ಲಿ ಲವ್​ ಸೋನಿಯಾ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು.

    ಆದರೆ, ಮೃನಾಲ್​ ಸಿನಿಮಾ ಕೆರಿಯರ್​ಗೆ ಮಹತ್ವದ ತಿರುವು ಕೊಟ್ಟಿದ್ದು ಮಾತ್ರ ಸೀತಾ ರಾಮಂ ಸಿನಿಮಾ. ಮೂಲ ತೆಲುಗು ಭಾಷೆಯಲ್ಲಿ ಬಿಡುಗಡೆಯಾದ ಈ ಸಿನಿಮಾ ಎಲ್ಲೆಡೆ ಸದ್ದು ಮಾಡಿತು. ಇದಾದ ಬಳಿಕ ಮೃನಾಲಲ್​ಗೆ ಎಲ್ಲಾ ಕಡೆ ಆಫರ್​ಗಳ ಹರಿದುಬರಲು ಆರಂಭವಾಯಿತು. ಇದೀಗ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ತುಂಬಾ ಬಿಜಿಯಾಗಿದ್ದಾರೆ. ಇತ್ತೀಚೆಗೆ ಮೃನಾಲ್​ ಅಭಿನಯದ ಹೈ ನಾನ್ನಾ ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಈ ಸಿನಿಮಾದಲ್ಲಿ ನಟ ನಾನಿಗೆ ಮೃನಾಲ್​ ನಾಯಕಿಯಾಗಿದ್ದಾರೆ. ಇದಲ್ಲದೆ, ವಿಜಯ್​ ದೇವರಕೊಂಡರ ಮುಂದಿನ ಸಿನಿಮಾಗೆ ಮೃನಾಲ್​ ನಾಯಕಿಯಾಗಿದ್ದಾರೆ. (ಏಜೆನ್ಸೀಸ್​)

    ನಾನಿದ್ದಕ್ಕೆ ಅಡಿಕ್ಟ್​ ಆಗಿದ್ದೆ ಆದ್ರೆ ಅದೊಂದನ್ನು ಮಾತ್ರ ಮುಟ್ಟಿಲ್ಲ! ಶ್ರುತಿ ಹಾಸನ್​ ಓಪನ್​ ಟಾಕ್​

    ರೂ 2,800 ಕೋಟಿಯ ರಾಕೆಟ್ ಲಾಂಚರ್‌ ಖರೀದಿಗೆ ರಕ್ಷಣಾ ಸಚಿವಾಲಯ ಅನುಮತಿ; ಈ ಷೇರುಗಳಿಗೆ ಸಿಗಲಿದೆ ಲಾಭ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts