More

    ಗಣ್ಯರ ಮಕ್ಕಳಿಗೆ ನಶೆಯ ಬಲೆ

    ಬೆಂಗಳೂರು: ಚಂದನವನದಲ್ಲಿ ಧೂಳೆಬ್ಬಿಸಿರುವ ಡ್ರಗ್ಸ್ ಮಾಫಿಯಾದ ಸುಳಿಯಲ್ಲಿ ನಟಿ ರಾಗಿಣಿ ದ್ವಿವೇದಿ ಬಳಿಕ ಮತ್ತೋರ್ವ ನಟಿ ಸಂಜನಾ ಗಲ್ರಾಣಿ ಕೂಡ ಸಿಕ್ಕಿಬಿದ್ದಿದ್ದಾರೆ. ಹಲವು ರಾಜಕಾರಣಿ – ಉದ್ಯಮಿಗಳ ಮಕ್ಕಳ ಜತೆಗೆ ಟೆಕ್ಕಿಗಳು ಹಾಗೂ ಶ್ರೀಮಂತರೂ ಕೂಡ ಮಾದಕ ಲೋಕದ ಬಲೆಗೆ ಸಿಲುಕಿರುವ ಸಂಗತಿ ತನಿಖೆಯಲ್ಲಿ ಬಯಲಾಗಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಮತ್ತೊಂದು ಸುತ್ತಿನ ಬೇಟೆಗೆ ಅಣಿಯಾಗಿದ್ದಾರೆ.

    ಯಾವ ಕಾಯ್ದೆಯಡಿ ಬಂಧನ? 

    * ಎನ್​ಡಿಪಿಎಸ್ ಕಾಯ್ದೆ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ ಕೇಸ್ ದಾಖಲು

    * ಸೆಕ್ಷನ್ 21: ಮಾದಕ ವಸ್ತು ತಯಾರಿಕೆ, ಮಾರಾಟ, ಸಾಗಾಟ ಅಪರಾಧ.

    * ಸೆಕ್ಷನ್ 21ಸಿ : ವಾಣಿಜ್ಯ ಉದ್ದೇಶಕ್ಕೆ ಡ್ರಗ್ಸ್ ಸಂಗ್ರಹ, ಮಾರಾಟ ನಿಷೇಧ, ಆರೋಪ ಸಾಬೀತಾದರೆ ಕನಿಷ್ಠ 10ರಿಂದ ಗರಿಷ್ಠ 20 ವರ್ಷದವರೆಗೆ ಜೈಲುವಾಸ, ಕನಿಷ್ಠ 1 ಲಕ್ಷ ರೂ.ನಿಂದ ಗರಿಷ್ಠ 2 ಲಕ್ಷ ರೂ.ವರೆಗೆ ದಂಡ

    * ಸೆಕ್ಷನ್ 27ಎ: ಮಾದಕ ವಸ್ತುಗಳಿಗೆ ಸಂಬಂಧಿಸಿ ಹಣಕಾಸು ನೆರವು. ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಮಾದಕ ವಸ್ತು ಸಾಗಣೆಗೆ ನೆರವಾಗುವುದು ಅಪರಾಧ

    * ಸೆಕ್ಷನ್27ಬಿ: ಡ್ರಗ್ಸ್ ಸೇವನೆ ಕೂಡ ಅಪರಾಧ. 6 ತಿಂಗಳು ಶಿಕ್ಷೆ, 10 ಸಾವಿರ ರೂ. ದಂಡ

    * ಸೆಕ್ಷನ್ 29: ಅಪರಾಧಿಕ ಒಳಸಂಚಿಗೆ ಸಹಾಯ. ಒಳಸಂಚಿಗೆ ವೇದಿಕೆ ಕಲ್ಪಿಸುವುದು ಕೂಡ ಶಿಕ್ಷಾರ್ಹ ಅಪರಾಧ ಹಾಗೂ ಐಪಿಸಿ 120ಬಿ ಅಪರಾಧಿಕ ಒಳಸಂಚು ಆಗಿದೆ.

    ಈಗಾಗಲೇ ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್​ನಲ್ಲಿ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ಸೇರಿ ಹಲವರ ಹೆಸರು ಉಲ್ಲೇಖವಾಗಿದೆ. ಇದೀಗ ಸಂಜನಾರನ್ನು 14ನೇ ಆರೋಪಿಯನ್ನಾಗಿಸಲಾಗಿದೆ. ಇದರಿಂದಾಗಿ ಒಟ್ಟು ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಸಿಸಿಬಿ ಕಾರ್ಯಾಚರಣೆ ಮುಂದುವರಿದಂತೆ ಎಫ್​ಐಆರ್ ಪಟ್ಟಿ ಕೂಡ ಮತ್ತಷ್ಟು ಬೆಳೆಯುವುದು ನಿಶ್ಚಿತ ಎನ್ನಲಾಗುತ್ತಿದೆ.

    ಇದನ್ನೂ ಓದಿ: ಐಪಿಎಲ್ ಶುರುವಾಗುವುದಕ್ಕೆ ಮುನ್ನವೇ ವಿಶೇಷ ದಾಖಲೆ ಬರೆದ ಮುಂಬೈ ಇಂಡಿಯನ್ಸ್!

    ಬಯಲಾಗಿದ್ದೇನು?

    ಮಾದಕ ತಾರೆಯರ ಜತೆಗೆ ಮಾದಕ ದ್ರವ್ಯ, ಮದ್ಯದ ಸೌಲಭ್ಯ ಕಲ್ಪಿಸಿ ಆಯೋಜಿಸಲಾಗುತ್ತಿದ್ದ ಪೇಜ್-3 ಪಾರ್ಟಿಗಳಿಗೆ ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು ಮತ್ತು ಶ್ರೀಮಂತರ ಮಕ್ಕಳಿಗೆ ಆಹ್ವಾನ ನೀಡಲಾಗುತ್ತಿತ್ತು. ಇದೀಗ ನಟಿಯರಾದ ರಾಗಿಣಿ ಮತ್ತು ಸಂಜನಾ ಬಂಧನವಾಗಿರುವುದರಿಂದ ಅವರ ಜತೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಸಿಸಿಬಿ ಕಂಟಕ ಎದುರಾಗಲಿದೆ.

    ಇದನ್ನೂ ಓದಿ: ಐಪಿಎಲ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಗಾಯಕ!

    ಮಾಹಿತಿ ಸಂಗ್ರಹ

    ಬಂಧಿತರ ನಟಿಯರು ಸಿಸಿಬಿ ಮತ್ತು ಕೋರ್ಟ್ ಮುಂದೆ ತಪ್ಪೊಪ್ಪಿಕೊಂಡು ಗಣ್ಯ ವ್ಯಕ್ತಿಗಳ ಹೆಸರು ಬಾಯ್ಬಿಡುವ ಸಾಧ್ಯತೆ ಹೆಚ್ಚಾಗಿದೆ. ಡ್ರಗ್ಸ್ ಕೇಸಿನಲ್ಲಿ ಮೊದಲ ಹಂತದಲ್ಲಿ ನಟಿ ರಾಗಿಣಿ ದ್ವಿವೇದಿ ಸಿಂಡಿಕೇಟ್​ನಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿಗಳನ್ನು ಮಾತ್ರ ಬಂಧಿಸಲಾಗಿದೆ. ಪಾರ್ಟಿ ಸಂಘಟಿಸುತ್ತಿದ್ದವರು, ಡ್ರಗ್ಸ್ ಪೂರೈಸುತ್ತಿದ್ದವರು, ಹಣ ತೆತ್ತು ಡ್ರಗ್ಸ್ ಸೇವಿಸುತ್ತಿದ್ದವರು ಹಾಗೂ ಮಾದಕ ತಾರೆಯರ ಸ್ನೇಹ ಬೆಳೆಸಲು ಪಾರ್ಟಿಗೆವ ಬರುತ್ತಿದ್ದವರ ವಿವರಗಳನ್ನೂ ಕಲೆಹಾಕಿದೆ. ಇದರ ಜತೆಗೆ ಸಂಜನಾ ಸಿಂಡಿಕೇಟ್​ನಲ್ಲಿ ಗುರುತಿಸಿಕೊಂಡಿರುವವರ ಬೇಟೆಯನ್ನೂ ಶೀಘ್ರದಲ್ಲೇ ಸಿಸಿಬಿ ಅಧಿಕಾರಿಗಳು ಶುರು ಮಾಡಲಿದ್ದಾರೆ.

    ಇದನ್ನೂ ಓದಿ: ಹೃದಯ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ಬಾದಾಮಿ ತಿನ್ಬೇಕಂತೆ…

    24 ಹೆಸರು ಬಾಯ್ಬಿಟ್ಟ ಗಲ್ರಾನಿ?

    ಸಂಜನಾ ವಿಚಾರಣೆ ವೇಳೆ ಮಾದಕ ಲೋಕದ ಮಾಫಿಯಾದ ಸಂಪರ್ಕ ಹೊಂದಿರುವ 24 ಮಂದಿಯ ಹೆಸರನ್ನು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಲ್ರಾನಿ ಹೇಳಿಕೆ ಜತೆಗೆ ಡಿಜಿಟಲ್ ಹಾಗೂ ಸಾಂರ್ದಭಿಕ ಸಾಕ್ಷ್ಯಾಧಾರವನ್ನು ಆಧರಿಸಿ ಸಿಸಿಬಿ ಅಧಿಕಾರಿಗಳು ಬಂಧನ ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ಗೊತ್ತಾಗಿದೆ.

    ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ: ನ್ಯಾಯಮೂರ್ತಿ ವಿ.ಪಾರ್ಥಿಬನ್ ಐತಿಹಾಸಿಕ ಆಬ್ಸರ್ವೇಶನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts