More

    ಕರೊನಾವನ್ನು ಮಣಿಸಿದ ಕುಸ್ತಿ ತಾರೆ ವಿನೇಶ್ ಪೋಗಟ್

    ನವದೆಹಲಿ: ಭಾರತದ ಅಗ್ರ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಕರೊನಾ ಸೋಂಕಿನಿಂದ ಮುಕ್ತರಾಗಿದ್ದಾರೆ. ಕಳೆದ ವಾರವಷ್ಟೇ ಪಾಸಿಟಿವ್ ಆಗಿದ್ದ ಅವರು ಈಗ ಕೋವಿಡ್-19 ಪರೀಕ್ಷೆಯಲ್ಲಿ 2 ಬಾರಿ ನೆಗೆಟಿವ್ ಆಗಿದ್ದಾರೆ. ಆದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಐಸೋಲೇಷನ್‌ನಲ್ಲೇ ಮುಂದುವರಿಯಲಿದ್ದಾರೆ.

    24 ವರ್ಷದ ವಿನೇಶ್ ಪೋಗಟ್ ಕಳೆದ ವಾರ ಪಾಸಿಟಿವ್ ವರದಿ ಬಂದ ಕಾರಣದಿಂದಾಗಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭದಿಂದ ಹೊರಗುಳಿದಿದ್ದರು. ಇದರಿಂದಾಗಿ ಅವರಿಗೆ ಆಗಸ್ಟ್ 29ರಂದು ರಾಷ್ಟ್ರಪತಿಯಿಂದ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್‌ರತ್ನ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

    ‘ನಾನು ಗುರುವಾರವಷ್ಟೇ 2ನೇ ಬಾರಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದೆ. ನೆಗೆಟಿವ್ ವರದಿ ಬಂದಿರುವುದು ನನಗೆ ಖುಷಿ ತಂದಿದೆ’ ಎಂದು ವಿನೇಶ್ ಟ್ವೀಟಿಸಿದ್ದಾರೆ. ಅವರು 2018ರ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಜಯಿಸಿದ್ದರು. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಅವರು ಪದಕ ಆಕಾಂಕ್ಷಿಯಾಗಿದ್ದಾರೆ.

    ಇದನ್ನೂ ಓದಿ: ಐಪಿಎಲ್‌ನಿಂದ ಹೊರಬಿದ್ದ ಲಸಿತ್ ಮಾಲಿಂಗ, ಆಸೀಸ್ ವೇಗಿಗೆ ಮುಂಬೈ ಇಂಡಿಯನ್ಸ್ ಬುಲಾವ್

    ಸದ್ಯ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿರುವ ಭಾರತದ ಏಕೈಕ ಮಹಿಳಾ ಕುಸ್ತಿಪಟು ಎನಿಸಿರುವ ವಿನೇಶ್, ಅವರ ಕೋಚ್ ಓಂ ಪ್ರಕಾಶ್ ದಹಿಯಾ ಕೂಡ ಪಾಸಿಟಿವ್ ಆಗಿದ್ದರು. ತರಬೇತಿಯ ವೇಳೆ ಸೋಂಕು ತಗುಲಿದ ಕಾರಣದಿಂದಾಗಿ ದಹಿಯಾ ಕೂಡ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

    ಟ್ರೆಕ್ಕಿಂಗ್‌ಗೆ ಹೋಗಿದ್ದ ಕ್ರಿಕೆಟಿಗ 250 ಅಡಿ ಎತ್ತರದಿಂದ ಬಿದ್ದು ಮೃತ್ಯು, ಮುಳುವಾಯಿತೇ ಸೆಲ್ಫಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts